ಆರೆಸ್ಸೆಸ್ ಶತಮಾನೋತ್ಸವದಲ್ಲಿ ಭಾರತ ಮಾತೆಯ ವಿನ್ಯಾಸವಿರುವ 100ರೂ. ನಾಣ್ಯ, ಅಂಚೆ ಚೀಟಿ ಬಿಡುಗಡೆ ಮಾಡಿದ ಪ್ರಧಾನಿ ಮೋದಿ
Photo Credit : ANI
ಹೊಸದಿಲ್ಲಿ : ಆರೆಸ್ಸೆಸ್‌ನ ಶತಮಾನೋತ್ಸವದ ಹಿನ್ನೆಲೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿಶೇಷ ಅಂಚೆ ಚೀಟಿ ಮತ್ತು ಭಾರತ ಮಾತೆಯ ವಿನ್ಯಾಸವಿರುವ 100ರೂ. ನಾಣ್ಯವನ್ನು ಬಿಡುಗಡೆ ಮಾಡಿದರು.
ದಿಲ್ಲಿಯ ಡಾ. ಅಂಬೇಡ್ಕರ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ನಡೆದ ಶತಮಾನೋತ್ಸವ ಕಾರ್ಯಕ್ರಮದಲ್ಲಿ 100 ರೂಪಾಯಿ ನಾಣ್ಯ ಬಿಡುಗಡೆ ಮಾಡಲಾಗಿದೆ. ನಾಣ್ಯದ ಒಂದು ಬದಿಯಲ್ಲಿ ರಾಷ್ಟ್ರೀಯ ಲಾಂಛನವಿದ್ದರೆ, ಇನ್ನೊಂದು ಬದಿಯಲ್ಲಿ ಸಿಂಹ ಮತ್ತು ಸ್ವಯಂಸೇವಕರು ಭಕ್ತಿಯಿಂದ ನಮಸ್ಕರಿಸುವ ಭಾರತ ಮಾತೆಯ ಚಿತ್ರವಿದೆ.
ಸ್ವತಂತ್ರ ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ ಭಾರತ ಮಾತೆಯ ಚಿತ್ರ ಭಾರತೀಯ ಕರೆನ್ಸಿಯಲ್ಲಿ ಕಾಣಿಸಿಕೊಂಡಿದೆ. ಈ ಕ್ಷಣವನ್ನು ಭಾರತ ಮಾತೆಗೆ ಹೆಮ್ಮೆಯ ಗೌರವ ಎಂದು ಮೋದಿ ಹೇಳಿದ್ದಾರೆ.
ಈ ನಾಣ್ಯದ ಮೇಲೆ ʼರಾಷ್ಟ್ರಾಯ ಸ್ವಾಹಾ, ಇದಂ ರಾಷ್ಟ್ರಾಯ ಇದಂ ನ ಮಮʼ ಎಂಬ ಆರೆಸ್ಸೆಸ್ ಧ್ಯೇಯವಾಕ್ಯವು ಇದೆ.
ಅಂಚೆ ಚೀಟಿಯು 1963ರ ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ಆರೆಸ್ಸೆಸ್ ಸ್ವಯಂಸೇವಕರ ದೇಶಭಕ್ತಿಯ ಭಾಗವಹಿಸುವಿಕೆಯನ್ನು ಸ್ಮರಿಸುತ್ತದೆ. ಈ ಅಂಚೆ ಚೀಟಿಯು ಆ ಐತಿಹಾಸಿಕ ಕ್ಷಣವನ್ನು ಗೌರವಿಸುತ್ತದೆ.