ಭಾರತದ ಶೇ. 50 ಬಡವರಿಂದ 2/3 ಜಿಎಸ್ಟಿ ಪಾವತಿ: ಆಕ್ಸ್ಫಾಮ್
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ, ಫೆ. 13: ಬೆರಳೆಣಿಕೆಯ ಭಾರತೀಯರು ಮಾತ್ರ ತೆರಿಗೆ ಪಾವತಿಸುತ್ತಾರೆ ಎಂಬ ಜನಪ್ರಿಯ ನಿರೂಪಣೆಗೆ ವ್ಯತಿರಿಕ್ತವಾಗಿ ಆಕ್ಸ್ಫಾಮ್ನ ಇತ್ತೀಚೆಗಿನ ವರದಿ ‘‘ಸರ್ವೈವಲ್ ಆಫ್ ದಿ ರಿಚ್ಚೆಸ್ಟ್: ದಿ ಇಂಡಿಯಾ ಸ್ಟೋರಿ’’ ಈ ವಿಷಯದ ಬಗ್ಗೆ ಸಂಪೂರ್ಣ ಭಿನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.
ಜನಸಂಖ್ಯೆಯ ಶೇ. 50 ಬಡವರ್ಗ ಹೆಚ್ಚಿನ ಪರೋಕ್ಷ ತೆರಿಗೆಗಳನ್ನು ಅಥವಾ ಬಳಕೆಗೆ ಸಂಬಂಧಿಸಿದ ತೆರಿಗೆಗಳನ್ನು ಪಾವತಿಸುತ್ತಾರೆ ಎಂಬುದನ್ನು ವರದಿ ತೋರಿಸಿದೆ.
ವರದಿಯ ಪ್ರಕಾರ ಒಟ್ಟು ಜಿಎಸ್ಟಿಯಲ್ಲಿ ದೇಶದ ಜನಸಂಖ್ಯೆಯ ಶೇ. 50 ಬಡವರ್ಗದಿಂದ ಮೂರನೇ ಒಂದು ಎರಡು (ಶೇ. 64.3)ಕ್ಕಿಂತ ಸ್ಪಲ್ಪ ಕಡಿಮೆ, ಶೇ. 40 ಮಧ್ಯಮ ವರ್ಗದಿಂದ ಮೂರನೇ ಒಂದು ಭಾಗ ಹಾಗೂ ಶೇ. 10 ಶ್ರೀಮಂತ ವರ್ಗದಿಂದ ಕೇವಲ ಶೇ. 3-4 ಬರುತ್ತದೆ.
2021-22ರಲ್ಲಿ ಒಟ್ಟು (ಕೇಂದ್ರ ಹಾಗೂ ರಾಜ್ಯಗಳಿಂದ) 14.7 ಲಕ್ಷ ಕೋ.ರೂ. ಜಿಎಸ್ಟಿ ಸಂಗ್ರಹಿಸಲಾಗಿತ್ತು. 2022-23ರಲ್ಲಿ ಈ ಜಿಎಸ್ಟಿ ಸಂಗ್ರಹ 18 ಲಕ್ಷ ಕೋಟಿ ರೂ.ಗೆ ತಲುಪಿದೆ.
ವರದಿ ಪ್ರಕಾರ ಶೇ. 40 ಮಧ್ಯಮವರ್ಗದವರು ಹಾಗೂ ಶೇ. 10 ಶ್ರೀಮಂತ ವರ್ಗದವರು ತಮ್ಮ ಆದಾಯದಿಂದ ಪರೋಕ್ಷ ತೆರಿಗೆಗಳ ಮೇಲೆ ಮಾಡುವ ಒಟ್ಟು ವೆಚ್ಚಕ್ಕಿಂತ ಹೆಚ್ಚು ಶೇ. 50 ಬಡವರ್ಗದವರು ತಮ್ಮ ಆದಾಯವನ್ನು ವೆಚ್ಚ ಮಾಡುತ್ತಾರೆ. ಅಖಿಲ ಭಾರತ ಮಟ್ಟದಲ್ಲಿ ಶೇ. 10 ಶ್ರೀಮಂತ ವರ್ಗದವರು ತಮ್ಮ ಆದಾಯದಿಂದ ಪರೋಕ್ಷ ತೆರಿಗೆಗಳ ಮಾಡುವ ವೆಚ್ಚಕ್ಕೆ ಹೋಲಿಸಿದರೆ ಶೇ. 50 ಬಡವರ್ಗದವರು ತಮ್ಮ ಆದಾಯದಿಂದ ಪರೋಕ್ಷ ತೆರಿಗೆಗಳ ಮೇಲೆ ಮಾಡುವ ವೆಚ್ಚ 6 ಪಟ್ಟು ಹೆಚ್ಚು.
ಶೇ. 50 ಬಡ ವರ್ಗದವರು ತಮ್ಮ ಆದಾಯದ ಶೇ. 6.7 ಅನ್ನು ಆಯ್ಕೆಯ ಆಹಾರ ಹಾಗೂ ಆಹಾರೇತರ ವಸ್ತುಗಳ ಮೇಲೆ ವೆಚ್ಚ ಮಾಡುತ್ತಾರೆ. ಶೇ. 40 ಮಧ್ಯಮವರ್ಗದವರು ತಮ್ಮ ಆದಾಯದ ಶೇ. 3.3 ಅನ್ನು ಆಹಾರ ಹಾಗೂ ಆಹಾರೇತರ ವಸ್ತುಗಳ ಮೇಲೆ ವೆಚ್ಚ ಮಾಡುತ್ತಾರೆ. ಶೇ. 10 ಶ್ರೀಮಂತ ವರ್ಗದವರು ತಮ್ಮ ಆದಾಯದ ಕೇವಲ ಶೇ. 0.4 ಅನ್ನು ಮಾತ್ರ ಈ ವಸ್ತುಗಳ ಮೇಲೆ ವೆಚ್ಚ ಮಾಡುತ್ತಾರೆ ಎಂದು ವರದಿ ಹೇಳಿದೆ.