×
Ad

ಪುಣೆ, ಪಿಂಪ್ರಿ-ಚಿಂಚವಾಡ್‌ ನಲ್ಲಿ ಅಧಿಕಾರದತ್ತ ಬಿಜೆಪಿ: ಪವಾರ್ ಕುಟುಂಬಕ್ಕೆ ಹಿನ್ನಡೆ

Update: 2026-01-16 18:19 IST

ಅಜಿತ್ ಪವಾರ್ , ಶರದ್ ಪವಾರ್ | Photo Credit ; PTI 

ಪುಣೆ: ಶರದ್ ಪವಾರ್-ಅಜಿತ್ ಪವಾರ್ ಕುಟುಂಬದ ಒಗ್ಗೂಡುವಿಕೆಯ ಹೊರತಾಗಿಯೂ ಪುಣೆ ಮತ್ತು ಪಿಂಪ್ರಿ-ಚಿಂಚವಾಡ್‌ ನಗರಸಭೆ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಿದೆ. ಈ ಎರಡೂ ನಗರಗಳಲ್ಲಿ ಬಿಜೆಪಿ ಭಾರಿ ಮುನ್ನಡೆ ಸಾಧಿಸಿದೆ.

ಇತ್ತೀಚಿನ ಟ್ರೆಂಡ್‌ಗಳ ಪ್ರಕಾರ, ಪುಣೆಯಲ್ಲಿ ಬಿಜೆಪಿ 80 ವಾರ್ಡ್‌ಗಳಲ್ಲಿ ಮುನ್ನಡೆ ಸಾಧಿಸಿದೆ. ಪವಾರ್‌ ಮೈತ್ರಿಕೂಟದ ಭಾಗವಾದ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಕೇವಲ ಆರು ವಾರ್ಡ್‌ಗಳಲ್ಲಿ ಮಾತ್ರ ಮುನ್ನಡೆ ಸಾಧಿಸಿದರೆ, ಶರದ್ ಪವಾರ್ ನೇತೃತ್ವದ ಎನ್‌ಸಿಪಿ ಮೂರು ವಾರ್ಡ್‌ಗಳಲ್ಲಿ ಮುನ್ನಡೆ ಸಾಧಿಸಿದೆ. ಮೂರು ವಾರ್ಡ್‌ಗಳಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ. ಉದ್ಧವ್ ಅವರ ಶಿವಸೇನೆ ಮತ್ತು ರಾಜ್ ಅವರ ಎಂಎನ್ಎಸ್ ಮೈತ್ರಿ ಮಾಡಿಕೊಂಡಿದ್ದು, ಯಾವುದೇ ವಾರ್ಡ್‌ಗಳಲ್ಲಿ ಮುನ್ನಡೆ ಸಾಧಿಸಿಲ್ಲ.

ಪಿಂಪ್ರಿ-ಚಿಂಚವಾಡ್ ಮುನ್ಸಿಪಲ್ ಕಾರ್ಪೋರೇಶನ್ 2017ರಿಂದ ಶರದ್ ಪವಾರ್ ಅವರ ಎನ್ ಸಿಪಿ ಹಿಡಿತದಲ್ಲಿತ್ತು. ಆದರೆ ಈ ಚುನಾವಣೆಯಲ್ಲಿ ಪವಾರ್ ಅವರಿಗೆ ಹಿನ್ನಡೆಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News