×
Ad

22 ಮಂದಿಯ 16 ಲಕ್ಷ ಕೋಟಿ ಸಾಲ ಮನ್ನಾ ಮಾಡಿದರೂ ಹಿಮಾಚಲದ ಮುಂಗಾರು ವಿಕೋಪಕ್ಕೆ 9 ಸಾವಿರ ಕೋಟಿ ನೀಡದ ಪ್ರಧಾನಿ : ರಾಹುಲ್ ಗಾಂಧಿ

Update: 2024-05-26 22:01 IST

 ರಾಹುಲ್ ಗಾಂಧಿ | PTI 

ಶಿಮ್ಲಾ: ಕಳೆದ ಹತ್ತು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರು 22 ಮಂದಿಯ 16 ಲಕ್ಷ ಕೋಟಿ ರೂ. ಸಾಲವನ್ನು ಮನ್ನಾ ಮಾಡಿದ್ದಾರೆ. ಆದರೆ ಕಳೆದ ವರ್ಷ ಹಿಮಾಚಲ ಪ್ರದೇಶದಲ್ಲಿ ಮುಂಗಾರು ಮಳೆಯ ಸಂದರ್ಭ ಸಂಭವಿಸಿದ ಭೂಕುಸಿತ ಮತ್ತಿತರ ಪ್ರಾಕೃತಿಕ ದುರಂತಗಳ ನಿಭಾಯಿಸಲು 9 ಸಾವಿರ ಕೋಟಿ ರೂ.ಗಳನ್ನು ನೀಡಲು ಅವರಿಗೆ ಸಾಧ್ಯವಾಗಲಿಲ್ಲವೆಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ರವಿವಾರ ತಿಳಿಸಿದ್ದಾರೆ.

ಪರ್ವತರಾಜ್ಯವಾದ ಹಿಮಾಚಲಪ್ರದೇಶಕ್ಕೆ ಮಳೆ ದುರಂತದ ಸಂದರ್ಭ ನೆರವಾಗುವ ಬದಲು, ಮೋದಿಯವರು ರಾಜ್ಯದ ಚುನಾಯಿತ ಸರಕಾರವನ್ನು ಕದಿಯುವ ಪ್ರಯತ್ನ ಮಾಡಿದರು ಎಂದು ರಾಹುಲ್ ಆಪಾದಿಸಿದರು.

ಹಿಮಾಚಲಪ್ರದೇಶದ ಕಾಂಗ್ರೆಸ್ ರಕಾರವು ಕೇಂದ್ರ ಸರಕಾರವು ನೀಡಿದ ನೆರೆಪರಿಹಾರ ನಿಧಿಯನ್ನು ತಪ್ಪಾಗಿ ವಿತರಣೆ ಮಾಡಿದೆ ಎಂದು ಪ್ರಧಾನಿ ಮೋದಿ ಆಪಾದಿಸಿದರು.

ಹಿಮಾಚಲ ಪ್ರದೇಶದ ಸಿರ್ಮಾವುರ್ ಜಿಲ್ಲೆಯ ನಹಾನ್‌ನಲ್ಲಿ ಶಿಮ್ಲಾ (ಪರಿಶಿಷ್ಟ ಮೀಸಲು) ಲೋಕಸಭಾ ಕ್ಷೇತ್ರದ ಅಭ್ಯರ್ಥಿ ವಿನೋದ್ ಸುಲ್ತಾನಂಪುರಿ ಪರ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಮಾತನಾಡಿದ ಅವರು, ಆ್ಯಪಲ್‌ನ ದರವನ್ನು ನಿಯಂತ್ರಿಸುವುದಕ್ಕಾಗಿ ಎಲ್ಲಾ ದಾಸ್ತಾನು ಸ್ಥಾವರಗಳನ್ನು ಮೋದಿ ಓರ್ವ ವ್ಯಕ್ತಿಗೆ ಹಸ್ತಾಂತರಿಸಿದ್ದಾನೆಂದು ಹೇಳಿದರು.

ನರೇಂದ್ರ ಮೋದಿಯವರು ಪ್ರಮಾಣವಚನ ಸ್ವೀಕರಿಸಿದಾಗಲೆಲ್ಲಾ ಆದಾನಿಯವರ ಕಂಪೆನಿಗಳ ಶೇರುಗಳ ಮೌಲ್ಯ ಹೆಚ್ಚುತ್ತದೆ ಎಂದವರು ಟೀಕಿಸಿದರು.

ಒಂದು ವೇಳೆ ತನ್ನ ಪಕ್ಷವು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಲ್ಲಿ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಹಾಗೂ ರೈತ ಸಾಲ ಮನ್ನಾದ ಭರವಸೆಯನ್ನು ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News