×
Ad

ಗೋವಾದಲ್ಲಿ ನ್ಯಾಶನಲ್ ಗೇಮ್ಸ್ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ

Update: 2023-10-26 23:40 IST

ಪಣಜಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಗುರುವಾರ ಗೋವಾದಲ್ಲಿ 37ನೇ ಆವೃತ್ತಿಯ ನ್ಯಾಶನಲ್ ಗೇಮ್ಸ್ ಅನ್ನು ಉದ್ಘಾಟಿಸಿದರು.

ಈ ಕ್ರೀಡಾಕೂಟ ದಕ್ಷಿಣ ಗೋವಾದ ಫಟ್ರೋಡಾದಲ್ಲಿರುವ ಜವಾಹರ್‌ಲಾಲ್ ನೆಹರೂ ಸ್ಟೇಡಿಯಮ್‌ನಲ್ಲಿ ನಡೆಯಲಿದೆ.

ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ರಾಜ್ಯ ಸಂಸ್ಕೃತಿ ಹಾಗೂ ಗುರುತಿನ ಪ್ರತೀಕವಾದ ಕುಂಬಿ ಶಾಲನ್ನು ಹೊದಿಸಿ ಪ್ರಧಾನಿಯವರನ್ನು ಗೌರವಿಸಿದರು.

ನ್ಯಾಶನಲ್ ಗೇಮ್ಸ್ ಗೋವಾದಲ್ಲಿ ಇದೇ ಮೊದಲ ಬಾರಿ ನಡೆಯುತ್ತಿದೆ. ಗೇಮ್ಸ್ ಅ.26ರಿಂದ ನ.9ರ ತನಕ ನಡೆಯಲಿದ್ದು, ದೇಶಾದ್ಯಂತದ 10,000ಕ್ಕೂ ಅಧಿಕ ಕ್ರೀಡಾಳುಗಳು 28 ಸ್ಥಳಗಳಲ್ಲಿ 43 ಕ್ರೀಡೆಗಳಲ್ಲಿ ಸ್ಪರ್ಧಿಸಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News