×
Ad

ಫೆಲಸ್ತೀನ್ ಪರ ಭಾಷಣ: ಎಂಐಟಿ ಪದವಿ ಪ್ರದಾನ ಸಮಾರಂಭಕ್ಕೆ ಮೇಘಾ ವೇಮುರಿಗೆ ನಿಷೇಧ

Update: 2025-06-01 08:05 IST

PC: MIT/YouTube

ನ್ಯೂಯಾರ್ಕ್: ಮೇ 29ರಂದು ನಡೆದ ಸಮಾರಂಭವೊಂದರಲ್ಲಿ  ಫೆಲಸ್ತೀನ್ ಪರ ಭಾಷಣ ಮಾಡಿದ ಆರೋಪದಲ್ಲಿ ಭಾರತೀಯ ಮೂಲದ ವಿದ್ಯಾರ್ಥಿ ನಾಯಕಿ ಮೇಘಾ ವೇಮುರಿಯವರನ್ನು ಈ ಬಾರಿಯ ಪದವಿ ಪ್ರದಾನ ಸಮಾರಂಭಕ್ಕೆ ಹಾಜರಾಗದಂತೆ ನಿಷೇಧ ವಿಧಿಸಲಾಗಿದೆ. ಮೇಘಾ 2025ನೇ ಬ್ಯಾಚ್ ನ ವಿದಾರ್ಥಿ ನಾಯಕಿ.

ಸಮಾರಂಭದ ಮಾರ್ಷಲ್ ಕಾರ್ಯವನ್ನು ನಿರ್ವಹಿಸಬೇಕಿದ್ದ ಮೇಘಾ ಹಾಗೂ ಆಕೆಯ ಕುಟುಂಬ ಸದಸ್ಯರನ್ನು ಕಾಲೇಜು ಕ್ಯಾಂಪಸ್ ನೊಳಗೆ ಪ್ರವೇಶಿಸದಂತೆ ನಿಷೇಧ ವಿಧಿಸಲಾಗಿದೆ ಎಂದು ಮೆಸಾಚುಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ) ಪ್ರಕಟಣೆ ಹೇಳಿದೆ.

ಚಾನ್ಸ್ಲರ್ ನೋಬಲ್ ಬೋಸ್ಟನ್ ಗ್ಲೋಬ್ ಅವರು ಮೇಘಾಗೆ ಇ-ಮೇಲ್ ಮಾಹಿತಿ ನೀಡಿ, "ನೀವು ಉದ್ದೇಶಪೂರ್ವಕವಾಗಿ ಮತ್ತು ಪದೇ ಪದೇ ಪದವಿ ಪ್ರದಾನ ಸಮಾರಂಭದ ಸಂಯೋಜಕರ ದಿಕ್ಕು ತಪ್ಪಿಸಿದ್ದೀರಿ. ನಿಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ನಾವು ಒಪ್ಪಿಕೊಳ್ಳುತ್ತೇವೆಯಾದರೂ, ವೇದಿಕೆಯಿಂದ ಪ್ರತಿಭಟನೆ ವ್ಯಕ್ತಪಡಿಸುವ ನಿಮ್ಮ ನಿರ್ಧಾರ ಸಂಸ್ಥೆಯ ಮಹತ್ವದ ಸಮಾರಂಭವನ್ನು ಹಾಳು ಮಾಡಲಿದೆ. ಇದು ಕ್ಯಾಂಪಸ್ ಅಭಿವ್ಯಕ್ತಿಗಾಗಿ ಇರುವ ಎಂಐಟಿಯ ಟೈಮ್, ಪ್ಲೇಸ್ ಅಂಡ್ ಮ್ಯಾನರ್ ನಿಯಮಾವಳಿಯ ಉಲ್ಲಂಘನೆ" ಎಂದು ಸ್ಪಷ್ಟಪಡಿಸಿದ್ದಾರೆ.

ಪ್ಯಾಲೆಸ್ತೀನ್ ಪರ ಬೆಂಬಲವನ್ನು ಸಾಂಕೇತಿಸುವ ಕೆಂಪು ಶಿರವಸ್ತ್ರ ಧರಿಸಿದ್ದ ವೆಮುರಿ, ಗಾಝಾದಲ್ಲಿ ಇಸ್ರೇಲ್ ಕ್ರಮಗಳನ್ನು ಮತ್ತು ಆ ದೇಶದ ಜತೆಗೆ ಎಂಐಟಿ ಹೊಂದಿರುವ ಸಂಶೋಧನಾ ಒಪ್ಪಂದವನ್ನು ಕಟುವಾಗಿ ಟೀಕಿಸಿದ್ದರು. ತಮ್ಮ ಜತೆ ಪದವಿ ಪಡೆಯುವ ಪದವೀಧರರು ಈ ನಿಲುವನ್ನು ತಾಳುವಂತೆ ಕರೆ ನೀಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News