×
Ad

ಬಡವರು ಮೃತಪಟ್ಟಾಗ ಪ್ರಧಾನಿ ಮೌನ: ರಾಹುಲ್ ಗಾಂಧಿ

Update: 2026-01-02 22:19 IST

ರಾಹುಲ್ ಗಾಂಧಿ | Photo Credit: PTI  

ಇಂದೋರ್, ಜ. 2: ಇಂದೋರ್‌ನಲ್ಲಿ ಕಲುಷಿತ ನೀರು ಸೇವಿಸಿ 10 ಮಂದಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಧ್ಯಪ್ರದೇಶದ ಬಿಜೆಪಿ ನೇತೃತ್ವದ ಸರಕಾರವನ್ನು ಶುಕ್ರವಾರ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಬಡವರು ಸಾವನ್ನಪ್ಪಿದಾಗ ಪ್ರಧಾನಿ ನರೇಂದ್ರ ಮೋದಿ ಮೌನ ವಹಿಸುತ್ತಾರೆ ಎಂದು ಅವರು ಆರೋಪಿಸಿದರು.

ಮಧ್ಯಪ್ರದೇಶ ದುರಾಡಳಿತದ ಕೇಂದ್ರಬಿಂದು ಆಗಿದೆ ಎಂದು ರಾಹುಲ್ ಗಾಂಧಿ ಹೇಳಿದ್ದು, ಕೆಮ್ಮಿನ ಸಿರಪ್ ಪ್ರಕರಣ, ಸರಕಾರಿ ಆಸ್ಪತ್ರೆಗಳ ನೈರ್ಮಲ್ಯ ಕೊರತೆ ಮತ್ತು ಈಗ ಕಲುಷಿತ ನೀರಿನಿಂದಾದ ಸಾವುಗಳನ್ನು ಉದಾಹರಿಸಿದರು.

‘‘ಇಂದೋರ್‌ನಲ್ಲಿ ನೀರಲ್ಲ, ವಿಷವನ್ನೇ ಪೂರೈಕೆ ಮಾಡಲಾಯಿತು. ಆಡಳಿತ ಗಾಢ ನಿದ್ರೆಯಲ್ಲಿತ್ತು,’’ ಎಂದು ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.

‘‘ಪ್ರತಿಯೊಂದು ಮನೆಯಲ್ಲೂ ಶೋಕವಿದೆ. ಬಡವರು ಅಸಹಾಯಕರಾಗಿದ್ದಾರೆ. ಈ ನಡುವೆ ಬಿಜೆಪಿ ನಾಯಕರು ದುರಹಂಕಾರದ ಹೇಳಿಕೆ ನೀಡಿದ್ದಾರೆ. ಜನರಿಗೆ ಸಾಂತ್ವನ ಅಗತ್ಯವಿತ್ತು. ಆದರೆ ಸರಕಾರ ಅಹಂಕಾರದಿಂದ ಪ್ರತಿಕ್ರಿಯಿಸಿತು,’’ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News