×
Ad

ಉತ್ತರಪ್ರದೇಶ | ಹಿಂಸಾಚಾರ ಪೀಡಿತ ಸಂಭಲ್ ಗೆ ತೆರಳದಂತೆ ರಾಹುಲ್, ಪ್ರಿಯಾಂಕಾಗೆ ಗಾಝಿಪುರ ಗಡಿಯಲ್ಲಿ ತಡೆ

Update: 2024-12-04 11:37 IST

Screengrab: X/@PTI_News

ಹೊಸದಿಲ್ಲಿ: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ವಯನಾಡ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಕಾಂಗ್ರೆಸ್ ನಾಯಕರು ಹಿಂಸಾಚಾರ ಪೀಡಿತ ಸಂಭಲ್ ಗೆ ತೆರಳುವಾಗ ಅವರನ್ನು ದಿಲ್ಲಿ-ಮೀರತ್ ರಾಷ್ಟ್ರೀಯ ಹೆದ್ದಾರಿಯ ಗಾಝಿಪುರ ಗಡಿಯಲ್ಲಿ ತಡೆದಿದ್ದಾರೆ ಎಂದು ವರದಿಯಾಗಿದೆ.

ಈ ಕುರಿತು ಪಿಟಿಐ ಜೊತೆ ಮಾತನಾಡಿದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಸಂಭಲ್‌ ನಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರುವ ಕಾರಣ, ಸಂಭಲ್ ಜಿಲ್ಲೆಗೆ ಹೋಗುದಂತೆ ಉತ್ತರ ಪ್ರದೇಶದ ಗಡಿಯಲ್ಲಿ ಅವರನ್ನು ತಡೆಯಲಾಗುವುದು ಎಂದು ಹೇಳಿದ್ದರು.

ನಾವು ರಾಹುಲ್ ಗಾಂಧಿಯವರನ್ನು ಸಂಭಲ್ ಗೆ ತೆರಳಲು ಅನುಮತಿಸುವುದಿಲ್ಲ. ಏಕೆಂದರೆ ಅಲ್ಲಿ ಜಿಲ್ಲಾಡಳಿತವು ನಿಷೇಧಾಜ್ಞೆಗಳನ್ನು ವಿಧಿಸಿದೆ. ಉತ್ತರ ಪ್ರದೇಶದ ಗಡಿಯಲ್ಲಿ ಪೊಲೀಸರು ಅವರನ್ನು ತಡೆಯಲಿದ್ದಾರೆ. ಸ್ಥಳದಲ್ಲಿ ಸಾಕಷ್ಟು ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ ಎಂದು ಗಾಝಿಯಾಬಾದ್ ಪೊಲೀಸ್ ಆಯುಕ್ತ ಅಜಯ್ ಕುಮಾರ್ ಮಿಶ್ರಾ ಹೇಳಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News