×
Ad

"ಧೈರ್ಯದಿಂದ ಪ್ರತಿಕ್ರಿಯಿಸಿ" : ಭಾರತ-ಪಾಕ್ ನಡುವಿನ ಸಂಘರ್ಷ ನಿಲ್ಲಿಸಿದ್ದು ನಾನೇ ಎಂದು ಟ್ರಂಪ್ ಪುನರುಚ್ಚರಿಸಿದ ಬೆನ್ನಲ್ಲೆ ಮೋದಿಗೆ ರಾಹುಲ್ ಗಾಂಧಿ ಆಗ್ರಹ

Update: 2025-10-29 17:02 IST

ನರೇಂದ್ರ ಮೋದಿ , ಡೊನಾಲ್ಡ್ ಟ್ರಂಪ್ , ರಾಹುಲ್ ಗಾಂಧಿ | Photo Credit : PTI 

ಹೊಸದಿಲ್ಲಿ : ಭಾರತ-ಪಾಕಿಸ್ತಾನ ನಡುವಿನ ಸಂಘರ್ಷವನ್ನು ನಿಲ್ಲಿಸಿದ್ದು ನಾನೇ ಎಂದು ಟ್ರಂಪ್ ಪುನರುಚ್ಚರಿಸಿದ ಬೆನ್ನಲ್ಲೇ, ಈ ಕುರಿತು ಧೈರ್ಯದಿಂದ ಪ್ರತಿಕ್ರಿಯಿಸಿ ಎಂದು ಪ್ರಧಾನಿ ಮೋದಿಗೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ.

ಈ ಕುರಿತು ಫೇಸ್ ಬುಕ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, ಟ್ರಂಪ್ ಒಂದರ ನಂತರ ಒಂದು ದೇಶಗಳಿಗೆ ಹೋಗಿ ಮೋದಿಯನ್ನು ಅವಮಾನಿಸುತ್ತಿದ್ದಾರೆ. ಅದರಲ್ಲಿ ಇತ್ತೀಚಿನದು ದಕ್ಷಿಣ ಕೊರಿಯಾ. ಆಪರೇಷನ್ ಸಿಂಧೂರ್ ಕಾರ್ಯಾಚರಣೆ ನಿಲ್ಲಿಸುವಂತೆ ಮೋದಿಯನ್ನು ಹೆದರಿಸಲು ವ್ಯಾಪಾರ ಮಾರ್ಗವನ್ನು ಬಳಸಿರುವುದಾಗಿ ಅವರು ಪುನರುಚ್ಚರಿಸಿದ್ದಾರೆ. 7 ವಿಮಾನಗಳನ್ನು ಹೊಡೆದುರುಳಿಸಲಾಗಿದೆ ಎಂದು ಹೇಳಿದ್ದಾರೆ. ಭಯಪಡಬೇಡಿ ಮೋದಿ ಜಿ, ಈ ಕುರಿತು ಧೈರ್ಯದಿಂದ ಪ್ರತಿಕ್ರಿಯಿಸಿ ಎಂದು ಹೇಳಿದರು.

ಮಂಗಳವಾರ ಟೋಕಿಯೊದಲ್ಲಿ ಉದ್ಯಮಿಗಳೊಂದಿಗೆ ನಡೆದ ಭೋಜನಕೂಟದಲ್ಲಿ ಮಾತನಾಡಿದ ಟ್ರಂಪ್, ಏಳು ಹೊಚ್ಚ ಹೊಸ, ಸುಂದರವಾದ ವಿಮಾನಗಳನ್ನು ಹೊಡೆದುರುಳಿಸಲಾಗಿತ್ತು. ಎರಡು ಪರಮಾಣು ಶಕ್ತಿ ರಾಷ್ಟ್ರಗಳ ನಡುವಿನ ಸಂಘರ್ಷವನ್ನು ಬಗೆಹರಿಸಿದ್ದು ನಾನೇ ಎಂದು ಹೇಳಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News