ರಾಜ್ಯಸಭಾ ಚುನಾವಣೆ | ಅಭಿಷೇಕ್ ಮನು ಸಿಂಘ್ವಿ ಸಹಿತ 6 ಅಭ್ಯರ್ಥಿಗಳನ್ನು ಘೋಷಿಸಿದ ಕಾಂಗ್ರೆಸ್
Update: 2026-03-05 11:27 IST
Photo | PTI
ಹೊಸದಿಲ್ಲಿ: ಮುಂಬರುವ ರಾಜ್ಯಸಭಾ ಚುನಾವಣೆಗೆ ಕಾಂಗ್ರೆಸ್ ಗುರುವಾರ 6 ಅಭ್ಯರ್ಥಿಗಳ ಹೆಸರನ್ನು ಘೋಷಿಸಿದೆ.
ತೆಲಂಗಾಣದಿಂದ ಅಭಿಷೇಕ್ ಮನು ಸಿಂಘ್ವಿ ಹಾಗೂ ವೆಮ್ ನರೇಂದ್ರ ರೆಡ್ಡಿ, ಛತ್ತೀಸಗಢದಿಂದ ಫೂಲವ್ ದೇವಿ ನೇಟಂ, ಹರ್ಯಾಣದಿಂದ ಕರಮ್‌ವೀರ್ ಸಿಂಗ್ ಬೌದ್ಧ್, ಹಿಮಾಚಲ ಪ್ರದೇಶದಿಂದ ಅನುರಾಗ್ ಶರ್ಮಾ, ತಮಿಳುನಾಡಿನಿಂದ ಎಂ.ಕ್ರಿಸ್ಟೊಫರ್ ತಿಲಕ್ ಅವರನ್ನು ಅಭ್ಯರ್ಥಿಗಳಾಗಿ ಕಾಂಗ್ರೆಸ್ ಕಣಕ್ಕಿಳಿಸಿದೆ.
ಮಾರ್ಚ್ 16ರಂದು ರಾಜ್ಯಸಭಾ ಚುನಾವಣೆಗೆ ಮತದಾನ ನಡೆಯಲಿದೆ.
ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರ ಆಪ್ತ ವೆಮ್ ನರೇಂದರ್ ರೆಡ್ಡಿ, ರಾಜ್ಯಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಿದ್ದಕ್ಕೆ ಕಾಂಗ್ರೆಸ್ ಹೈಕಮಾಂಡ್‌ಗೆ ಕೃತಜ್ಞತೆ ಸಲ್ಲಿಸಿದ್ದಾರೆ.