×
Ad

ರೆಪೊ ದರ ಯಥಾಸ್ಥಿತಿಯಲ್ಲಿ ಮುಂದುವರಿಕೆ : ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ

Update: 2025-10-01 11:18 IST

ಸಂಜಯ್ ಮಲ್ಹೋತ್ರಾ | PC : X

ಹೊಸದಿಲ್ಲಿ : ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಬುಧವಾರ ರೆಪೊ ದರವನ್ನು 5.5% ಯಥಾಸ್ಥಿತಿಯಲ್ಲಿ ಮುಂದುವರಿಕೆಗೆ ನಿರ್ಧರಿಸಿದೆ.

ಗವರ್ನರ್ ಸಂಜಯ್ ಮಲ್ಹೋತ್ರಾ ನೇತೃತ್ವದಲ್ಲಿ ನಡೆದ ಹಣಕಾಸು ನೀತಿ ಸಮಿತಿಯ (MPC) ಮೂರು ದಿನಗಳ ಸಭೆ ಮುಕ್ತಾಯಗೊಂಡಿದೆ. ಸಭೆಯಲ್ಲಿ ರೆಪೊ ದರದಲ್ಲಿ ಯಾವುದೇ ಬದಲಾವಣೆ ಮಾಡದೆ ಮುಂದುವರಿಸಲು ನಿರ್ಧರಿಸಲಾಗಿದೆ.

ಆರ್ಥಿಕ ಪರಿಸ್ಥಿತಿಗಳು ಮತ್ತು ಭವಿಷ್ಯದ ಸ್ಥಿತಿಗತಿಗಳ ಪರಿಶೀಲನೆಯ ನಂತರ ಹಣಕಾಸು ನೀತಿ ಸಮಿತಿಯು ರೆಪೊ ದರವನ್ನು 5.5% ಯಥಾಸ್ಥಿತಿಯಲ್ಲಿ ಮುಂದುವರಿಸಲು ಸರ್ವಾನುಮತದಿಂದ  ತೀರ್ಮಾನಿಸಿದೆ. ಇದರಿಂದಾಗಿ ಎಸ್‌ಡಿಎಫ್‌ ದರವು 5.25%, MSF ದರ ಮತ್ತು ಬ್ಯಾಂಕ್ ದರ 5.75% ದಲ್ಲಿಯೇ ಮುಂದುವರಿಯಲಿದೆ. 

ಇತ್ತೀಚಿನ ತಿಂಗಳಲ್ಲಿ ಹಣದುಬ್ಬರ ನಿರೀಕ್ಷೆಗಿಂತ ಹೆಚ್ಚು ಕಡಿಮೆಯಾಗಿದೆ. ಆಹಾರ ಬೆಲೆಗಳಲ್ಲಿನ ತೀವ್ರ ಕುಸಿತ ಮತ್ತು ಜಿಎಸ್‌ಟಿ ದರ ಕಡಿತದ ಪರಿಣಾಮದಿಂದ ಈ ಕುಸಿತ ಉಂಟಾಗಿದೆ ಎಂದು ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News