×
Ad

ರೋಹಿತ್ ಶೆಟ್ಟಿ ಮನೆ ಮೇಲೆ ಗುಂಡಿನ ದಾಳಿ ಪ್ರಕರಣ: ಹರ್ಯಾಣ, ರಾಜಸ್ಥಾನದಿಂದ 6 ಮಂದಿಯ ಬಂಧನ

Update: 2026-02-16 20:47 IST

ರೋಹಿತ್ ಶೆಟ್ಟಿ | Photo Credit : PTI 

ಮುಂಬೈ: ಇಲ್ಲಿನ ಜುಹುವಿನಲ್ಲಿರುವ ಚಿತ್ರ ನಿರ್ದೇಶಕ ರೋಹಿತ್ ಶೆಟ್ಟಿ ಅವರ ಮನೆ ಮೇಲೆ ಐದು ಸುತ್ತು ಗುಂಡು ಹಾರಿಸಿದ ಪ್ರಕರಣಕ್ಕೆ ಸಂಬಂಧಿಸಿ ಶೂಟರ್ ಸೇರಿದಂತೆ 6 ಮಂದಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

ಪ್ರಕರಣದಲ್ಲಿ ಭಾಗಿಯಾದ ಆರೋಪದಲ್ಲಿ ಶೂಟರ್ ದೀಪಕ್ ಶರ್ಮಾ ಹಾಗೂ ಇತರ ಐವರನ್ನು ಹರ್ಯಾಣ ಹಾಗೂ ರಾಜಸ್ಥಾನದಿಂದ ನಗರ ಪೊಲೀಸ್‌ನ ಸುಲಿಗೆ ವಿರೋಧಿ ಘಟಕ ರವಿವಾರ ರಾತ್ರಿ ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜುಹು ಪ್ರದೇಶದಲ್ಲಿರುವ ಶೆಟ್ಟಿ ಅವರ 9 ಮಹಡಿಯ ಕಟ್ಟಡದ ಮೇಲೆ ಫೆಬ್ರವರಿ 1ರಂದು ಮುಂಜಾನೆ 12.45ಕ್ಕೆ ಕನಿಷ್ಠ 5 ಸುತ್ತು ಗುಂಡು ಹಾರಿಸಲಾಗಿತ್ತು. ಇದರಿಂದ ಒಂದು ಗುಂಡು ಕಟ್ಟಡದ ಒಳಗಿನ ಜಿಮ್‌ನ ಗ್ಲಾಸ್‌ನಲ್ಲಿ ಸಿಲುಕಿಕೊಂಡಿತ್ತು.

ಇತ್ತೀಚೆಗೆ ಬಂಧಿತರಾದ ಆರೋಪಿಗಳು ಸೇರಿದಂತೆ ಈ ಪ್ರಕರಣಕ್ಕೆ ಸಂಬಂಧಿಸಿದ ಪೊಲೀಸರು ಇದುವರೆಗೆ 10 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News