×
Ad

ಕೇರಳ | ಸ್ವಾತಂತ್ರ್ಯ ದಿನಾಚರಣೆ ವೇಳೆ ಆರೆಸ್ಸೆಸ್ ಗೀತೆ ಹಾಡಿದ ವಿದ್ಯಾರ್ಥಿಗಳು : ವಿವಾದ

Update: 2025-09-03 20:22 IST

ಸಾಂದರ್ಭಿಕ ಚಿತ್ರ | SchoolWiki

ಮಲಪ್ಪುರಂ : ಕೇರಳದ ಮಲಪ್ಪುರಂ ಜಿಲ್ಲೆಯ ಶಾಲೆಯೊಂದರಲ್ಲಿ ಸ್ವಾತಂತ್ರ್ಯ ದಿನಾಚರಣೆಯ ವೇಳೆ ವಿದ್ಯಾರ್ಥಿಗಳು ಆರೆಸ್ಸೆಸ್ ಗೀತೆಯನ್ನು ಹಾಡಿದ್ದು, ವಿವಾದ ಸೃಷ್ಟಿಯಾಗಿದೆ.

ತಿರೂರು ತಾಲೂಕಿನ ಅಲತಿಯೂರಿನ ಕುಂಞಿಮೋನ್ ಹಾಜಿ ಸ್ಮಾರಕ ಪ್ರೌಢಶಾಲೆಯಲ್ಲಿ ಘಟನೆ ನಡೆದಿದೆ. ಶಾಲಾ ಸಿಬ್ಬಂದಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿದ ಸ್ವಾತಂತ್ರ್ಯ ದಿನಾಚರಣೆಯ ವಿಡಿಯೊವನ್ನು ಕೆಲವು ಆರೆಸ್ಸೆಸ್ ಗುಂಪುಗಳು ಹಂಚಿಕೊಂಡ ನಂತರ ಈ ಘಟನೆ ಬೆಳಕಿಗೆ ಬಂದಿದೆ.

ಘಟನೆಯನ್ನು ಖಂಡಿಸಿ ವಿವಿಧ ರಾಜಕೀಯ ಪಕ್ಷಗಳು ಶಾಲೆ ಬಳಿ ಪ್ರತಿಭಟನೆ ನಡೆಸಿದೆ. ಕೇರಳದ  ಶಿಕ್ಷಣ ಸಚಿವ ವಿ. ಶಿವನ್‌ಕುಟ್ಟಿ ಶಾಲೆಯಿಂದ ವಿವರಣೆ ಕೇಳಿದ್ದಾರೆ.

"ಇದು ವಿದ್ಯಾರ್ಥಿಗಳಿಂದಾದ ತಪ್ಪಾಗಿದ್ದು, ಶಿಕ್ಷಕರು ಪರಿಶೀಲಿಸದ ಕಾರಣ ಈ ಘಟನೆ ನಡೆದಿದೆ" ಎಂದು ಶಾಲಾ ಆಡಳಿತ ಮಂಡಳಿಯು ಸ್ಪಷ್ಟಪಡಿಸಿದೆ. 

ಡಿವೈಎಫ್ಐ ಮಲಪ್ಪುರಂ ಜಿಲ್ಲಾ ಕಾರ್ಯದರ್ಶಿ ಘಟನೆಯನ್ನು ಖಂಡಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಈ ಕುರಿತು ಶಿಕ್ಷಣ ಸಚಿವರು ಮತ್ತು ಮುಖ್ಯಮಂತ್ರಿಗಳಿಗೆ ದೂರು ಸಲ್ಲಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News