×
Ad

‘ವೋಟ್ ಚೋರಿ’ ಜೊತೆ ‘ವೋಟ್ ರೇವಡಿ’ : ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ಟೀಕೆ

Update: 2025-09-27 21:50 IST

ಜೈರಾಮ್‌ ರಮೇಶ್‌  | PC :PTI

ಹೊಸದಿಲ್ಲಿ,ಸೆ.27: ಬಿಹಾರದ 75 ಲಕ್ಷ ಮಹಿಳೆಯರಿಗೆ 10,000 ರೂ.ಗಳನ್ನು ನೀಡುವ ಸರಕಾರದ ಯೋಜನೆಗಾಗಿ ಶನಿವಾರ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್, ಅವರು ಈಗ ‘ವೋಟ್ ಚೋರಿ’ ಜೊತೆ ‘ವೋಟ್ ರೇವಡಿ’ಯಲ್ಲಿಯೂ ತೊಡಗಿದ್ದಾರೆ ಎಂದು ಆರೋಪಿಸಿದೆ.

ರೇವಡಿ ಹರ್ಯಾಣದ ಸಿಹಿ ತಿಂಡಿಯಾಗಿದೆ, ಆದರೆ ಈಗ ರಾಜಕಾರಣಿಗಳು ಆ ಪದವನ್ನು ಮತಗಳಿಗಾಗಿ ಒಡ್ಡುವ ಆಮಿಷ ಎಂಬ ಅರ್ಥದಲ್ಲಿ ಬಳಸುತ್ತಿದ್ದಾರೆ. ಮೋದಿಯವರೇ ಪ್ರತಿಪಕ್ಷಗಳಿಂದ ಉಚಿತ ಕೊಡುಗೆಗಳನ್ನು ಟೀಕಿಸಲು ಈ ಪದವನ್ನು ಮೊದಲ ಬಾರಿಗೆ ಬಳಸಿದ್ದರು.

ಗೃಹಲಕ್ಷ್ಮಿ ಯೋಜನೆಯಡಿ ರಾಜ್ಯದ 1.3 ಕೋ. ಮಹಿಳೆಯರಿಗೆ ಮಾಸಿಕ 2,000 ರೂ. ನೀಡುತ್ತಿರುವುದಕ್ಕಾಗಿ ಮೋದಿಯವರು ಕರ್ನಾಟಕದ ಕಾಂಗ್ರೆಸ್ ಸರಕಾರವನ್ನು ನಿರಂತರವಾಗಿ ಟೀಕಿಸುತ್ತಿದ್ದರು. ಆದರೆ ಈಗ ಅವರೇ ಸ್ವತಃ ಈ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಪ್ರ.ಕಾರ್ಯದರ್ಶಿ(ಸಂವಹನ) ಜೈರಾಮ್‌ ರಮೇಶ್‌ ಅವರು ಎಕ್ಸ್ ಪೋಸ್ಟ್‌ನಲ್ಲಿ ಟೀಕಿಸಿದ್ದಾರೆ.

ಶುಕ್ರವಾರವಷ್ಟೇ, ಚುನಾವಣಾ ನೀತಿ ಸಂಹಿತೆ ಜಾರಿಗೊಳ್ಳುವ ಕೆಲವೇ ದಿನಗಳ ಮೊದಲು ಮೋದಿಯವರು ಬಿಹಾರದ ಮಹಿಳೆಯರಿಗೆ 10,000 ರೂ.ಗಳ ಒಂದು ಬಾರಿಯ ಕೊಡುಗೆಯನ್ನು ನೀಡಿದ್ದರು.

‘ವೋಟ್ ಚೋರಿ’ ಜೊತೆ ಪ್ರಧಾನಿಯವರು ಈಗ ‘ವೋಟ್ ರೇವಡಿ’ಗಳ ಹಂಚಿಕೆಯಲ್ಲಿಯೂ ತೊಡಗಿಕೊಂಡಿದ್ದಾರೆ. ಇದು ಹತಾಶ ಹೆಜ್ಜೆಯಾಗಿದ್ದು, ಬಿಹಾರದ ಮಹಿಳೆಯರು ಇದನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ ಎಂದು ಪೋಸ್ಟ್‌ನಲ್ಲಿ ಹೇಳಿರುವ ಜೈರಾಮ್‌ ರಮೇಶ್‌, ಬಿಹಾರ ಸರಕಾರದ ಕ್ಷಣಗಣನೆ ಈಗಾಗಲೇ ಆರಂಭಗೊಂಡಿದೆ. ನಿತೀಶ್‌ ಕುಮಾರ್‌ ಈಗ ಭೂತಕಾಲವಾಗಿದ್ದಾರೆ ಮತ್ತು ಚುನಾವಣಾ ಫಲಿತಾಂಶಗಳು ಪ್ರಕಟಗೊಂಡ ಬಳಿಕ ಮೋದಿಯವರೂ ಭೂತಕಾಲವಾಗಲಿದ್ದಾರೆ ಎಂದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News