×
Ad

ರಾಮಮಂದಿರದ ಪ್ರತಿಷ್ಠಾಪನಾ ಮಹೋತ್ಸವ: ಜ. 22ರಂದು ರಾಷ್ಟ್ರವ್ಯಾಪಿ ಸಂಭ್ರಮಾಚರಣೆಗೆ ಆರೆಸ್ಸೆಸ್ ಕರೆ

Update: 2023-11-12 11:05 IST

Photo: PTI 

ಹೊಸದಿಲ್ಲಿ: ಅಯೋಧ್ಯೆಯಲ್ಲಿ ರಾಮಮಂದಿರದ ಪ್ರತಿಷ್ಠಾಪನಾ ಮಹೋತ್ಸವ ಅಂಗವಾಗಿ 2024ರ ಜನವರಿ 22ರಂದು ರಾಷ್ಟ್ರವ್ಯಾಪಿ ಸಂಭ್ರಮಾಚರಣೆ ಹಮ್ಮಿಕೊಳ್ಳುವಂತೆ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರೆಸ್ಸೆಸ್) ಕರೆ ನೀಡಿದೆ.

ಗುಜರಾತ್‍ನ ಭುಜ್‍ನಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ಆರೆಸ್ಸೆಸ್‍ನ ಮೂರು ದಿನಗಳ ಕಾರ್ಯಕಾರಿಣಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಇದನ್ನು ದೀಪಾವಳಿಯಂತೆ ರಾಷ್ಟ್ರೀಯ ಹಬ್ಬದ ದಿನವನ್ನಾಗಿ ಆಚರಿಸುವಂತೆ ಕರೆ ನೀಡಲಾಗಿದ್ದು, ಎಲ್ಲ ಸ್ವಯಂಸೇವಕರು ಮತ್ತು ಜನಸಾಮಾನ್ಯರು ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಸೂಚಿಸಲಾಗಿದೆ.

ಈ ದಿನದ ಮಹತ್ವದ ಬಗ್ಗೆ ವಿವರ ನೀಡಿರುವ ಆರೆಸ್ಸೆಸ್‍ನ ಹಿರಿಯ ಪದಾಧಿಕಾರಿಯೊಬ್ಬರು, ಈ ದಿನದಂದು ಹನುಮಾನ್ ಚಾಲೀಸ್ ಪಠಣ, ಭಜನೆ ಕೀರ್ತನೆ ಮತ್ತು ಸಾಮಾಜಿಕ ಸಾಮರಸ್ಯವನ್ನು ಪ್ರೋತ್ಸಾಹಿಸುವಂಥ ಚಟುವಟಿಕೆಗಳನ್ನು ದೇಶಾದ್ಯಂತ ಹಮ್ಮಿಕೊಳ್ಳಲು ಸೂಚಿಸಲಾಗುತ್ತಿದೆ ಎಂದು ಆರೆಸ್ಸೆಸ್‍ನ ಹಿರಿಯ ಪದಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರತಿ ವರ್ಷದ ಜನವರಿ 22ರಂದು ವಾರ್ಷಿಕ ಮಹೋತ್ಸವವಾಗಿ ಆಚರಿಸಲು ಸಂಘ ಪರಿವಾರ ನಿರ್ಧರಿಸಿದ್ದು, ಇದನ್ನು ಸನಾತನ ಧರ್ಮದ ದಿನ ಮತ್ತು ಸಮಾನತೆ, ಸಬಲತೆ ಮತ್ತು ಎಲ್ಲರ ಜ್ಞಾನೋದಯದ ಪರಿಕಕಲ್ಪನೆಯಾದ ರಾಮರಾಜ್ಯದ ದಿನವನ್ನಾಗಿ ಆಚರಿಸಲು ಉದ್ದೇಶಿಸಿದೆ.

2024ರ ಈ ಕಾರ್ಯಕ್ರಮದ ಅಂಗವಾಗಿ ದೇಶವ್ಯಾಪಿ ಜನವರಿ 1 ರಿಂದ 15ರವರೆಗೆ ಮನೆಮನೆ ಅಭಿಯಾನವನ್ನು ನಡೆಸಿ, ಸಾರ್ವಜನಿಕರನ್ನು ಆಹ್ವಾನಿಸಲಾಗುತ್ತದೆ. ಜತೆಗೆ ಎಲ್ಲ ಸಹ ಸಂಘಟನೆಗಳನ್ನು ಕೋರಿ ಈ ದಿನವನ್ನು ಸಮೂಹ ಸಂಭ್ರಮದ ದಿನವನ್ನಾಗಿ ಆಚರಿಸಲು ಕೂಡಾ ಕೋರಲು ಉದ್ದೇಶಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News