×
Ad

ಸರ್ದಾರ್ ಪ್ರತಿಮೆ ಧ್ವಂಸ: ಮಧ್ಯಪ್ರದೇಶದಲ್ಲಿ ಗುಂಪುಘರ್ಷಣೆ

Update: 2024-01-26 08:19 IST

Photo: screenshot/twitter.com/AvinashKS

ಇಂದೋರ್/ ಉಜ್ಜಯಿನಿ: ಸರ್ದಾರ್ ವಲ್ಲಭಬಾಯ್ ಪಟೇಲ್ ಅವರ ಪ್ರತಿಮೆಯನ್ನು ಉಜ್ಜಯಿನಿ ಜಿಲ್ಲೆಯ ಮಕಡೋನ್ ಪಟ್ಟಣದಲ್ಲಿ ಗುಂಪೊಂದು ಧ್ವಂಸಗೊಳಿಸಿದ ಘಟನೆ ವರದಿಯಾಗಿದೆ.

ಟ್ರ್ಯಾಕ್ಟರ್ ನಲ್ಲಿ ಆಗಮಿಸಿದ ಕಿಡಿಗೇಡಿಗಳು ಕಲ್ಲು ಮತ್ತು ಬಡಿಗೆಗಳಿಂದ ಪ್ರತಿಮೆ ನಾಶಪಡಿಸಿದ್ದು, ಬಿ.ಆರ್.ಅಂಬೇಡ್ಕರ್ ಪುತ್ಥಳಿಯನ್ನು ಮಾಳವೀಯ ಸಮುದಾಯದವರು ಸ್ಥಾಪಿಸಲು ಉದ್ದೇಶಿಸಿದ್ದ ಸ್ಥಳದಲ್ಲಿ ಪಟೇಲ್ ಪ್ರತಿಮೆ ಸ್ಥಾಪಿಸಿದ್ದನ್ನು ಖಂಡಿಸಿ ಈ ಕೃತ್ಯ ಎಸಗಿದ್ದಾರೆ.

ಪ್ರತಿಮೆ ವಿರೂಪಗೊಳಿಸಿರುವ ಕ್ರಮ ಗುಂಪು ಘರ್ಷಣೆಗೆ ಕಾರಣವಾಗಿದೆ. ಪೊಲೀಸರು ಸೇರಿದಂತೆ ಹಲವು ಮಂದಿಗೆ ಗಾಯಗಳಾಗಿದ್ದು, ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ.

ಕರ್ತವ್ಯಲೋಪ ಆರೋಪದಲ್ಲಿ ಮಕಡೋನ್ ಠಾಣೆಯ ಅಧಿಕಾರಿ ಭೀಮ್ ಸಿಂಗ್ ಅವರನ್ನು ಅಮಾನತು ಮಾಡಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News