×
Ad

ಒಡಿಶಾ | ಪಾಕಿಸ್ತಾನದ ಸಿಬ್ಬಂದಿಗಳಿದ್ದ ಹಡಗು ಆಗಮನ; ಪರದೀಪ್ ಬಂದರಿನಲ್ಲಿ ಬಿಗಿ ಭದ್ರತೆ

Update: 2025-05-14 14:21 IST

ಒಡಿಶಾದ ಪರದೀಪ್‌ ಬಂದರು | File Photo : The Hindu

ಭುಬನೇಶ್ವರ: 21 ಪಾಕಿಸ್ತಾನಿ ಸಿಬ್ಬಂದಿಗಳಿದ್ದ ಹಡಗೊಂದು ಬುಧವಾರ ಆಗಮಿಸಿದ ಬಳಿಕ ಒಡಿಶಾದ ಬಂದರು ಪಟ್ಟಣ ಪರದೀಪ್‌ ನಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಒಟ್ಟು 25 ಸಿಬ್ಬಂದಿಗಳಿದ್ದ ‘ಎಂಟಿ ಸೈರನ್ II’ ಬುಧವಾರ ಮುಂಜಾನೆ ದಕ್ಷಿಣ ಕೊರಿಯಾದಿಂದ ಸಿಂಗಾಪುರ ಮೂಲಕ ಪರದೀಪ್ ಬಂದರಿಗೆ ಮೂಲಕ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್‌ ಗಾಗಿ ಕಚ್ಛಾ ತೈಲ ಸಾಗಿಸುತ್ತಿತ್ತು ಎಂದು ತಿಳಿದು ಬಂದಿದೆ.

ವಲಸೆ ಇಲಾಖೆಯಿಂದ ಹಡಗಿನ ಸಿಬ್ಬಂದಿ ಬಗ್ಗೆ ಮಾಹಿತಿ ಪಡೆದ ನಂತರ ಒಡಿಶಾ ಬಂದರು ಪೊಲೀಸರು ಮತ್ತು ಸಿಐಎಸ್‌ಎಫ್ ಪಡೆಗಳು ಭದ್ರತಾ ವ್ಯವಸ್ಥೆಗಳನ್ನು ಬಿಗಿಗೊಳಿಡಸಿದೆ ಎಂದು ಬಂದರು ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಇನ್ಸ್‌ಪೆಕ್ಟರ್ ಬಬಿತಾ ಡೆಹುರಿ ಹೇಳಿದ್ದಾರೆ.

ಭಾರತ ಮತ್ತು ಪಾಕಿಸ್ತಾನ ನಡುವಿನ ಮಿಲಿಟರಿ ಸಂಘರ್ಷದ ಹಿನ್ನೆಲೆಯಲ್ಲಿ ಪರದೀಪ್ ಬಂದರನ್ನು ಹೈ ಅಲರ್ಟ್‌ನಲ್ಲಿ ಇರಿಸಲಾಗಿದೆ. ಹಡಗು ಈಗಾಗಲೇ ಕರಾವಳಿಯಿಂದ ಸುಮಾರು 20 ಕಿ.ಮೀ ದೂರದಲ್ಲಿರುವ ‘ಪಿಎಂ ಬರ್ತ್’ ನಲ್ಲಿ ಲಂಗರು ಹಾಕಿದ್ದು, 11,350 ಮೆಟ್ರಿಕ್ ಟನ್ ಕಚ್ಚಾ ತೈಲವನ್ನು ಹೊಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

"ಕಚ್ಚಾ ತೈಲವನ್ನು ಹಡಗಿನಿಂದ ಇಳಿಸುವ ಸಂದರ್ಭ ಯಾವುದೇ ಸಿಬ್ಬಂದಿ ಹಡಗಿನಿಂದ ಹೊರಬರಲು ಅನುಮತಿಸುವುದಿಲ್ಲ ಎಂದು ಈಗಾಗಲೇ ಆದೇಶ ಹೊರಡಿಸಲಾಗಿದೆ" ಎಂದು ಪೊಲೀಸರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News