×
Ad

ಬಿಜೆಪಿ ಹಿರಿಯ ಮುಖಂಡ ಅಡ್ವಾಣಿ ಆಸ್ಪತ್ರೆಗೆ ದಾಖಲು

Update: 2024-06-27 08:10 IST

ಹೊಸದಿಲ್ಲಿ: ಭಾರತೀಯ ಜನತಾ ಪಕ್ಷದ ಹಿರಿಯ ಮುಖಂಡ ಎಲ್.ಕೆ.ಅಡ್ವಾಣಿಯವರನ್ನು ಬುಧವಾರ ರಾತ್ರಿ ವಯೋಸಂಬಂಧಿ ಅಸ್ವಸ್ಥತೆ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ದೇಹಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ಹೇಳಿದ್ದಾರೆ.

96 ವರ್ಷ ವಯಸ್ಸಿನ ಆಡ್ವಾಣಿಯವರನ್ನು ದೆಹಲಿಯ ಎಐಐಎಂಎಸ್ ಗೆ  ಬುಧವಾರ ತಡರಾತ್ರಿ ದಾಖಲಿಸಲಾಯಿತು. ಮಾಜಿ ಉಪ ಪ್ರಧಾನಿಯಾಗಿರುವ ಅವರನ್ನು ವೃದ್ಧರ ಖಾಸಗಿ ವಿಭಾಗದಲ್ಲಿ ದಾಖಲಿಸಲಾಗಿದ್ದು, ಮೂತ್ರಶಾಸ್ತ್ರ ತಜ್ಞರಿಂದ ಚಿಕಿತ್ಸೆ ಪಡೆಯತ್ತಿದ್ದಾರೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News