×
Ad

ಹಡಗು ಬಡಿದು ಸೇತುವೆ ಕುಸಿತ; ಹಲವರು ಮೃತಪಟ್ಟಿರುವ ಶಂಕೆ

Update: 2024-03-26 15:09 IST

Photo: aljazeera.com 

ವಾಷಿಂಗ್ಟನ್: ಅಮೆರಿಕದ ಫ್ಯಾನ್ಸಿಸ್ ಸ್ಕಾಟ್‍ನ ಪ್ರಮುಖ ಬಾಲ್ತಿಮೋರ್ ಸೇತುವೆ ಮಂಗಳವಾರ ಮುಂಜಾನೆ ದೊಡ್ಡ ಹಡಗು ಢಿಕ್ಕಿಯಾಗಿ ಕುಸಿದಿದೆ.

ದುರಂತದಲ್ಲಿ ಹಲವು ಮಂದಿ ಸಾವಿಗೀಡಾಗಿರುವ ಸಾಧ್ಯತೆ ಇದ್ದು, ಪರಿಹಾರ ಕಾರ್ಯಾಚರಣೆ ಸಮರೋಪಾದಿಯಲ್ಲಿ ಸಾಗಿದೆ.

ಘಟನೆ ಬಗೆಗಿನ ವಿಡಿಯೊಗಳು ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಸೇತುವೆ ಕುಸಿಯುವ ಕ್ಷಣ ಸೆರೆಹಿಡಿಯಲ್ಪಟ್ಟಿದೆ.

ಫಾಕ್ಸ್ ಬಲ್ತಿಮೋರ್ ಪ್ರಕಾರ, 3 ಕಿಲೋಮೀಟರ್ ಉದ್ದದ ಈ ಪ್ರಮುಖ ಸೇತುವೆ ಕುಸಿದಿದೆ. ಸರಕು ಸಾಗಾಣಿಕೆ ಹಡಗು ಡಿಕ್ಕಿ ಹೊಡೆದು ಈ ದುರಂತ ಸಂಭವಿಸಿದೆ. ಎರಡೂ ದಿಕ್ಕುಗಳ ಲೇನ್‍ಗಳನ್ನು ಮುಚ್ಚಲಾಗಿದೆ ಎಂದು ಸ್ಥಳೀಯ ಸಂಚಾರ ಇಲಾಖೆ ಹೇಳಿದೆ.

ಐ-695 ಸೇತುವೆಯ ಎರಡೂ ದಿಕ್ಕುಗಳ ಎಲ್ಲ ಲೇನ್‍ಗಳನ್ನು ಮುಚ್ಚಲಾಗಿದ್ದು, ಸಂಚಾರವನ್ನು ವಿಮುಖಗೊಳಿಸಲಾಗಿದೆ ಎಂದು ಮೆರಿಲ್ಯಾಂಡ್ ಸಾರಿಗೆ ಪ್ರಾಧಿಕಾರ ಎಕ್ಸ್ ಪೋಸ್ಟ್ ನಲ್ಲಿ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News