×
Ad

ಜಮ್ಮು, ಸಾಂಬಾ, ಪಠಾಣ್ ಕೋಟ್‌ ನಲ್ಲಿ ಮೊಳಗಿದ ಸೈರನ್‌ಗಳು ; ಕಾಣಿಸಿಕೊಂಡ ಡ್ರೋನ್‌ ಗಳು

Update: 2025-05-09 23:08 IST

PC : PTI 

ಹೊಸದಿಲ್ಲಿ: ಜಮ್ಮುವಿನಲ್ಲಿ ಶುಕ್ರವಾರ ಸಂಜೆ ಫಿರಂಗಿಗಳಿಂದ ದಾಳಿ ಮತ್ತು ಸ್ಫೋಟಗಳ ಶಬ್ದ ಕೇಳಿಬಂದ ಬಳಿಕ ಬ್ಲ್ಯಾಕ್‌ ಔಟ್ ಜಾರಿಗೊಂಡಿದ್ದು, ಸೈರನ್‌ಗಳು ಮೊಳಗಲು ಆರಂಭಿಸಿದ್ದವು. ರಾಜಸ್ತಾನದ ಬಾರ್ಮೇರ್,ಪೋಖ್ರಾನ್ ಮತ್ತು ಜೈಸಲ್ಮೇರ್‌ ನಲ್ಲಿ ಸ್ಫೋಟಗಳ ಶಬ್ದಗಳು ಕೇಳಿಸಿದ್ದು,ಪಂಜಾಬಿನ ಹಲವು ಭಾಗಗಳಲ್ಲಿ ಡ್ರೋನ್‌ ಗಳು ಕಾಣಿಸಿಕೊಂಡಿದ್ದವು.

ಗುರುವಾರ ರಾತ್ರಿಯಿಡೀ ಪಾಕಿಸ್ತಾನದ ಸಶಸ್ತ್ರ ಪಡೆಗಳು ಪಶ್ಚಿಮ ಗಡಿಯುದ್ದಕ್ಕೂ ಡ್ರೋನ್‌ಗಳು ಮತ್ತು ಇತರ ಶಸ್ತ್ರಾಸ್ತ್ರಗಳನ್ನು ಬಳಸಿ ಹಲವಾರು ದಾಳಿಗಳನ್ನು ನಡೆಸಿದ್ದು, ಅವುಗಳನ್ನು ಪರಿಣಾಮಕಾರಿಯಾಗಿ ಹಿಮ್ಮೆಟ್ಟಿಸಲಾಗಿತ್ತು ಎಂದು ಭಾರತೀಯ ಸೇನೆಯು ತಿಳಿಸಿದೆ.

ಅಲ್ಲದೆ, ಪಾಕಿಸ್ತಾನಿ ಪಡೆಗಳಿಂದ ಜಮ್ಮುಕಾಶ್ಮೀರದ ನಿಯಂತ್ರಣ ರೇಖೆಯಲ್ಲಿ ಅಸಂಖ್ಯಾತ ಕದನ ವಿರಾಮ ಉಲ್ಲಂಘನೆಗಳಿಗೆ ಸೂಕ್ತ ಉತ್ತರ ನೀಡಲಾಗಿದೆ ಎಂದೂ ಅದು ಹೇಳಿದೆ.

ಶುಕ್ರವಾರ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ಉನ್ನತ ಮಿಲಿಟರಿ ನಾಯಕತ್ವದೊಂದಿಗೆ ಸಭೆಯಲ್ಲಿ ರಾಷ್ಟ್ರೀಯ ಭದ್ರತೆಯ ಸಮಗ್ರ ಪುನರ್‌ ಪರಿಶೀಲನೆ ನಡೆಸಿದರು.

ದಿಲ್ಲಿಯಲ್ಲಿ ಕಟ್ಟೆಚ್ಚರವನ್ನು ವಹಿಸಲಾಗಿದ್ದು, ರಾಜ್ಯ ಸರಕಾರದ ಉದ್ಯೋಗಿಗಳ ರಜೆಗಳನ್ನು ರದ್ದುಗೊಳಿಸಲಾಗಿದೆ. ಪಂಜಾಬಿನಲ್ಲಿ ಹಲವಾರು ಜಿಲ್ಲಾಡಳಿತಗಳು ರಾತ್ರಿವೇಳೆ ಬ್ಲ್ಯಾಕ್‌ ಔಟ್‌ಗಳಿಗೆ ಆದೇಶಿಸಿವೆ. ದೇಶದ ವಿವಿಧ ಭಾಗಗಳಲ್ಲಿಯ 27 ವಿಮಾನ ನಿಲ್ದಾಣಗಳನ್ನು ಶುಕ್ರವಾರ ಮುಚ್ಚಲಾಗಿತ್ತು

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News