×
Ad

ದಿಲ್ಲಿ, ಉತ್ತರ ಭಾರತದ ಕೆಲವು ಭಾಗಗಳಲ್ಲಿ ಭೂಕಂಪನ

Update: 2023-10-03 15:13 IST

ಸಾಂದರ್ಭಿಕ ಚಿತ್ರ (PTI) 

ಹೊಸದಿಲ್ಲಿ: ನೇಪಾಳದಲ್ಲಿ ಇಂದು ಸಂಭವಿಸಿದ 4.6 ತೀವ್ರತೆಯ ಭೂಕಂಪದ ನಂತರ ದಿಲ್ಲಿಯಲ್ಲಿ ಕೂಡಾ ಭಾರಿ ಕಂಪನದ ಅನುಭವವಾಗಿದೆ. ದಿಲ್ಲಿ ಮತ್ತು ಉತ್ತರ ಭಾರತದ ಕೆಲವು ಭಾಗಗಳಲ್ಲಿ ಭೂಕಂಪನದ ಅನುಭವ ಆಗಿದೆ ಎಂದು ವರದಿಯಾಗಿದೆ.

ನೇಪಾಳದಲ್ಲಿ ಭೂಕಂಪದ ಕೇಂದ್ರಬಿಂದು ಇದೆ ಎಂದು ರಾಷ್ಟ್ರೀಯ ಭೂಕಂಪನ ಮಾಪಕವು ಗುರುತಿಸಿದೆ. 

"ಅಕ್ಟೋಬರ್‌ 3 ರಂದು 4.6 ತೀವ್ರತೆಯ ಭೂಕಂಪನ ಸಂಭವಿಸಿದೆ" ಎಂದು ಭೂಕಂಪಶಾಸ್ತ್ರ ಕೇಂದ್ರವು ಹೇಳಿಕೆಯಲ್ಲಿ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News