×
Ad

ಪಶ್ಚಿಮ ಬಂಗಾಳ| ಎಸ್‌ಐಆರ್‌ಗೆ ಸಂಬಂಧಿಸಿದ ವಿಚಾರಣೆ ಆತಂಕ: 82 ವರ್ಷದ ವೃದ್ಧ ಆತ್ಮಹತ್ಯೆ

Update: 2025-12-30 22:00 IST

ಕೋಲ್ಕತಾ, ಡಿ. 30: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಗೆ ಸಂಬಂಧಿಸಿದ ವಿಚಾರಣೆ ಬಗ್ಗೆ ಆತಂಕಗೊಂಡ 82 ವರ್ಷದ ವೃದ್ಧನೋರ್ವ ಚಲಿಸುತ್ತಿರುವ ರೈಲಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡು ಘಟನೆ ಪಶ್ಚಿಮಬಂಗಾಳದ ಪುರುಲಿಯಾ ಜಿಲ್ಲೆಯಲ್ಲಿ ಸೋಮವಾರ ನಡೆದಿದೆ.

ಡಿಸೆಂಬರ್ 16ರಂದು ಪ್ರಕಟವಾದ ಕರಡು ಮತದಾರರ ಪಟ್ಟಿಯಲ್ಲಿ 82 ವರ್ಷ ವಯಸ್ಸಿನ ದುರ್ಜನ್ ಮಾಝಿ ಅವರ ಹೆಸರು ಇರಲಿಲ್ಲ. ಈ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಅವರು ನೋಟಿಸು ಸ್ವೀಕರಿಸಿದ್ದರು. ಪಾರಾ ಬ್ಲಾಕ್ ಅಭಿವೃದ್ಧಿ ಅಧಿಕಾರಿ (ಬಿಡಿಒ) ಕಚೇರಿಯಲ್ಲಿ ಹಾಜರಾಗುವಂತೆ ಅವರಿಗೆ ಸೂಚಿಸಲಾಗಿತ್ತು ಎಂದು ಅವರ ಪುತ್ರ ಕನಲ್ ತಿಳಿಸಿದ್ದಾರೆ.

‘‘ನನ್ನ ತಂದೆಯ ಹೆಸರು 2002ರ ಮತದಾರರ ಪಟ್ಟಿಯಲ್ಲಿ ಇತ್ತು. ಆದರೆ, ಕರಡು ಮತದಾರರ ಪಟ್ಟಿಯಿಂದ ತೆಗೆದು ಹಾಕಲಾಗಿದೆ’’ ಎಂದು ದಿನಗೂಲಿ ನೌಕರನಾಗಿರುವ ಕನಲ್ ಹೇಳಿದ್ದಾರೆ.

‘‘ನನ್ನ ತಂದೆ ಎಸ್‌ಐಆರ್ ಎಣಿಕೆ ನಮೂನೆಯನ್ನು ಸಲ್ಲಿಸಿದ್ದರು. ಆದರೆ, ಅವರ ಹೆಸರು ಕರಡು ಮತದಾರರ ಪಟ್ಟಿಯಲ್ಲಿ ಇರಲಿಲ್ಲ. ಅವರ ಹೆಸರು 2002ರ ಮತದಾರರ ಪಟ್ಟಿಯಲ್ಲಿ ಇತ್ತು. ಅವರು ಡಿಸೆಂಬರ್ 26ರಂದು ನೋಟಿಸ್ ಸ್ವೀಕರಿಸಿದ್ದರು. ಅನಂತರ ಅವರು ಆಂತಕಿತರಾಗಿದ್ದರು’’ ಎಂದು ಕನಲ್ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News