×
Ad

ಸಾಕ್ಷಿಗೆ ಬೆದರಿಕೆ; ಪೋಲಿಸರು ದೂರಿಗೆ ಕಾಯದೇ ಎಫ್ಐಆರ್ ದಾಖಲಿಸಬಹುದು: ಸುಪ್ರೀಂ ಕೋರ್ಟ್

Update: 2025-10-29 19:52 IST

ಸುಪ್ರೀಂ ಕೋರ್ಟ್ | Photo Credit : PTI

ಹೊಸದಿಲ್ಲಿ,ಅ.29: ಸುಳ್ಳು ಸಾಕ್ಷ್ಯ ನೀಡುವಂತೆ ಸಾಕ್ಷಿಗೆ ಬೆದರಿಕೆ ಒಡ್ಡುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಪೋಲಿಸರು ನ್ಯಾಯಾಲಯದಿಂದ ಔಪಚಾರಿಕ ದೂರಿಗಾಗಿ ಕಾಯದೇ ತನಿಖೆಯನ್ನು ನಡೆಸಬಹುದು ಎಂದು ಸರ್ವೋಚ್ಚ ನ್ಯಾಯಾಲಯವು ಮಂಗಳವಾರ ಹೇಳಿದೆ.

ಐಪಿಸಿಯ ಕಲಂ 195-ಎ(ಸಾಕ್ಷಿಗಳಿಗೆ ಬೆದರಿಕೆಯೊಡ್ಡುವ ಅಪರಾಧ) ಅನ್ನು 193,194,195 ಮತ್ತು 196ನೇ ಕಲಮ್ ಗಳಡಿಯ ಅಪರಾಧಗಳಿಗಿಂತ ವಿಭಿನ್ನವಾಗಿ ಪರಿಕಲ್ಪಿಸಲಾಗಿದೆ ಎಂದು ನ್ಯಾಯಮೂರ್ತಿಗಳಾದ ಸಂಜಯ ಕುಮಾರ ಮತ್ತು ಅಲೋಕ ಆರಾಧೆ ಅವರ ಪೀಠವು ಹೇಳಿತು.

ಸಾಕ್ಷಿಗೆ ಬೆದರಿಕೆಗೆ ಸಂಬಂಧಿಸಿದ ಅಪರಾಧಕ್ಕಾಗಿ ಪೋಲಿಸರು ಐಪಿಸಿಯ ಕಲಂ 195-ಎ ಅಡಿ ಎಫ್ಐಆರ್ ದಾಖಲಿಸುವಂತಿಲ್ಲ ಎಂದು ಎತ್ತಿ ಹಿಡಿದಿದ್ದ ಕೇರಳ ಉಚ್ಛ ನ್ಯಾಯಾಲಯದ ತೀರ್ಪನ್ನು ತಳ್ಳಿ ಹಾಕಿದ ಸರ್ವೋಚ್ಚ ನ್ಯಾಯಾಲಯವು,ಈ ಕಲಂ ಅನ್ನು ಉದ್ದೇಶಪೂರ್ವಕವಾಗಿ ವಿಭಿನ್ನ ಕಾರ್ಯವಿಧಾನದ ಮಾರ್ಗವನ್ನು ಹೊಂದಿರುವ ಪ್ರತ್ಯೇಕ ಅಪರಾಧವನ್ನಾಗಿ ಪರಿಕಲ್ಪಿಸಲಾಗಿದೆ ಮತ್ತು ಇದು ಸಂಜ್ಞೇಯ ಅಪರಾಧವಾಗಿರುವುದರಿಂದ ಬೆದರಿಕೆಗೊಳಗಾದ ಸಾಕ್ಷಿಯ ಹೇಳಿಕೆಗಳ ಆಧಾರದಲ್ಲಿ ನೇರವಾಗಿ ಎಫ್ಐಆರ್ ದಾಖಲಿಸಲು ಪೋಲಿಸರಿಗೆ ಅಧಿಕಾರವಿದೆ ಎಂದು ಹೇಳಿತು.

ಹೈಕೋರ್ಟ್ ತೀರ್ಪಿಗೆ ಅಸಮ್ಮತಿ ವ್ಯಕ್ತಪಡಿಸಿದ ಸರ್ವೋಚ್ಚ ನ್ಯಾಯಾಲಯವು,ಬೆದರಿಕೆಗೊಳಗಾದ ವ್ಯಕ್ತಿಯು ದೂರು ನೀಡಲು ಮೊದಲು ನ್ಯಾಯಾಲಯವನ್ನು ಸಂಪರ್ಕಿಸುವುದನ್ನು ಅಗತ್ಯವಾಗಿಸುವುದು ಅಪ್ರಾಯೋಗಿಕ ಅಡಚಣೆಯಾಗಿದೆ ಎಂದು ಹೇಳಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News