×
Ad

ಮಹಾರಾಷ್ಟ್ರದ ವರ್ಸೋವಾ- ಬಾಂದ್ರಾ ಸೀ ಲಿಂಕ್ ಗೆ ಸಾವರ್ಕರ್ ಹೆಸರನ್ನು ಮರುನಾಮಕರಣಗೊಳಿಸಿದ ಶಿಂಧೆ ಸರ್ಕಾರ

Update: 2023-06-28 16:16 IST

ಮುಂಬೈ: ಮಹಾರಾಷ್ಟ್ರದ ವರ್ಸೋವಾ - ಬಾಂದ್ರಾ ಸೀ ಲಿಂಕ್ ಅನ್ನು ವೀರ ಸಾವರ್ಕರ್ ಸೇತು ಎಂದು ಮರುನಾಮಕರಣಗೊಳಿಸಲಾಗಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ರಾಜ್ಯದಲ್ಲಿ ಸಾಕಷ್ಟು ಸಾಮರ್ಥ್ಯ ಇರುವುದರಿಂದ ಅನೇಕ ಕೈಗಾರಿಕೆಗಳು ಮಹಾರಾಷ್ಟ್ರಕ್ಕೆ ಬರುತ್ತಿವೆ. ವಿದೇಶಿ ನೇರ ಹೂಡಿಕೆಯಲ್ಲಿ ಮಹಾರಾಷ್ಟ್ರ ಮತ್ತೆ ನಂಬರ್ 1 ಆಗಿದೆ. ಆದ್ದರಿಂದ ಇಂದಿನ ಸಂಪುಟ ಸಭೆಯಲ್ಲಿ ನಾವು 40,000 ಕೋಟಿ ರೂ ಮೌಲ್ಯದ ಹೂಡಿಕೆ ಪ್ರಸ್ತಾವನೆಗಳನ್ನು ಅನುಮೋದಿಸಿದ್ದೇವೆ. ಇದರಿಂದ 1.20 ಲಕ್ಷ ಜನರಿಗೆ ಉದ್ಯೋಗಾವಕಾಶ ದೊರೆಯಲಿದೆ ಎಂದು ಹೇಳಿದರು.

ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್ ಅನ್ನೂ ಮರುನಾಮಕರಣಗೊಳಿಸಲಾಗಿದ್ದು, ಅಟಲ್ ಬಿಹಾರಿ ವಾಜಪೇಯಿ ಸ್ಮೃತಿ ನ್ಹವ ಶೇವಾ ಅಟಲ್ ಸೇತು ಎಂದು ಹೆಸರು ಬದಲಿಸಲಾಗಿದೆ ಎಂದು ಏಕನಾಥ ಶಿಂಧೆ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News