×
Ad

ತಿರುಪತಿ ತಿರುಮಲ ದೇವಾಲಯದ ಭದ್ರತೆಗೆ ಡ್ರೋನ್ ನಿಗ್ರಹ ತಂತ್ರಜ್ಞಾನ ಬಳಕೆಗೆ ನಿರ್ಧಾರ

Update: 2025-05-21 22:38 IST

ತಿರುಪತಿ ತಿರುಮಲ ದೇವಾಲಯ | PC : NDTV 

ಹೊಸದಿಲ್ಲಿ: ಶ್ರೀ ವೆಂಕಟೇಶ್ವರ ದೇವಾಲಯಕ್ಕೆ ಬೆದರಿಕೆ ಹಿನ್ನೆಲೆಯಲ್ಲಿ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಡ್ರೋನ್ ನಿಗ್ರಹ ತಂತ್ರಜ್ಞಾನವನ್ನು ಬಳಸಲು ನಿರ್ಧರಿಸಿದೆ.

ತಿರುಮಲ ದೇವಾಲಯದ ಭದ್ರತಾ ಅಂಶವನ್ನು ಗಮನದಲ್ಲಿ ಇರಿಸಿಕೊಂಡು ಡ್ರೋನ್ ನಿಗ್ರಹ ತಂತ್ರಜ್ಞಾನವನ್ನು ಬಳಸಲು ನಿರ್ಧರಿಸಲಾಗಿದೆ ಎಂದು ಟಿಟಿಡಿ ಮಂಗಳವಾರ ತಿಳಿಸಿದೆ.

ಟಿಟಿಡಿ ಟ್ರಸ್ಟ್ ಮಂಡಳಿಯ ಅಧ್ಯಕ್ಷ ಬಿ.ಆರ್. ನಾಯ್ಡು ಉಪಸ್ಥಿತರಿದ್ದ ಟಿಟಿಡಿ ಟ್ರಸ್ಟ್ ಮಂಡಳಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅದು ಹೇಳಿದೆ.

ಶ್ರೀ ವೆಂಕಟೇಶ್ವರ ದೇವಾಲಯದ ಸುತ್ತಮುತ್ತ ಡ್ರೋನ್ ಗಳ ಹಾರಾಟವನ್ನು ನಿಷೇಧಿಸಲಾಗಿದೆ. ಆದರೆ, ಇತ್ತೀಚೆಗಿನ ತಿಂಗಳಲ್ಲಿ ಕೆಲವು ಭದ್ರತಾ ಉಲ್ಲಂಘನೆಯ ಘಟನೆಗಳು ವರದಿಯಾಗಿವೆ. ಕಳೆದ ತಿಂಗಳು ದೇವಾಲಯ ಹಾಗೂ ಅದರ ಸುತ್ತಮತ್ತಲ ಪ್ರದೇಶಗಳ ವೀಡಿಯೊ ಮಾಡಲು ಡ್ರೋನ್ ಬಳಿಸಿದ ಆರೋಪದಲ್ಲಿ ರಾಜಸ್ಥಾನದ ಯುಟ್ಯೂಬರ್ ಓರ್ವರನ್ನು ಬಂಧಿಸಲಾಗಿತ್ತು.

ಕಳೆದ ವರ್ಷ ಇದೇ ರೀತಿಯ ಘಟನೆಯೊಂದರಲ್ಲಿ, ಹರ್ಯಾಣದ ಜೋಡಿಯೊಂದು ತಿರುಮಲ ಘಾಟಿ ರಸ್ತೆಯಲ್ಲಿ ಡ್ರೋನ್ ಬಳಸಿರುವುದು ಬೆಳಕಿಗೆ ಬಂದಿತ್ತು.

ಮಾರ್ಚ್ನಲ್ಲಿ ಟಿಟಿಡಿ ಶ್ರೀ ವೆಂಕಟೇಶ್ವರ ದೇವಾಲಯ ಸುತ್ತಮತ್ತ ಪ್ರದೇಶವನ್ನು ಹಾರಾಟ ನಿಷೇಧ ವಲಯವೆಂದು ಘೋಷಿಸುವಂತೆ ಟಿಟಿಡಿ ಕೇಂದ್ರ ಸರಕಾರವನ್ನು ಆಗ್ರಹಿಸಿತ್ತು. ತಿರುಮಲವನ್ನು ಹಾರಾಟ ನಿಷೇಧ ವಲಯ ಎಂದು ಘೋಷಿಸುವಂತೆ ಆಗ್ರಹಿಸಿ ಟಿಟಿಡಿ ಅಧ್ಯಕ್ಷ ಕೇಂದ್ರ ವಾಯು ಯಾನ ಸಚಿವ ಕೆ. ರಾಮ್ ಮೋಹನ್ ನಾಯ್ಡು ಅವರಿಗೆ ಪತ್ರ ಬರೆದಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News