×
Ad

US ಸುಪ್ರೀಂ ಕೋರ್ಟ್‌ ತೀರ್ಪಿನ ಬೆನ್ನಲ್ಲೆ ಶೇ.10ರಷ್ಟು ಹೊಸ ಜಾಗತಿಕ ಸುಂಕ ಘೋಷಿಸಿದ ಡೊನಾಲ್ಡ್‌ ಟ್ರಂಪ್‌

ಭಾರತ-ಅಮೆರಿಕ ನಡುವಿನ ವ್ಯಾಪಾರ ಒಪ್ಪಂದದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದ ಅಮೆರಿಕ ಅಧ್ಯಕ್ಷ

Update: 2026-02-21 10:55 IST

Credit: X/@realDonaldTrump 

ವಾಷಿಂಗ್ಟನ್:  ಟ್ರಂಪ್‌ ವಿಧಿಸಿರುವ ಸುಂಕ ಕುರಿತು ಅಮೆರಿಕದ ಸುಪ್ರೀಂ ಕೋರ್ಟ್ ತೀರ್ಪಿನ ನಂತರ ಟ್ರಂಪ್ ಎಲ್ಲಾ ದೇಶಗಳ ಮೇಲೆ ಹೊಸ 10% ಸುಂಕವನ್ನು ಘೋಷಿಸಿದ್ದಾರೆ. ಇದರ ಬೆನ್ನಲ್ಲೆ ಭಾರತ-ಅಮೆರಿಕ ನಡುವಿನ ವ್ಯಾಪಾರ ಒಪ್ಪಂದದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಅಮೆರಿಕದ ಸುಪ್ರೀಂಕೋರ್ಟ್ ಶುಕ್ರವಾರ, ಟ್ರಂಪ್ ವಿಧಿಸಿರುವ ಜಾಗತಿಕ ಸುಂಕ ಕಾನೂನುಬಾಹಿರ ಎಂದು ಹೇಳಿತ್ತು. ಸುಪ್ರೀಂ ಕೋರ್ಟ್ ತೀರ್ಪಿನಿಂದ ಅಸಮಾಧಾನಗೊಂಡ ಟ್ರಂಪ್, ಆ ತೀರ್ಪಿಗೆ ಸೆಡ್ಡು ಹೊಡೆದು ಹೊಸ ಕ್ರಮಗಳನ್ನು ಘೋಷಿಸಿದ್ದಾರೆ. ಜಾಗತಿಕವಾಗಿ ಶೇಕಡಾ 10ರಷ್ಟು ಸುಂಕವನ್ನು ವಿಧಿಸುವ ಘೋಷಣೆಯನ್ನು ಹೊರಡಿಸಿದ್ದಾರೆ. ನಿರ್ಣಾಯಕವಾಗಿರುವ ಖನಿಜಗಳು, ಲೋಹಗಳು ಮತ್ತು ಇಂಧನ ಉತ್ಪನ್ನಗಳು ಸೇರಿದಂತೆ ಕೆಲವು ವಸ್ತುಗಳಿಗೆ ವಿನಾಯಿತಿಗಳನ್ನು ನೀಡಿದ್ದಾರೆ.  

ಸುಪ್ರೀಂ ಕೋರ್ಟ್ ತೀರ್ಪಿನ ಪರಿಣಾಮ ಭಾರತ-ಅಮೆರಿಕ ವ್ಯಾಪಾರ ಒಪ್ಪಂದದ ಮೇಲೆ ಆಗುವ ಪರಿಣಾಮದ ಬಗ್ಗೆ ಕೇಳಿದಾಗ, ಟ್ರಂಪ್, "ಏನೂ ಬದಲಾಗುವುದಿಲ್ಲ. ಅವರು ಸುಂಕಗಳನ್ನು ಪಾವತಿಸುತ್ತಾರೆ, ಮತ್ತು ನಾವು ಸುಂಕಗಳನ್ನು ಪಾವತಿಸುವುದಿಲ್ಲ. ಭಾರತದ ಜೊತೆಗಿನ ಒಪ್ಪಂದದ ಪ್ರಕಾರ ಅವರು ಸುಂಕಗಳನ್ನು ಪಾವತಿಸುತ್ತಾರೆ" ಎಂದು ಹೇಳಿದ್ದಾರೆ.

"ಇದು ಹಿಂದಿನದಕ್ಕೆ ವಿರುದ್ಧವಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಒಬ್ಬ ಮಹಾನ್ ವ್ಯಕ್ತಿ, ನಿಜಕ್ಕೂ ಒಳ್ಳೆಯ ನಾಯಕ. ನಾವು ಭಾರತದೊಂದಿಗೆ ನ್ಯಾಯಸಮ್ಮತ ಒಪ್ಪಂದ ಮಾಡಿಕೊಂಡಿದ್ದೇವೆ" ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News