×
Ad

ರಿಜಿಜು ದೂರವಾಣಿ ಕರೆ ಬಳಿಕ ಸರ್ವ ಪಕ್ಷಗಳ ನಿಯೋಗಕ್ಕೆ ಬೆಂಬಲ ವ್ಯಕ್ತಪಡಿಸಿದ ಉದ್ಧವ್ ಠಾಕ್ರೆ ಶಿವಸೇನಾ

Update: 2025-05-20 21:54 IST

ಕಿರಣ್ ರಿಜಿಜು , ಉದ್ಧವ್ ಠಾಕ್ರೆ | PTI 

ಮುಂಬೈ: ಕೇಂದ್ರ ಸಚಿವ ಕಿರಣ್ ರಿಜಿಜು ಅವರು ಉದ್ಧವ್ ಠಾಕ್ರೆ ಅವರಿಗೆ ಕರೆ ಮಾಡಿ ಮಾತುಕತೆ ನಡೆಸಿದ ಬಳಿಕ ವಿವಿಧ ದೇಶಗಳಿಗೆ ಭೇಟಿ ನೀಡಿಲಿರುವ ಸರ್ವ ಪಕ್ಷಗಳ ನಿಯೋಗಕ್ಕೆ ಶಿವಸೇನಾ (ಯುಬಿಟಿ) ಬೆಂಬಲ ವ್ಯಕ್ತಪಡಿಸಿದೆ.

ಈ ಹಿಂದೆ ಶಿವಸೇನೆ (ಯುಬಿಟಿ) ಸರ್ವ ಪಕ್ಷಗಳ ನಿಯೋಗವನ್ನು ಬಹಿಷ್ಕರಿಸುವಂತೆ ಕರೆ ನೀಡಿತ್ತು.

‘‘ಅವ್ಯವಸ್ಥೆ ಹಾಗೂ ದುರಾಡಳಿತ’’ವನ್ನು ತಪ್ಪಿಸಲು ಈ ನಿಯೋಗದ ಕುರಿತು ಪಕ್ಷಗಳಿಗೆ ಮಾಹಿತಿ ನೀಡುವ ಶಿಷ್ಟಾಚಾರವನ್ನು ಕೇಂದ್ರ ಸರಕಾರ ಅನುಸರಿಸಬೇಕು ಎಂದು ಕೂಡ ಶಿವಸೇನಾ (ಯುಬಿಟಿ) ಪ್ರತಿಪಾದಿಸಿದೆ.

‘‘ವಿವಿಧ ದೇಶಗಳಿಗೆ ಭೇಟಿ ನೀಡುವ ಸರ್ವ ಪಕ್ಷಗಳ ಸಭೆಯಲ್ಲಿ ಶಿವಸೇನಾ (ಯುಬಿಟಿ) ಭಾಗವಹಿಸುವ ಕುರಿತು ಕೇಂದ್ರ ಸಚಿವ ಕಿರಣ್ ರಿಜಿಜು ಅವರು ಉದ್ಧವ್ ಠಾಕ್ರೆ ಅವರೊಂದಿಗೆ ರವಿವಾರ ಟೆಲಿಫೋನ್ ಮೂಲಕ ಮಾತುಕತೆ ನಡೆಸಿದ್ದಾರೆ’’ ಎಂದು ಶಿವಸೇನಾ (ಯುಬಿಟಿ) ‘ಎಕ್ಸ್’ನಲ್ಲಿ ಹೇಳಿದೆ.

‘‘ಈ ನಿಯೋಗದ ಮೂಲಕ ನಮ್ಮ ದೇಶಕ್ಕೆ ಬೇಕಾದ ಸರಿಯಾದುದು ಹಾಗೂ ಅಗತ್ಯವಾಗಿರುವುದನ್ನು ನಾವು ಮಾಡುತ್ತೇವೆ ಎಂದು ಸರಕಾರಕ್ಕೆ ಭರವಸೆ ನೀಡಿದ್ದೇವೆ’’ ಎಂದು ಶಿವಸೇನಾ (ಯುಬಿಟಿ) ಹೇಳಿದೆ.

ನಿಯೋಗದಲ್ಲಿ ಇತರ ಸಂಸದರೊಂದಿಗೆ ಪಕ್ಷದ ರಾಜ್ಯ ಸಭಾ ಸದಸ್ಯೆ ಪ್ರಿಯಾಂಕಾ ಚತುರ್ವೇದಿ ಪಾಲ್ಗೊಳ್ಳಲಿದ್ದಾರೆ ಎಂದು ಅದು ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News