ಉಮರ್ ಖಾಲಿದ್, ಶರ್ಜಿಲ್ ಇಮಾಮ್‌ಗೆ ಜಾಮೀನು ನಿರಾಕರಣೆ| ಸುಪ್ರೀಂ ಕೋರ್ಟ್ ಉಲ್ಲೇಖಗಳಿಗೆ ಸಂಬಂಧಿಸಿ ಕೆಲ ಪ್ರಶ್ನೆಗಳನ್ನು ಎತ್ತಿದ ಪತ್ರಕರ್ತ ರಾಜ್‌ದೀಪ್ ಸರ್ದೇಸಾಯಿ
ಉಮರ್ ಖಾಲಿದ್, ಶರ್ಜಿಲ್ ಇಮಾಮ್ | Photo Credit : PTI , ರಾಜ್‌ದೀಪ್ ಸರ್ದೇಸಾಯಿ(X \ @sardesairajdeep)
ಹೊಸದಿಲ್ಲಿ: ಉಮರ್ ಖಾಲಿದ್, ಶರ್ಜಿಲ್ ಇಮಾಮ್‌ಗೆ ಜಾಮೀನು ನಿರಾಕರಣೆ ವೇಳೆ ಸುಪ್ರೀಂ ಕೋರ್ಟ್‌ನ ಕೆಲ ಉಲ್ಲೇಖಗಳ ಬಗ್ಗೆ ಪತ್ರಕರ್ತ ರಾಜ್‌ದೀಪ್ ಸರ್ದೇಸಾಯಿ ಕೆಲ ಪ್ರಶ್ನೆಗಳನ್ನು ಕೇಳಿದ್ದಾರೆ.
ಯುಎಪಿಎ ಅಡಿ ವಿಚಾರಣೆಗಳಲ್ಲಿ ವಿಳಂಬವು ಶಾಸನಬದ್ಧ ಸುರಕ್ಷತಾ ಕ್ರಮಗಳನ್ನು ಬದಲಿಸುವ ‘ಟ್ರಂಪ್ ಕಾರ್ಡ್’ ಆಗಿ ಕಾರ್ಯ ನಿರ್ವಹಿಸುವುದಿಲ್ಲ ಎಂದು ಕೋರ್ಟ್ ಹೇಳಿದೆ. ಆದ್ದರಿಂದ ವಿಚಾರಣೆಯನ್ನು ಪದೇ ಪದೇ ಮುಂದೂಡಬಹುದು. ಪ್ರಮುಖ ಸಾಕ್ಷಿಗಳನ್ನು ವಿಚಾರಣೆ ಮಾಡಲು ವರ್ಷಗಟ್ಟಲೆ ತೆಗೆದುಕೊಳ್ಳುತ್ತದೆ. ಅಷ್ಟರವೆರೆಗೆ ವ್ಯಕ್ತಿ ಅನಿರ್ದಿಷ್ಟವಧಿಗೆ ಜೈಲಿನಲ್ಲೇ ಇರಬೇಕಾ? ಎಂದು ಹಿರಿಯ ಪತ್ರಕರ್ತ ರಾಜ್‌ದೀಪ್ ಸರ್ದೇಸಾಯಿ ಪ್ರಶ್ನಿಸಿದ್ದಾರೆ.
ರಕ್ಷಣೆಯಲ್ಲಿರುವ ಪ್ರಕರಣದ ಸಾಕ್ಷಿಗಳ ವಿಚಾರಣೆ ಪೂರ್ಣಗೊಂಡ ಬಳಿಕ ಅಥವಾ ಈ ಆದೇಶದ ಒಂದು ವರ್ಷದ ನಂತರ ಖಾಲಿದ್ ಮತ್ತು ಇಮಾಮ್ ಅವರು ಜಾಮೀನು ಕೋರಿ ಮತ್ತೆ ಅರ್ಜಿಸಲ್ಲಿಸಬಹುದು ಎಂದು ಪೀಠವು ಹೇಳಿದೆ. ಒಂದು ವರ್ಷ ಗಡುವು ಯಾಕೆ? ಜೀವನ ಮತ್ತು ವೈಯಕ್ತಿಕ ಸ್ವಾತಂತ್ರ್ಯವನ್ನು ಖಾತ್ರಿಪಡಿಸುವ ಸಂವಿಧಾನದ ವಿಧಿ 21 ಒಂದು ವರ್ಷದ ನಂತರ ಮಾತ್ರ ಅನ್ವಯವಾಗುತ್ತದೆಯೇ? ಈಗಲೇ ಏಕೆ ಅನ್ವಯವಾಗುವುದಿಲ್ಲ? ಈ ಸಾಕ್ಷಿಗಳನ್ನು ಇನ್ನೂ ಏಕೆ ವಿಚಾರಣೆ ಮಾಡಿಲ್ಲ? ಎಂದು ಪ್ರಶ್ನಿಸಿದ್ದಾರೆ.
ಉಮರ್ ಖಾಲಿದ್ ಮತ್ತು ಶರ್ಜಿಲ್ ಇಮಾಮ್ ಪ್ರಕರಣ ಮತ್ತು ಜಾಮೀನು ಪಡೆದ ಇತರರ ನಡುವೆ ವ್ಯತ್ಯಾಸವನ್ನು ತೋರಿಸಲು ಸುಪ್ರೀಂ ಕೋರ್ಟ್ ಪ್ರಯತ್ನಿಸಿದೆ. ಪ್ರಾಥಮಿಕವಾಗಿ ಭಿನ್ನವಾಗಿದೆ ಎಂದು ಹೇಳಿದೆ. ಒಳ್ಳೆಯದು, ಆದರೆ ಐದು ವರ್ಷಗಳ ಕಾಲ ಎಲ್ಲಾ ಆರೋಪಿಗಳನ್ನು ಒಟ್ಟಾಗಿ ಸಾಮಾನ್ಯ ಪಿತೂರಿಯ ಭಾಗವಾಗಿ ಏಕೆ ಪರಿಗಣಿಸಲಾಗಿದೆ? ಪದೇ ಪದೇ ಜಾಮೀನು ನಿರಾಕರಿಸಲಾಗಿದೆ. ಬೇರೆ ನೆಲೆಯಲ್ಲಿ ಇರುವಂತೆ ಯಾಕೆ ಕಾಣಲಿಲ್ಲ? ಎಂದು ರಾಜ್‌ದೀಪ್ ಸರ್ದೇಸಾಯಿ ಪ್ರಶ್ನಿಸಿದ್ದಾರೆ.