ಅಮೆರಿಕ ಸುಪ್ರೀಂಕೋರ್ಟ್ ಭಾರತದ ಲಾಬಿಯ ಪ್ರಭಾವಕ್ಕೊಳಗಾಗಿದೆ; ಸುಂಕಾಸ್ತ್ರ ವಿರುದ್ಧ ವಾದಿಸಿದ ನ್ಯಾಯವಾದಿ ನೀಲ್ ಕತ್ಯಾಲ್ ವಿರುದ್ಧ ಟ್ರಂಪ್ ಕಿಡಿ
ನೀಲ್ ಕತ್ಯಾಲ್ | Photo Credit : NDTV
ಹೊಸದಿಲ್ಲಿ, ಫೆ.21: ತನ್ನ ಆಡಳಿತವು ಭಾರತ ಸಹಿತ ವಿವಿಧ ರಾಷ್ಟ್ರಗಳಿಗೆ ಜಾಗತಿಕ ಸುಂಕ ವಿಧಿಸಿರುವುದನ್ನು ವಿರೋಧಿಸಿ ಅಮೆರಿಕ ಸುಪ್ರೀಂಕೋರ್ಟ್ನಲ್ಲಿ ಯಶಸ್ವಿಯಾಗಿ ವಾದಿಸಿದ ಭಾರತೀಯ ಮೂಲದ ನ್ಯಾಯವಾದಿ ನೀಲ್ ಕತ್ಯಾಲ್ ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ನೀಲ್ ಕತ್ಯಾಲ್ ವಿದೇಶಿ ಕಾರ್ಯಸೂಚಿಗಳನ್ನು ಪ್ರತಿನಿಧಿಸುತ್ತಿದ್ದಾರೆಂದು ಅವರು ಆಪಾದಿಸಿದ್ದಾರೆ. ಭಾರತದ ವ್ಯಾಪಾರಿ ಹಿತಾಸಕ್ತಿಗಳನ್ನು ರಕ್ಷಿಸುತ್ತಿವೆ ಎನ್ನಲಾದ ಅಮೆರಿಕದ ಕೆಲವು ಕಂಪೆನಿಗಳ ವಿರುದ್ಧವೂ ಟ್ರಂಪ್ ಹರಿಹಾಯ್ದಿದ್ದಾರೆ.
ಸುಂಕ ರದ್ದತಿಯ ಕುರಿತು ಸುಪ್ರೀಂಕೋರ್ಟ್ 6–3 ಮತಗಳಿಂದ ನೀಡಿರುವ ತೀರ್ಪು ಅಮೆರಿಕದ ಕಾರ್ಮಿಕರನ್ನು ದುರ್ಬಲರನ್ನಾಗಿಸಿದೆ ಎಂದು ಅವರು ಕಿಡಿಕಾರಿದ್ದಾರೆ.
‘ಅಮೆರಿಕ ಸುಪ್ರೀಂಕೋರ್ಟ್ ವಿದೇಶಿ ಹಣ ಹಾಗೂ ಭಾರತ ಲಾಬಿಯ ನ್ಯಾಯವಾದಿಗಳ ಪ್ರಭಾವಕ್ಕೊಳಗಾಗಿದೆ... ಅವರು ನಮ್ಮನ್ನು ವಿಫಲಗೊಳಿಸಿದ್ದಾರೆ,’ ಎಂದು ಟ್ರಂಪ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.