×
Ad

Uttar Pradesh | ತಂದೆಯ ಜೊತೆ ವೀಡಿಯೊ ಕರೆಯಲ್ಲಿದ್ದಾಗಲೇ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ!

Update: 2026-01-13 22:10 IST

Photo Credit : timesofindia.indiatimes.com

ಲಕ್ನೊ, ಜ.13: ಅಲಿಗಢ ಮುಸ್ಲಿಂ ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿಯೊಬ್ಬಳು ಸೌದಿ ಅರೇಬಿಯಾದಲ್ಲಿರುವ ತನ್ನ ತಂದೆಯೊಂದಿಗೆ ವೀಡಿಯೊ ಕರೆತಿದ್ದಾಗಲೇ  ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿಯನ್ನು ಇನ್‌ಶಾ ಫಾತಿಮಾ (20) ಎಂದು ಗುರುತಿಸಲಾಗಿದೆ. ಆಕೆ ಕಂಪ್ಯೂಟರ್ ಸೈನ್ಸ್ ವಿಷಯದಲ್ಲಿ ಅಂತಿಮ ವರ್ಷದ ಡಿಪ್ಲೊಮಾ ವಿದ್ಯಾರ್ಥಿನಿಯಾಗಿದ್ದಳು. ಅಝಮ್‌ಗಢ ಜಿಲ್ಲೆಯ ಬಜ್ ಬಹಾದ್ದೂರ್ ಪ್ರದೇಶದ ನಿವಾಸಿಯಾಗಿದ್ದ ಈಕೆ ಹಾಸ್ಟೆಲ್‌ನಲ್ಲಿ ವಾಸಿಸುತ್ತಿದ್ದಳು.

ಪೊಲೀಸ್ ಹಾಗೂ ವಿಶ್ವವಿದ್ಯಾನಿಲಯ ಮೂಲಗಳ ಪ್ರಕಾರ, ಆತ್ಮಹತ್ಯೆ ಮಾಡಿಕೊಳ್ಳುವ ತನ್ನ ನಿರ್ಧಾರವನ್ನು ಇನ್‌ಶಾ ಮೊದಲು ಅಝಮ್‌ಗಢದಲ್ಲಿರುವ ತನ್ನ ಸಹೋದರನಿಗೆ ತಿಳಿಸಿದ್ದಳು. ನಂತರ ಸೋಮವಾರ ರಾತ್ರಿ ಸುಮಾರು 7.15ರ ವೇಳೆಗೆ ಸೌದಿ ಅರೇಬಿಯಾದಲ್ಲಿರುವ ತನ್ನ ತಂದೆಗೆ ವೀಡಿಯೊ ಕರೆ ಮಾಡಿ ಮಾತನಾಡುತ್ತಿರುವಾಗಲೇ ಫ್ಯಾನ್‌ಗೆ ನೇಣು ಬಿಗಿದುಕೊಂಡಳು.

ಘಾತಕ್ಕೊಳಗಾದ ಹಾಗೂ ಅಸಹಾಯಕರಾದ ಆಕೆಯ ತಂದೆ, ಆತ್ಮಹತ್ಯೆ ಮಾಡಿಕೊಳ್ಳದಂತೆ ಮಗಳನ್ನು ಮನವೊಲಿಸಲು ಪ್ರಯತ್ನಿಸಿದರು. ಆದರೆ, ಆಕೆ ಅವರ ಮನವಿಗೆ ಪ್ರತಿಕ್ರಿಯಿಸಲಿಲ್ಲ. ಬದಲಾಗಿ ಮೊಬೈಲ್ ಫೋನ್‌ನ ಕ್ಯಾಮೆರಾವನ್ನು ಆನ್‌ನಲ್ಲೇ ಇರಿಸಿದ್ದಳು.

ಪರಿಸ್ಥಿತಿಯ ಗಂಭೀರತೆಯನ್ನು ಅರಿತುಕೊಂಡ ತಂದೆ, ಎಎಂಯುನಲ್ಲಿ ಕೆಲಸ ಮಾಡುತ್ತಿರುವ ತನ್ನ ಪರಿಚಯದವರೊಬ್ಬರನ್ನು ಕೂಡಲೇ ಸಂಪರ್ಕಿಸಿ, ತನ್ನ ಪುತ್ರಿಯ ಜೀವ ಉಳಿಸಲು ಹಾಸ್ಟೆಲ್‌ಗೆ ತೆರಳುವಂತೆ ವಿನಂತಿಸಿದರು.

ಎಎಂಯು ಸಿಬ್ಬಂದಿ 10 ನಿಮಿಷಗಳೊಳಗೆ ಹಾಸ್ಟೆಲ್‌ಗೆ ತಲುಪಿ, ಹಾಸ್ಟೆಲ್ ಆಡಳಿತ ಹಾಗೂ ವಿಶ್ವವಿದ್ಯಾನಿಲಯದ ಶಿಸ್ತು ಮೇಲ್ವಿಚಾರಣಾ ಸಮಿತಿಗೆ ಮಾಹಿತಿ ನೀಡಿದರು. ಸಿವಿಲ್ ಲೈನ್ಸ್ ಪೊಲೀಸರಿಗೆ ಕೂಡ ಮಾಹಿತಿ ನೀಡಲಾಯಿತು. ಪೊಲೀಸರು ಕೊಠಡಿಯ ಬಾಗಿಲನ್ನು ಬಲವಂತವಾಗಿ ಒಡೆದರು.

ಕೊಠಡಿಯೊಳಗೆ ಸೀಲಿಂಗ್ ಫ್ಯಾನ್‌ಗೆ ಇನ್‌ಶಾ ದೇಹ ನೇತಾಡುತ್ತಿರುವುದನ್ನು ಕಂಡುಬಂದಿತು. ಕೂಡಲೇ ಆಕೆಯನ್ನು ಆ್ಯಂಬುಲೆನ್ಸ್ ಮೂಲಕ ಜವಾಹರ್‌ಲಾಲ್ ನೆಹರೂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಮೂರು ಗಂಟೆಗಳ ಬಳಿಕ ಆಕೆ ಮೃತಪಟ್ಟಿದ್ದಾಗಿ ವೈದ್ಯರು ಘೋಷಿಸಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News