×
Ad

ಉತ್ತರ ಪ್ರದೇಶ | ಬಿಜೆಪಿ ನಾಯಕಿಯ ಪುತ್ರನ ಲೈಂಗಿಕ ಹಗರಣ ಬಯಲಿಗೆ

Update: 2025-05-31 23:34 IST

ಮೈನ್ಪುರಿ: ಬಿಜೆಪಿಯ ಸ್ಥಳೀಯ ಮಹಿಳಾ ಘಟಕದ ಅಧ್ಯಕ್ಷೆಯೊಬ್ಬರ ಪುತ್ರನನ್ನು ಒಳಗೊಂಡ 130ಕ್ಕೂ ಅಧಿಕ ಅಶ್ಲೀಲ ವೀಡಿಯೊಗಳ ಹಗರಣವೊಂದು ಬಯಲಿಗೆ ಬಂದಿದ್ದು, ಉತ್ತರಪ್ರದೇಶದ ಯೋಗಿ ಆದಿತ್ಯನಾಥ್ ಸರಕಾರಕ್ಕೆ ಮುಜುಗರ ಸೃಷ್ಟಿಸಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ಅಶ್ಲೀಲ ವೀಡಿಯೊಗಳು ಉತ್ತರಪ್ರದೇಶದ ರಾಜಕೀಯ ವಲಯಗಳಲ್ಲಿಯೂ ಬಿರುಗಾಳಿಯನ್ನು ಎಬ್ಬಿಸಿದೆ.

ಅಶ್ಲೀಲ ವೀಡಿಯೊ ಹಗರಣದ ಆರೋಪಿಗೂ, ಆತನ ಪತ್ನಿಯ ನಡುವೆ ವಿವಾದವುಂಟಾಗಿತ್ತು. ಆರೋಪಿಯ ಪತ್ನಿಯು ಆತನ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಆರೋಪಿಯು ಮಹಿಳೆಯೊಂದಿಗೆ ಅಶ್ಲೀಲ ವೀಡಿಯೊಗಳನ್ನು ಚಿತ್ರೀಕರಿಸುತ್ತಿದ್ದು, ಅವುಗಳನ್ನು ತನ್ನ ಮುಂದೆ ಪ್ರದರ್ಶಿಸಿ ಮಾನಸಿಕ ಯಾತನೆ ನೀಡುತ್ತಿದ್ದನೆಂದು ಆಕೆ ದೂರಿನಲ್ಲಿ ತಿಳಿಸಿದ್ದರು.

ಆರೋಪಿಯ ಪತ್ನಿಯು ನೀಡಿದ ದೂರನ್ನು ಆಧರಿಸಿ ಮೈನ್ಪುರಿ ನಗರದ ವೃತ್ತ ನಿರೀಕ್ಷಕ ಸಂತೋಷ್ ಕುಮಾರ್ ವಿವಿಧ ಸೆಕ್ಷನ್ಗಳಡಿ ದೂರು ದಾಖಲಿಸಿದ್ದಾರೆ.

ಆರೋಪಿಯು ತಲೆಮರೆಸಿಕೊಂಡಿದ್ದು, ಆತನ ಪತ್ತೆಗಾಗಿ ತಂಡವೊಂದನ್ನು ರಚಿಸಲಾಗಿದೆಯೆಂದು ಅವರು ಹೇಳಿದ್ದಾರೆ.ಹಗರಣಕ್ಕೆ ಸಂಬಂಧಿಸಿ ಮಹಿಳಾ ಮೋರ್ಚಾದ ಅಧ್ಯಕ್ಷೆಯಾಗಲಿ ಅಥವಾ ಬಿಜೆಪಿಯಾಗಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

► ಪ್ರಜ್ವಲ್ ರೇವಣ ಹಗರಣಕ್ಕೆ ಹೋಲಿಸಿದ ಅಖಿಲೇಶ್

ಸಮಾಜವಾದಿ ಪಕ್ಷ ನಾಯಕ ಅಖಿಲೇಶ್ ಯಾದವ್ ಅವರು ಹಗರಣದ ಬಗ್ಗೆ ಆದಿತ್ಯನಾಥ್ ಸರಕಾರದ ವಿರುದ್ಧ ಕಟು ಟೀಕಾಪ್ರಹಾರವನ್ನು ನಡೆಸಿದ್ದಾರೆ.

ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣವನ್ನು ಪರೋಕ್ಷವಾಗಿ ಪ್ರಸ್ತಾವಿಸಿದ ಅವರು, ಮೈನ್ಪುರಿಯ ಬಿಜೆಪಿ ನಾಯಕಿಯ ಪುತ್ರನು, ಕರ್ನಾಟಕದ ಕುಖ್ಯಾತ ಎನ್ಡಿಎ ನಾಯಕರ ಹಗರಣದೊಂದಿಗೆ ಸ್ಪರ್ಧೆಗಿಳಿದಿದ್ದಾನೆ ಎಂದು ಲೇವಡಿ ಮಾಡಿದರು.

ಪರಿಸ್ಥಿತಿ ಹೀಗೆಯೇ ಮುಂದುವರಿದಲ್ಲಿ ಮಹಿಳೆಯರು ಬಿಜೆಪಿ ಸದಸ್ಯರ ನೆರಳಿನಿಂದಲೂ ಅಂತರವನ್ನು ಕಾಯ್ದುಕೊಳ್ಳಲಿದ್ದರೆ. ಯಾವುದೇ ಆತ್ಮಾಭಿಮಾನವಿರುವ ಮಹಿಳೆಯರು ಬಿಜೆಪಿಯಿಂದ ದೂರವಿರಲಿದ್ದಾರೆ ಹಾಗೂ ಕುಟುಂಬಿಕರು ಸಹ ಮಹಿಳೆಯರನ್ನು ಬಿಜೆಪಿಯಿಂದ ದೂರವಿಡಲಿದ್ದಾರೆ. ತಾನೊಂದು ವಿಭಿನ್ನ ಪಕ್ಷವೆಂದು ಬಿಜೆಪಿ ಹೇಳಿಕೊಳ್ಳುತ್ತಿರುವುದು ಯಾಕೆಂದು ಜನರಿಗೆ ಈಗ ಅರ್ಥವಾಗಿದೆ ಎಂದವರು ಲೇವಡಿ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News