×
Ad

ಭಾರತಕ್ಕೆ ಭೇಟಿ ನೀಡಿದ್ದ ನೂತನ ಪೋಪ್ ಹದಿನಾಲ್ಕನೇ ಲಿಯೊ

Update: 2025-05-09 19:25 IST

ರಾಬರ್ಟ್ ಪ್ರಿವೋಸ್ಟ್ | PC : FACEBOOK  

ಹೊಸದಿಲ್ಲಿ: ನೂತನ ಪೋಪ್ ಆಗಿ ಅಮೆರಿಕದ ಕಾರ್ಡಿನಲ್ ರಾಬರ್ಟ್ ಪ್ರಿವೋಸ್ಟ್ ಅವರು ಗುರುವಾರ ಆಯ್ಕೆಯಾಗಿದ್ದು, ಅವರು ಪೋಪ್ 14ನೇ ಲಿಯೊ ಎಂಬ ಹೆಸರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಅವರು ಭಾರತಕ್ಕೂ ಒಮ್ಮೆ ಭೇಟಿ ನೀಡಿದ್ದರು ಎಂಬ ಮಾಹಿತಿ ತಿಳಿದು ಬಂದಿದೆ .

ಪೋಪ್ ಹದಿನಾಲ್ಕನೇ ಲಿಯೊ ಅವರು ಭಾರತಕ್ಕೆ ನೀಡಿದ್ದ ಭೇಟಿ ಕುರಿತು ಕ್ರೈಸ್ತ ಧರ್ಮಗುರು ಹಾಗು ಮಾನವ ಹಕ್ಕುಗಳ ಹೋರಾಟಗಾರ ಜಾನ್ ದಯಾಳ್ ಅವರು ಫೋಟೊಗಳೊಂದಿಗೆ ಫೇಸ್‌ ಬುಕ್‌ ನಲ್ಲಿ ಪೋಸ್ಟ್ ಮಾಡಿದ್ದಾರೆ.

“ಪೋಪ್ ಆಗಿ ಆಯ್ಕೆಯಾಗಿರುವ ಪೋಪ್ 14ನೇ ಲಿಯೊ ಅವರು, ಆಗಸ್ಟಿನಿಯನ್ ಕ್ಯಾಥೊಲಿಕ್ ಧರ್ಮಗುರುಗಳ ವಿಭಾಗದ ಮುಖ್ಯಸ್ಥರಾಗಿದ್ದ ವೇಳೆ ನೆರೆ ಸಂತ್ರಸ್ತ ತಮಿಳುನಾಡಿನ ಗ್ರಾಮವೊಂದಕ್ಕೆ ಭೇಟಿ ನೀಡಿದ್ದರು. ಅಗಸ್ಟಿನಿಯನ್ ವಿಭಾಗದವರು ತೀರಾ ಸರಳ ಬದುಕು ಹಾಗು ಬಡವರು ಮತ್ತು ಅಂಚಿನಲ್ಲಿರುವವರು ಎದುರಿಸುವ ಸಮಸ್ಯೆಗಳ ಬಗ್ಗೆ ವಿಶೇಷ ಕಾಳಜಿ ಇರುವವರು. ಪೋಪ್ 14ನೇ ಲಿಯೊ ಅವರು ಪೋಪ್ ಫ್ರಾನ್ಸಿಸ್ ಅವರಂತೆಯೇ ಲ್ಯಾಟಿನ್ ಅಮೆರಿಕದ ಅನುಭವ ಇರುವವರು. ಪೋಪ್ ಫ್ರಾನ್ಸಿಸ್ ಅರ್ಜೆಂಟೀನಾದಲ್ಲಿ ಜನಿಸಿದ್ದರು. ಪೋಪ್ 14ನೇ ಲಿಯೊ ಅವರು ಪೆರುವಿನಲ್ಲಿ ಪಾದ್ರಿ ಹಾಗೂ ಬಿಷಪ್ ಆಗಿ ಕಾರ್ಯನಿರ್ವಹಿಸಿದ್ದಾರೆ", ಎಂದು ಜಾನ್ ದಯಾಳ್ ಬರೆದಿದ್ದಾರೆ.

ನೂತನ ಪೋಪ್ ಆಗಿ ಆಯ್ಕೆಯಾಗಿರುವ ಪೋಪ್ 14ನೇ ಲಿಯೊ ಅವರು ಮೂಲತಃ ಅಮೇರಿಕದವರು. ಆದರೆ ಅವರು ಸುದೀರ್ಘ ಕಾಲ ಸೇವೆ ಸಲ್ಲಿಸಿರುವ ಪೆರು ದೇಶದ ಪೌರತ್ವವನ್ನೂ ಪಡೆದಿರುವುದರಿಂದ, ಅವರು ಲ್ಯಾಟಿನ್ ಅಮೆರಿಕದಿಂದ ಆಯ್ಕೆಯಾದ ಪೋಪ್ ಎಂಬ ಕೀರ್ತಿಗೂ ಪಾತ್ರರಾಗಿದ್ದಾರೆ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News