×
Ad

ಇರಾನ್ ಮೇಲೆ ಯುದ್ಧ: ಜಾಗತಿಕ ವಿಮಾನಯಾನ ಸೇವೆ ಅಸ್ತವ್ಯಸ್ತ

Update: 2026-03-02 07:37 IST

PC: x.com/SaratogianNews

ಹೊಸದಿಲ್ಲಿ: ಇರಾನ್ ಮೇಲೆ ಅಮೆರಿಕ ಹಾಗೂ ಇಸ್ರೇಲ್ ನಡೆಸಿದ ದಾಳಿ ಹಾಗೂ ಇರಾನ್ ನ ಪ್ರತಿದಾಳಿಯಿಂದ ಮಧ್ಯಪ್ರಾಚ್ಯ ಪ್ರದೇಶ ಪ್ರಕ್ಷುಬ್ಧಗೊಂಡಿದ್ದು, ಪಶ್ಚಿಮ ಏಷ್ಯಾದಲ್ಲಿ ಅಂದರೆ ಯುಎಇನಿಂದ ಹಿಡಿದು ಇಸ್ರೇಲ್ ವರೆಗೂ ವಿಮಾನಯಾನ ಸೇವೆ ಅಸ್ತವ್ಯಸ್ತಗೊಂಡಿದೆ. ಎಮಿರೇಟ್ಸ್, ಇತ್ತಿಹಾದ್ ಹಾಗೂ ಕತಾರ್ ಏರ್ ವೇಸ್ ವಿಮಾನಯಾನ ಸಂಸ್ಥೆಗಳು ರವಿವಾರ ಸಂಜೆಯವರೆಗೆ ಸುಮಾರು 1600ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಪಡಿಸಿವೆ. ಭಾರತದ ವಿಮಾನಯಾನ ಸಂಸ್ಥೆಗಳಾದ ಇಂಡಿಗೊ, ಏರ್‌ಇಂಡಿಯಾ ಮತ್ತು Akasa air ಸುಮಾರು 350 ವಿಮಾನಗಳ ಸಂಚಾರವನ್ನು ರದ್ದುಪಡಿಸಿವೆ ಎಂದು ವಿಮಾನಯಾನ ಸಚಿವಾಲಯ ಹೇಳಿದೆ.

ಬಹಳಷ್ಟು ವಿಮಾನಯಾನ ಕಂಪನಿಗಳು ಸೋಮವಾರದ ವರೆಗೆ ಸೇವೆ ರದ್ದುಪಡಿಸಿರುವುದಾಗಿ ಘೋಷಿಸಿವೆ. ಯುದ್ಧವಲಯದಲ್ಲಿ ಸಂಚಾರ ಸುರಕ್ಷಿತ ಎಂಬ ವಾತಾವರಣ ನಿರ್ಮಾಣವಾದ ಬಳಿಕವಷ್ಟೇ ಸೇವೆ ಪುನಾರಂಭಗೊಳ್ಳುವ ನಿರೀಕ್ಷೆ ಇದೆ.

ಏತನ್ಮಧ್ಯೆ ಏರ್‌ಇಂಡಿಯಾ ಹೇಳಿಕೆ ನೀಡಿ, ಉತ್ತರ ಅಮೆರಿಕ ಮತ್ತು ಯೂರೋಪ್ ದೇಶಗಳಿಗೆ, ಲಭ್ಯವಿರುವ ಪಶ್ಚಿಮ ಏಷ್ಯಾದ ಉಳಿಕೆ ಭಾಗವನ್ನು ಬಳಸಿಕೊಂಡು ಪರ್ಯಾಯ ಮಾರ್ಗದ ಮೂಲಕ ವಿಮಾನಗಳನ್ನು ಹಾರಿಸಲಾಗುವುದು. ಇದರಿಂದ ಹಾರಾಟದ ಅವಧಿ ಹೆಚ್ಚುವ ನಿರೀಕ್ಷೆಯಿದೆ ಎಂದು ಹೇಳಿದೆ. ನ್ಯೂಯಾರ್ಕ್ ನ ಜೆಎಫ್ ಕೆ ಹಾಗೂ ಲಿಬರ್ಟಿ ಇಂಟರ್ನ್ಯಾಷನಲ್ ವಿಮಾನ ನಿಲ್ದಾಣಗಳಿಗೆ ತೆರಳುವ ವಿಮಾನಗಳು ರೋಮ್ ನಲ್ಲಿ ತಾಂತ್ರಿಕ ನಿಲುಗಡೆ ನೀಡಿ ಮುಂದುವರಿಯಲಿವೆ ಎಂದು ತಿಳಿಸಿದೆ.

ಭಾರತೀಯ ವಿಮಾನಗಳಿಗೆ ಪಾಕಿಸ್ತಾನ ವಾಯುಪ್ರದೇಶ ಮುಚ್ಚಿರುವುದರಿಂದ, ಲುಫ್ತಾನ್ಸಾ ಏರ್ಲೈನ್ಸ್ನಂಥ ಸಂಸ್ಥೆಗಳಿಗೆ ಲಭ್ಯವಿರುವ ಪಾಕಿಸ್ತಾನ-ಸಿಐಎಸ್ ಮಾರ್ಗವಾಗಿ ಪಾಶ್ಚಿಮಾತ್ಯದೇಶಗಳಿಗೆ ಸಂಚರಿಸುವ ಮಾರ್ಗ ಲಭ್ಯವಿಲ್ಲ. ಪಾಶ್ಚಿಮಾತ್ಯ ದೇಶಗಳಿಗೆ ಏರ್‌ಇಂಡಿಯಾ 125 ವಿಮಾನಗಳ ಸೇವೆಯನ್ನು ರದ್ದುಪಡಿಸಿವೆ. ಯುಎಇ, ಸೌದಿ ಅರೇಬಿಯಾ, ಇಸ್ರೇಲ್ ಹಾಗೂ ಕತಾರ್ ಗೆ ತೆರಳುವ ಹಾಗೂ ಅಲ್ಲಿಂದ ಬರುವ ವಿಮಾನಗಳ ಸೇವೆಯನ್ನು ರದ್ದುಪಡಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News