×
Ad

Fact Check: ಲುಲು ಮಾಲ್‌ನಲ್ಲಿ ಭಾರತದ ಬಾವುಟಕ್ಕಿಂತ ದೊಡ್ಡ ಗಾತ್ರದಲ್ಲಿ ಪಾಕ್‌ ಧ್ವಜ ಹಾರಿಸಲಾಗಿದೆಯೇ?

Update: 2023-10-11 13:39 IST

Photo: X/@zoo_bear

ತಿರುವನಂತಪುರಂ: ಐಸಿಸಿ ಕ್ರಿಕೆಟ್ ವಿಶ್ವಕಪ್ ಅಂಗವಾಗಿ ಕೇರಳದ ಕೊಚ್ಚಿಯ ಲುಲು ಮಾಲ್ ನಲ್ಲಿ ಆಯಾ ದೇಶಗಳ ದ್ವಜವನ್ನು ಹಾರಿಸಿರುವ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಸುಳ್ಳು ಸಂದೇಶಗಳು ಹರಿದಾಡುತ್ತಿದೆ.

ಕೇರಳದ ಲುಲು ಮಾಲ್‌ನಲ್ಲಿ ಭಾರತದ ರಾಷ್ಟ್ರಧ್ವಜಕ್ಕಿಂತ ಪಾಕಿಸ್ತಾನದ ರಾಷ್ಟ್ರಧ್ವಜವನ್ನು ದೊಡ್ಡದಾಗಿ ಇರಿಸಲಾಗಿದೆ ಎಂಬ ಫೋಟೋಗಳು ಮತ್ತು ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಲುಲು ಮಾಲ್ ಈ ಬಗ್ಗೆ ವಿವರಣೆ ನೀಡಿದೆ.

ವಿಶ್ವದ ವಿವಿಧ ದೇಶಗಳಲ್ಲಿ ಹೈಪರ್‌ ಮಾರ್ಕೆಟ್‌ಗಳನ್ನು ಹೊಂದಿರುವ ಲುಲು ಗ್ರೂಪ್‌ ಭಾರತದ ಹಲವು ಮಹಾನಗರಗಳಲ್ಲೂ ತನ್ನ ಮಾಲ್‌ಗಳನ್ನು ತೆರದಿದೆ.

ಕೊಚ್ಚಿ, ತಿರುವನಂತಪುರಂ, ಬೆಂಗಳೂರು, ಲಕ್ನೋ ಮತ್ತು ಕೊಯಮತ್ತೂರಿನಲ್ಲಿ ಲುಲು ಮಾಲ್ ಸ್ಥಾಪಿಸಲಾಗಿದೆ.

ಲುಲು ಮಾಲ್‌ ಕುರಿತು ಈ ಹಿಂದೆಯೂ ಹಲವು ಬಾರಿ ಸುಳ್ಳು ಸುದ್ದಿಗಳನ್ನು ಬಲಪಂಥೀಯರು ಹಬ್ಬಿಸಿದ್ದು, ಇದೀಗ ಭಾರತದ ದ್ವಜವನ್ನು ಪಾಕ್‌ ಧ್ವಜಗಿಂತ ಕೆಳಮಟ್ಟದಲ್ಲಿ ಹಾರಿಸಲಾಗಿದೆ, ಹಾಗೂ ಪಾಕ್‌ ಧ್ವಜ ಭಾರತದ ಧ್ವಜಕ್ಕಿಂತ ಎತ್ತರದಲ್ಲಿದೆ ಎಂದು ಆರೋಪಿಸಲಾಗಿದೆ.

ಲುಲು ಗ್ರೂಪ್ ಈ ಸುದ್ದಿಯನ್ನು ನಿರಾಕರಿಸಿದ್ದು, ನೈಜ ಸಂಗತಿಗಳನ್ನು ಅರ್ಥಮಾಡಿಕೊಳ್ಳದೆ ಈ ಬಗ್ಗೆ ಕೆಲವು ಸುಳ್ಳು ಸುದ್ದಿಗಳನ್ನು ಹರಡಲಾಗುತ್ತಿದೆ ಎಂದು ಆರೋಪಿಸಿದೆ. ಅಲ್ಲದೆ, ಸಂಸ್ಥೆ ವಿರುದ್ಧ ಸುಳ್ಳು ಸುದ್ದಿ ಹರಡಿದರೆ, ಕಾನೂನು ಕ್ರಮ ಕೈಗೊಳ್ಳುವ ಹಕ್ಕು ನಮಗಿದೆ ಎಂದು ಹೇಳಿದೆ.

ಮಾಲ್ ಮಧ್ಯದಲ್ಲಿ, ಎಲ್ಲಾ ಧ್ವಜಗಳನ್ನು ಛಾವಣಿಯ ಮೇಲೆ ಒಂದೇ ಎತ್ತರದಲ್ಲಿ ನೇತು ಹಾಕಲಾಗಿದೆ. ಕೆಳಗೆ ನಿಂತು ನೋಡಿದರೆ ಎಲ್ಲಾ ಬಾವುಟಗಳು ಒಂದೇ ಗಾತ್ರದಲ್ಲಿರುವುದು ಕಂಡು ಬರುತ್ತದೆ, ಆದರೆ, ಒಂದು ಬದಿಯಿಂದ ನಿಂತು ನೋಡುವಾಗ ಹತ್ತಿರ ಇರುವ ಬಾವುಟ ದೊಡ್ಡದಾಗಿ ಇರುವಂತೆ ಕಾಣಿಸುತ್ತದೆ. ಆದರೆ ಎಲ್ಲಾ ಬಾವುಟಗಳು ಒಂದೇ ಗಾತ್ರದಲ್ಲಿವೆ ಎಂದು ಲುಲು ಮಾಲ್‌ ಸ್ಪಷ್ಟನೆ ನೀಡಿದೆ ಎಂದು asianetnews.com ವರದಿ ಮಾಡಿದೆ.

ತಪ್ಪು ಮಾಹಿತಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಹಕ್ಕು ನಮಗಿದೆ ಎಂದು ಹೇಳಿರುವ ಲುಲು ಆಡಳಿತವು, ಇಂತಹ ತಪ್ಪು ಮತ್ತು ಸುಳ್ಳು ಪ್ರಚಾರದಿಂದ ದೂರವಿರುವಂತೆ ವಿನಂತಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News