×
Ad

ಕ್ರಿಸ್ಮಸ್ ಗೆ ಶುಭ ಹಾರೈಸಿದ ಪ್ರಧಾನಿ ಮೋದಿ, ರಾಹುಲ್ ಗಾಂಧಿ

Update: 2023-12-25 13:59 IST

ಪ್ರಧಾನಿ ನರೇಂದ್ರ ಮೋದಿ (PTI)

ಹೊಸದಿಲ್ಲಿ: ಕ್ರೈಸ್ತರ ಪವಿತ್ರ ಹಬ್ಬವಾದ ಕ್ರಿಸ್ಮಸ್ ಆಚರಣೆಗೆ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ಹಲವು ಗಣ್ಯರು ಶುಭಾಶಯ ತಿಳಿಸಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸೋಮವಾರ ದೇಶದ ಜನತೆಗೆ ತಮ್ಮ ಕ್ರಿಸ್ ಮಸ್ ಶುಭಾಶಯಗಳನ್ನು ತಿಳಿಸಿದ್ದು, ಎಲ್ಲರಿಗೂ ಶಾಂತಿ ಮತ್ತು ಸಮೃದ್ಧಿಯನ್ನು ಹಾರೈಸಿದ್ದಾರೆ. ಯೇಸುಕ್ರಿಸ್ತನ ಉದಾತ್ತ ಬೋಧನೆಗಳನ್ನು ಸಹ ಇದೇ ವೇಳೆ ಪ್ರಧಾನಿ ಮೋದಿ ನೆನಪಿಸಿಕೊಂಡರು.

"ಎಲ್ಲರಿಗೂ ಕ್ರಿಸ್‌ಮಸ್ ಶುಭಾಶಯಗಳು! ಈ ಹಬ್ಬವು ಎಲ್ಲರಿಗೂ ಸಂತೋಷ, ಶಾಂತಿ ಮತ್ತು ಸಮೃದ್ಧಿಯನ್ನು ತರಲಿ. ಕ್ರಿಸ್‌ಮಸ್ ಸಂಕೇತಿಸುವ ಸೌಹಾರ್ದತೆ ಮತ್ತು ಸಹಾನುಭೂತಿಯ ಮನೋಭಾವವನ್ನು ಆಚರಿಸೋಣ ಮತ್ತು ಎಲ್ಲರೂ ಸಂತೋಷ ಮತ್ತು ಆರೋಗ್ಯಕರವಾಗಿರುವ ಜಗತ್ತಿಗಾಗಿ ಕೆಲಸ ಮಾಡೋಣ. ಯೇಸು ಕ್ರಿಸ್ತನ ಉದಾತ್ತ ಬೋಧನೆಗಳನ್ನು ಸಹ ನಾವು ನೆನಪಿಸಿಕೊಳ್ಳುತ್ತೇವೆ” ಎಂದು ಪ್ರಧಾನಿ ಮೋದಿ ತಮ್ಮ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ನಿಮ್ಮ ಹೃದಯವು ಪ್ರೀತಿಯಿಂದ, ನಿಮ್ಮ ಮನೆ ಸಂತೋಷದಿಂದ ಹಾಗೂ ನಿಮ್ಮ ಜೀವನವು ಶಾಂತಿಯಿಂದ ತುಂಬಿರಲಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿ ಕ್ರಿಸ್ ಮಸ್ ಶುಭ ಕೋರಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News