ಝೊಮ್ಯಾಟೊ ಇನ್ನು ಎಟರ್ನಲ್, ಹೊಸ ಲೋಗೋ ಅನಾವರಣ
PC: x.com/Reuters
ಬೆಂಗಳೂರು: ಭಾರತದ ಆಹಾರ ಮತ್ತು ದಿನಸಿ ವಿತರಣೆ ಪ್ಲಾಟ್ ಫಾರಂ ಆಗಿರುವ ಝೊಮ್ಯಾಟೊ, 'ಎಟರ್ನಲ್' ಎಂದು ಹೊಸ ಹೆಸರು ಪಡೆಯಲಿದೆ ಮತ್ತು ಹೊಸ ಲೋಗೊ ಅನಾವರಣ ಮಾಡಲಾಗುವುದು ಎಂದು ಗುರುವಾರ ಪ್ರಕಟಿಸಿದೆ. ದೇಶೀಯವಾಗಿ ಹೊಸ ಹೆಸರು ಪಡೆದು ಕಾರ್ಯಾಚರಣೆ ಆರಂಭಿಸಿದ ಎರಡು ವರ್ಷಗಳ ಬಳಿಕ ಈ ಬೆಳವಣಿಗೆಯನ್ನು ಪ್ರಕಟಿಸಲಾಗಿದೆ.
ಎಟರ್ನಲ್ ಪ್ರಮುಖವಾಗಿ ನಾಲ್ಕು ವ್ಯವಹಾರಗಳನ್ನು ಒಳಗೊಳ್ಳುತ್ತದೆ; ಅವುಗಳೆಂದರೆ ಆಹಾರ ವಿತರಣೆಗೆ ವರ್ಟಿಕಲ್ ಝೊಮ್ಯಾಟೊ, ಬ್ಲಿಂಕಿಟ್ ಎಂಬ ತ್ವರಿತ ವಾಣಿಜ್ಯ ಘಟಕ, ಬ್ಯುಸಿನೆಸ್ ಡಿಸ್ಟ್ರಿಕ್ಟ್ ಹೆಸರಿನ ನೇರಪ್ರಸಾರದ ಕಾರ್ಯಕ್ರಮಗಳು ಮತ್ತು ಅಡುಗೆಮನೆ ಪದಾರ್ಥಗಳ ಸರಬರಾಜಿಗೆ ಹೈಪರ್ ಪ್ಯೂರ್.
'ಝೊಮ್ಯಾಟೊದಿಂದಾಚೆಗೆ ಕಂಪನಿಯನ್ನು ಮರುನಾಮಕರಣ ಮಾಡುವ ಚಿಂತನೆ ನಮ್ಮದು. ಇದು ಭವಿಷ್ಯದಲ್ಲಿ ಮಹತ್ವದ ಚಾಲನಾಶಕ್ತಿಯಾಗಲಿದೆ" ಎಂದು ಸಂಸ್ಥಾಪಕ ದೀಪಿಂದರ್ ಗೋಯಲ್, ಷೇರುದಾರರಿಗೆ ಬರೆದ ಪತ್ರದಲ್ಲಿ ವಿವರಿಸಿದ್ದಾರೆ.
ತ್ವರಿತ ವಾಣಿಜ್ಯ ಆಧರಿತ ಪ್ರಗತಿಯನ್ನು ಸಾಧಿಸಲು ಮತ್ತು ಹೂಡಿಕೆದಾರರ ಆಸಕ್ತಿ ಹೆಚ್ಚಿಸಲು 2022ರ ಮಧ್ಯಭಾಗದಲ್ಲಿ ಝೊಮ್ಯಾಟೊ ಕಂಪನಿ ಬ್ಲಿಂಕಿಟ್ ಅನ್ನು ಸ್ವಾಧೀನಪಡಿಸಿಕೊಂಡಿದ್ದು, ಹೂಡಿಕೆದಾರರ ಸಂದೇಹಕ್ಕೆ ಕಾರಣವಾಗಿತ್ತು.
ಬ್ಲಿಂಕಿಟ್ ಹಾಗೂ ಸ್ವಿಗ್ಗಿಯ ಇನ್ಸ್ಟಾಮಾರ್ಟ್ ಭಾರತೀಯ ಮಳಿಗೆಗಳ ಪಥವನ್ನು ಬದಲಿಸಿದ್ದು, ರಿಲಯನ್ಸ್ ಇಂಡಸ್ಟ್ರೀಸ್ ನ ಜಿಯೊಮಾರ್ಟ್, ಅಮೆಜಾನ್ ಮತ್ತು ವಾಲ್ಮಾರ್ಟ್ ನ ಭಾರತೀಯ ವ್ಯವಹಾರ ಸಂಸ್ಥೆಗಳು ತಮ್ಮದೇ ತ್ವರಿತ ವಾಣಿಜ್ಯ ಸೇವೆಗಳನ್ನು ಆರಂಭಿಸಲು ಕಾರಣವಾಗಿತ್ತು.