×
Ad

ಭಾರೀ ಮಳೆಯ ನಂತರ ಅಸ್ಸಾಂನಲ್ಲಿ ಪ್ರವಾಹ; ಸುಮಾರು 33,500 ಜನರು ಬಾಧಿತ

Update: 2023-06-19 18:36 IST

Photo: Twitter@NDTV

ಗುವಾಹಟಿ: ಅಸ್ಸಾಂನಲ್ಲಿ ಪ್ರವಾಹ ಸ್ಥಿತಿ ಸೋಮವಾರ ತೀವ್ರವಾಗಿದ್ದು, ರಾಜ್ಯದ ಹಲವು ಭಾಗಗಳಲ್ಲಿ ರಾತ್ರಿಯಿಡೀ ಭಾರೀ ಮಳೆ ಸುರಿದಿದ್ದು, ಹಳ್ಳಿಗಳು, ಪಟ್ಟಣಗಳು ಹಾಗೂ ಕೃಷಿಭೂಮಿಗಳು ಜಲಾವೃತವಾಗಿವೆ.

ಭಾರತೀಯ ಹವಾಮಾನ ಇಲಾಖೆಯು 'ರೆಡ್ ಅಲರ್ಟ್' ಘೋಷಿಸಿದೆ. ಗುರುವಾರದವರೆಗೆ ಅಸ್ಸಾಂನ ಹಲವು ಜಿಲ್ಲೆಗಳಲ್ಲಿ 'ಅತಿ ಭಾರೀ' ಮಳೆಯಾಗುವ ಮುನ್ಸೂಚನೆ ನೀಡಿದೆ.

ಗುವಾಹಟಿಯಲ್ಲಿರುವ IMD ಯ ಪ್ರಾದೇಶಿಕ ಹವಾಮಾನ ಕೇಂದ್ರವು (RMC) "ರೆಡ್ ಅಲರ್ಟ್" ಅನ್ನು ಹೊರಡಿಸಿದ್ದು, "ಭಾರೀ (24 ಗಂಟೆಗಳಲ್ಲಿ 7-11 cm) ಅತಿ ಹೆಚ್ಚು (24 ಗಂಟೆಗಳಲ್ಲಿ 11-20 cm) ಅತ್ಯಂತ ಭಾರೀ ಮಳೆಯೊಂದಿಗೆ (24 ಗಂಟೆಗಳಲ್ಲಿ 20 cm ಗಿಂತ ಹೆಚ್ಚು)" ಕೊಕ್ರಜಾರ್, ಚಿರಾಂಗ್, ಬಕ್ಸಾ, ಬರ್ಪೇಟಾ ಹಾಗೂ ಬೊಂಗೈಗಾಂವ್‌ನ ಲೋವರ್ ಅಸ್ಸಾಂ ಜಿಲ್ಲೆಗಲ್ಲಿ ಮಳೆಯಾಗಲಿದೆ'' ಎಂದು ಹೇಳಿದೆ.

ಅದೇ ಅವಧಿಯಲ್ಲಿ, ಧುಬ್ರಿ, ಕಾಮ್ರೂಪ್, ಕಮ್ರೂಪ್ ಮೆಟ್ರೋಪಾಲಿಟನ್, ನಲ್ಬರಿ, ದಿಮಾ ಹಸಾವೊ, ಕ್ಯಾಚಾರ್, ಗೋಲ್ಪಾರಾ ಮತ್ತು ಕರೀಮ್‌ಗಂಜ್ ಜಿಲ್ಲೆಗಳಲ್ಲಿ "ಭಾರೀಯಿಂದ ಅತಿ ಹೆಚ್ಚು" ಮಳೆಯಾಗುವ ಸಾಧ್ಯತೆಯಿದೆ ಎಂದು ಅದು ಹೇಳಿದೆ.

ಆರ್‌ಎಂಸಿ ಮಂಗಳವಾರ 'ಆರೆಂಜ್ ಅಲರ್ಟ್' ನೀಡಿದ್ದು, ನಂತರದ ಎರಡು ದಿನಗಳ ಕಾಲ 'ಯೆಲ್ಲೋ ಅಲರ್ಟ್' ನೀಡಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News