ಗ್ರೀಸ್: ರಕ್ಷಣಾ ಕಾರ್ಯಾಚರಣೆ ವಿಮಾನ ಪತನ
Update: 2023-07-26 00:07 IST
Image: YouTube screengrab
ಅಥೆನ್ಸ್: ಗ್ರೀಸ್‍ನ ಗ್ರೀಕ್ ದ್ವೀಪದಲ್ಲಿ ಕಾಡ್ಗಿಚ್ಚು ನಿಯಂತ್ರಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದ ವಿಮಾನ ಮಂಗಳವಾರ ಪತನಗೊಂಡಿದ್ದು ವಿಮಾನದಲ್ಲಿದ್ದ ಇಬ್ಬರು ಪೈಲಟ್‍ಗಳು ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಎಎಫ್‍ಪಿ ಸುದ್ಧಿಸಂಸ್ಥೆ ವರದಿ ಮಾಡಿದೆ.
ಅರಣ್ಯ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ವಿಮಾನ ಏಕಾಏಕಿ ಪತನಗೊಳ್ಳುವ ಮತ್ತು ಕೆಲ ಕ್ಷಣಗಳ ಬಳಿಕ ಆ ಸ್ಥಳದಲ್ಲಿ ಬೆಂಕಿಯ ಉಂಡೆ ಮೇಲಕ್ಕೇಳುತ್ತಿರುವ ದೃಶ್ಯದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ನಾಪತ್ತೆಯಾಗಿರುವ ಪೈಲಟ್‍ಗಳು ಗ್ರೀಕ್ ವಾಯುಪಡೆಯ ಸದಸ್ಯರು ಎಂದು ರಕ್ಷಣಾ ಇಲಾಖೆ ಮಾಹಿತಿ ನೀಡಿದೆ.