×
Ad

ಗೂಗಲ್‌ ನಲ್ಲಿ ಅತ್ಯಂತ ಹೆಚ್ಚು ಹುಡುಕಲ್ಪಟ್ಟ ಟಾಪ್-5 ಕ್ರೀಡಾ ತಂಡಗಳಲ್ಲಿ ಪಂಜಾಬ್‌ ಕಿಂಗ್ಸ್ ಗೆ ಸ್ಥಾನ

Update: 2025-12-05 22:17 IST

Photo Credit :PTI 

ಹೊಸದಿಲ್ಲಿ, ಡಿ.5: ಪಂಜಾಬ್ ಕಿಂಗ್ಸ್ ತಂಡವು ಜಾಗತಿಕ ಮಟ್ಟದಲ್ಲಿ ಭಾರೀ ಮನ್ನಣೆ ಗಳಿಸಿದ್ದು, 2025ರಲ್ಲಿ ಗೂಗಲ್‌ ನಲ್ಲಿ ಅತ್ಯಂತ ಹೆಚ್ಚು ಹುಡುಕಲ್ಪಟ್ಟ ಟಾಪ್-5 ಕ್ರೀಡಾ ತಂಡಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದುಕೊಂಡಿದೆ.

ಈ ಫ್ರಾಂಚೈಸಿಯು ಐಪಿಎಲ್‌ ನಲ್ಲಿ ಅತ್ಯುನ್ನತ ಶ್ರೇಯಾಂಕ ಹೊಂದಿರುವ ತಂಡವಾಗಿದೆ. ಕಳೆದ ವರ್ಷ ತಂಡದ ಆಟಗಾರರು, ಪ್ರದರ್ಶನಗಳು ಹಾಗೂ ಬ್ರ್ಯಾಂಡ್ ಗುರುತಿನೊಂದಿಗೆ ಅಭಿಮಾನಿಗಳು ಎಷ್ಟೊಂದು ನಿಕಟ ಸಂಪರ್ಕ ಹೊಂದಿದ್ದಾರೆ ಎಂಬುದನ್ನು ಶ್ರೇಯಾಂಕವು ಎತ್ತಿ ತೋರಿಸುತ್ತಿದೆ.

ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಪಂಜಾಬ್ ಕಿಂಗ್ಸ್ ತಂಡವು 2025ರ ಐಪಿಎಲ್‌ ನಲ್ಲಿ ಫೈನಲ್‌ಗೆ ತಲುಪಿತ್ತು. 2014ರ ನಂತರ ಮೊದಲ ಬಾರಿ ಫೈನಲ್‌ ನಲ್ಲಿ ಕಾಣಿಸಿಕೊಂಡಿತ್ತು. ಆದರೆ ಫೈನಲ್‌ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ದ ಆರು ರನ್‌ಗಳಿಂದ ಸೋಲನುಭವಿಸಿ ಪ್ರಶಸ್ತಿ ವಂಚಿತವಾಗಿತ್ತು.

‘‘ಜಾಗತಿಕ ರ‍್ಯಾಂಕಿಂಗ್, ತಂಡವು ತನ್ನ ಬೆಂಬಲಿಗರೊಂದಿಗೆ ಹೊಂದಿರುವ ಸಾಂಸ್ಕೃತಿಕ ಹಾಗೂ ಭಾವನಾತ್ಮಕ ಸಂಬಂಧವನ್ನು ಪ್ರತಿಬಿಂಬಿಸುತ್ತದೆ. ಫ್ರಾಂಚೈಸಿಯು ಯಾವಾಗಲೂ ಮೈದಾನದಲ್ಲಿ ಗೆಲ್ಲುವ ಗುರಿಯನ್ನು ಹೊಂದಿದೆ’’ಎಂದು ಪಂಜಾಬ್ ಕಿಂಗ್ಸ್ ಮುಖ್ಯ ವಾಣಿಜ್ಯ ಅಧಿಕಾರಿ ಸೌರಭ್ ಅರೋರ ಹೇಳಿದ್ದಾರೆ.

ಗೂಗಲ್‌ ನಲ್ಲಿ ಅತ್ಯಂತ ಹೆಚ್ಚು ಹುಡುಕಲ್ಪಟ್ಟ ಟಾಪ್-5 ಕ್ರೀಡಾ ತಂಡಗಳು

1.ಪ್ಯಾರಿಸ್ ಸೇಂಟ್-ಜರ್ಮೈನ್

2. ಎಸ್.ಎಲ್. ಬೆನ್ಫಿಕಾ

3. ಟೊರೊಂಟೊ ಬ್ಲ್ಯೂ ಜಯ್ಸ್

4. ಪಂಜಾಬ್ ಕಿಂಗ್ಸ್

5. ಡೆಲ್ಲಿ ಕ್ಯಾಪಿಟಲ್ಸ್

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News