×
Ad

‘ವಾರ್ತಾಭಾರತಿ’ ಸಂಪಾದಕೀಯದ ಬಗ್ಗೆ ರಾಜ್ಯ ಶಿಕ್ಷಣ ಇಲಾಖೆಯ ಸ್ಪಷ್ಟೀಕರಣ

Update: 2024-11-16 09:31 IST

ದಿನಾಂಕ: 22.06.2024ರಂದು ‘ವಾರ್ತಾ ಭಾರತಿ’ ಪತ್ರಿಕೆಯಲ್ಲಿ ‘ಕನ್ನಡ ಮಾಧ್ಯಮ: ಬಡವರ ಮಕ್ಕಳು ಬಲಿಪಶು ವಾಗದಿರಲಿ’ ಎಂಬ ಶೀರ್ಷಿಕೆಯಡಿ ಸುದ್ದಿ ಪ್ರಕಟವಾಗಿರುತ್ತದೆ.

ಸದರಿ ಪತ್ರಿಕೆಯಲ್ಲಿ ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಕನ್ನಡ ಮಾಧ್ಯಮದ ಜೊತೆಗೆ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಸುವ ಸರಕಾರದ ಆದೇಶಕ್ಕೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ತೀವ್ರ ಆಕ್ಷೇಪಣೆಯನ್ನು ವ್ಯಕ್ತಪಡಿಸಿದೆ. ಈ ಆದೇಶದ ವಿರುದ್ಧ ಪ್ರಾಧಿಕಾರದ ಅಧ್ಯಕ್ಷರು ಸಚಿವರನ್ನು ಭೇಟಿ ಮಾಡಿ ಮನವಿಯನ್ನು ಸಲ್ಲಿಸಿರುತ್ತಾರೆ. ರಾಜ್ಯದ ಒಂದು ಸಾವಿರಕ್ಕೂ ಅಧಿಕ ಸರಕಾರಿ ಶಾಲೆಗಳಲ್ಲಿ 2024-25ನೇ ಸಾಲಿನಿಂದ ಆಂಗ್ಲ ಮಾಧ್ಯಮ ಪ್ರಾರಂಭಿಸಿರುವುದು ಕನ್ನಡ ಭಾಷಾ 2015ಕ್ಕೆ ತದ್ದಿರುದ್ಧವಾಗಿದೆ. ಪ್ರಯುಕ್ತ ಕೂಡಲೇ ಆದೇಶ ಹಿಂಪಡೆದು ಕನ್ನಡ ಶಾಲೆಗಳನ್ನು ಮುಂದುವರಿಸಲು ಕ್ರಮವಹಿಸುವಂತೆ ತಿಳಿಸಲಾಗಿರುತ್ತದೆ.

ಸನ್ಮಾನ್ಯ ಮುಖ್ಯ ಮಂತ್ರಿಗಳು 2024-25ನೇ ಸಾಲಿನ ಆಯವ್ಯಯದಲ್ಲಿನ ಕಂಡಿಕೆ 96ರಲ್ಲಿ ರಾಜ್ಯದ ಸರಕಾರಿ ಶಾಲೆಗಳಲ್ಲಿ ಹೊಸದಾಗಿ 2,000 ಆಂಗ್ಲ ಮಾಧ್ಯಮ (ದ್ವಿ ಭಾಷಾ/Billingual) ಪ್ರಾರಂಭಿಸಲು ಘೋಷಿಸಿ ಅನುಮೋದಿಸಿದಂತೆ ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಹಾಲಿ ನಡೆಯುತ್ತಿರುವ ಕನ್ನಡ/ಇತರ ಮಾಧ್ಯಮದ ಜೊತೆಯಲ್ಲಿ ಹೆಚ್ಚುವರಿಯಾಗಿ ದ್ವಿಭಾಷಾ ಮಾಧ್ಯಮ ಶಾಲೆಗಳನ್ನು ಪ್ರಾರಂಭಿಸಲಾಗಿರುತ್ತದೆ. ಇದರಲ್ಲಿ ಕನ್ನಡ ಮಾಧ್ಯಮವನ್ನು ಮುಚ್ಚುವ ಬಗ್ಗೆ ಎಲ್ಲಿಯೂ ಇಲಾಖೆ/ಸರಕಾರ ಪ್ರಸ್ತಾವಿಸಿರುವುದಿಲ್ಲ. ಕನ್ನಡ ಮಾಧ್ಯಮದ ಜೊತೆಗೆ ಒಂದು ಹೆಚ್ಚುವರಿ ಮಾಧ್ಯಮವನ್ನು ತೆರೆದು ಬೋಧಿಸಲಾಗುತ್ತಿರುತ್ತದೆ. ಅಲ್ಲದೆ ಮಕ್ಕಳ ಪೋಷಕರು, ಶಾಲಾಭಿವೃದ್ಧಿ ಸಮಿತಿಯವರು, ಚುನಾಯಿತ ಪ್ರತಿನಿಧಿಗಳು, ವಿವಿಧ ಸಂಘ ಸಂಸ್ಥೆಗಳಿಂದ ಹಾಗೂ ಇಲಾಖಾಧಿಕಾರಿಗಳಿಂದ ಬೇಡಿಕೆಗಳು ಸ್ವೀಕೃತವಾದ ಹಿನ್ನೆಲೆಯಲ್ಲಿ ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ 1,419 ಶಾಲೆಗಳಲ್ಲಿ ಹಾಲಿ ನಡೆಯುತ್ತಿರುವ ಕನ್ನಡ/ಇತರ ಮಾಧ್ಯಮದ ಜೊತೆಗೆ ಮೊದಲನೇ ಹಂತದಲ್ಲಿ ದ್ವಿಭಾಷಾ ಮಾಧ್ಯಮವನ್ನು ಪ್ರಾರಂಭಿಸಲಾಗಿರುತ್ತದೆ.


ಇದನ್ನೂ ಓದಿ: ಕನ್ನಡ ಮಾಧ್ಯಮ: ಬಡವರ ಮಕ್ಕಳು ಬಲಿಪಶುವಾಗದಿರಲಿ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News