ಚುನಾವಣಾ ಆಯೋಗ | Photo Credit : PTI 

ಆತ್ಮೀಯರೇ ,

ನಿನ್ನೆ ನಾನು ಸೆಪ್ಟೆಂಬರ್ 26 ರ ಆಯೋಗದ ತೀರ್ಮಾನಗಳಲ್ಲಿ ಇರುವ ಕೆಲವು ವೈರುಧ್ಯಗಳನ್ನು ತಮ್ಮ ಗಮನಕ್ಕೆ ತಂದಿದ್ದನ್ನು ತಾವು ಓದಿರುತ್ತೀರಿ ಎಂದು ಭಾವಿಸುತ್ತೇನೆ.

ಆಯೋಗದ ಹೊಸ ಆದೇಶವು

-ಹೊಸ ಮತದಾರರು ಇನ್ನು ಮುಂದೆ "non-SIR Period" ನಲ್ಲಿ SIR ದಾಖಲೆಗಳನ್ನು ತೋರಿಸದೆ ಮಾಮೂಲಿ ಫಾರಂ 6 ಬಳಸಿ ಮರು ಸೇರ್ಪಡೆಗೊಳ್ಳಬಹುದು

-SIR ಮುಗಿದಿರುವ 20 ರಾಜ್ಯಗಳಲ್ಲಿ ಬಿಟ್ಟುಹೋಗಿರುವ ಮತದಾರರನ್ನು SIR ದಾಖಲೆಗಳ ಅಗತ್ಯವಿಲ್ಲದ ಮಾಮೂಲಿ "Coninuous Updation Process" ನಲ್ಲಿ ಒಳಗೊಳ್ಳಬಹುದು ಎಂದು ಆದ್ದೇಶಿಸಿತ್ತು.

ಮೇಲ್ನೋಟಕ್ಕೆ ಸ್ಪಷ್ಟವಾಗುವಂತೆ ಇವೆರಡೂ ಆದಲ್ಲಿ SIR ಅಗತ್ಯವೇನು? ಅದು ಅಸಂಬದ್ಧ ಮತ್ತು ಅತಾರ್ಕಿಕ ಆಗುವುದಿಲ್ಲವೇ?

1) ಇಂದು Indian Express ಅದೇ ವಿಷಯದ ಬಗ್ಗೆ ಮತ್ತೊಂದು ವರದಿ ಮಾಡಿದೆ.

(https://indianexpress.com/article/india/election-commission-of-india-sir-left-out-voters-special-drive-10903082/)

ಈ ವರದಿಯ ಪ್ರಕಾರ ಸೆಪ್ಟೆಂಬರ್ 29 ರಂದು ಕೇಂದ್ರ ಚುನಾವಣಾ ಅಯೋಗವು ಎಲ್ಲಾ ರಾಜ್ಯಗಳ CEO ಗಳಿಗೆ ಪತ್ರವನ್ನು ಬರೆದು, SIR ಮುಗಿದಿರುವ 20 ರಾಜ್ಯಗಳಲ್ಲೂ SIR ಪ್ರಕ್ರಿಯೆಯಲ್ಲಿ ಬಿಟ್ಟು ಹೋಗಿರುವ ಮತದಾರರನ್ನು SIR ದಾಖಲೆಗಳ ಅಗತ್ಯವಿಲ್ಲದ ಮಾಮುಲಿ ಫ಼ಾರಂ 6 ಭರ್ತಿ ಪ್ರಕ್ರಿಯೆಯಲ್ಲಿ ಸೇರಿಸಿಕೊಳ್ಳಲು ವಿಶೇಷ ಅಭಿಯಾನ ಮಾಡಲು ಸೂಚಿಸಿದೆ. ಹಾಗೂ ನಿನ್ನೆ ನಡೆದ ಎಲ್ಲಾ CEO ಗಳ ವಿಡಿಯೋ ಸಮಾವೇಶದಲ್ಲೂ ಇದೇ ಸೂಚನೆಯನ್ನು ನೀಡಿದೆ. ಹಾಗಿದ್ದ ಮೇಲೆ ಹಾಲಿ SIR ನಡೆಯುತ್ತಿರುವ ಎಲ್ಲಾ ರಾಜ್ಯಗಳಲ್ಲೂ ಈ ಕೂಡಲೇ SIR ಸ್ಥಗಿತಗೊಳಿಸಬೇಕಲ್ಲವೇ? ಈಗ SIR ಎನ್ನುವುದು ಮತ್ತಷ್ಟು Irrational ಮತ್ತು Illegal ಆಗಿಲ್ಲವೇ?

2) ಅಷ್ಟು ಮಾತ್ರವಲ್ಲ.

2026 ರ ಜನವರಿ 22 ರಂದು ಅಯೋಗವು SIR ಏಕೆ ಅಗತ್ಯ ಎಂದು ಪ್ರತಿಪಾದಿಸುವಾಗ 2003 ರಲ್ಲಿ Citizenship Amendment Act ಗೆ ತಿದ್ದುಪಡಿ ಮಾಡಿದ ಮೇಲೆ SIR ನಡೆದಿಲ್ಲವಾದ್ದರಿಂದ ಈಗ ಆ ತಿದ್ದುಪಡಿಯ ಹಿನ್ನೆಲೆಯಲ್ಲಿ SIR ಮಾಡಲಾಗುತ್ತಿದೆ ಎಂದು ಸಬೂಬು ನೀಡಿತ್ತು.

2003 ರ Citizenship Amendment Act ತಿದ್ದುಪಡಿ ಪ್ರಕಾರ 2004 ರ ನಂತರ ಹುಟ್ಟಿದವರು ತಮ್ಮ ತಂದೆ ಮತ್ತು ತಾಯಿ ಇಬ್ಬರೂ ಭಾರತೀಯರು ಎಂದು ಪುರಾವೆ ನೀಡಿದರೆ ಮಾತ್ರ ಅವರ ನಾಗರಿಕತ್ವ ಊರ್ಜಿತವಾಗುತ್ತದೆ. ಇದೇ ಕಾರಣವನ್ನು ಕೊಟ್ಟೇ ಹೊಸ ಮತದಾರರೂ ಕೂಡ ತಮ್ಮ ತಂದೆ ತಾಯಿ 2003 ರಲ್ಲಿ ನಡೆದ SIR ನಲ್ಲಿ ಇದ್ದರೇ ಎಂಬ ಪ್ರಶ್ನೆಯನ್ನು ಹೊಸ ಮತದಾರರಿಗೆ ಶರತ್ತಾಗಿ SIR ಪ್ರಕ್ರಿಯೆಯಲ್ಲಿ ಸೇರಿಸಲಾಗಿತ್ತು. ಈಗ ಜನಂದೋಲನ ಮತ್ತು ಅಯೋಗದ ಒಳಗಿನ ಮತಬೇದದ ಕಾರಣ ಆ ಶರತ್ತನ್ನು ಹೊಸ ಮತದಾರರಿಗೆ ತೆಗೆದು ಹಾಕಲಾಗಿದೆ. ಅಂದರೆ SIR ದುಷ್ಟ ಉದ್ದೇಶವನ್ನು ಈಡೇರಿಸಲು ರೂಪಿಸಲಾಗಿದ್ದ ದುಷ್ಟ ಸಾಧನವನ್ನು ಕಿತ್ತುಹಾಕಲಾಗಿದೆ. ಹೀಗಾಗಿ SIR ಉದ್ದೇಶಕ್ಕೊ ಮತ್ತು ಸಾಧನಕ್ಕೊ ಇದ್ದ logical nexus ಈಗ ಇಲ್ಲವಾಗಿದೆ.

ಇದೂ ಕೂಡ SIR ಉದ್ದೇಶವನ್ನು ಮತ್ತಷ್ಟು Irrational , Illegal and Improper ಮಾಡಿದೆ.

ಈ ಬಗ್ಗೆ ಅಯೋಗವು ಅಕ್ಟೊಬರ್ 1 ರಂದು ಹೊರಡಿಸಿರುವ ಆದೇಶದ ಪ್ರಕಾರ BLO ಗಳು ಈಗ :

1) SIR ಪೂರ್ವ ಪಟ್ಟಿ ಮತ್ತು ನಂತರದ ಪಟ್ಟಿಯನ್ನು ಹೋಲಿಸಿ SIR ನಲ್ಲಿ ಬಿಟ್ಟುಇಹೋದವರ ಪಟ್ಟಿಯನ್ನು ತಯಾರಿಸಬೇಕು.

2) ವಾರಕ್ಕೆ 25 ಮನೆಗಳಂತೆ ಒಂದು ತಿಂಗಳಲ್ಲಿ ಎಲ್ಲ ಮನೆಗಳಿಗೆ ಭೇಟಿ ಕೊಟ್ಟು ಬಿಟ್ಟು ಹೋದವರನ್ನು ಮಾಮೂಲಿ ಫ಼ಾರಂ 6 ರ ಮೂಲಕ ಸೇರಿಸಿಕೊಂಡು ERO ಪರಿಶೀಲನೆಗೆ ಕೊಡಬೇಕು.

3) ERO ಅದನ್ನು 1950ರ ಪ್ರಜಾಪ್ರತಿನಿಧಿ ಕಾಯಿದೆಯಂತೆ ಪರಿಶೀಲಿಸಿ ತೀರ್ಮಾನ ತೆಗೆದುಕೊಳ್ಳಬೇಕು.

ಹಾಗಿದ್ದ ಮೇಲೆ SIR ಮಾಡಿದ್ದೇಕೆ?

13 ಕೋಟಿ ಜನಗಳನ್ನು ಚಿತ್ರಹಿಂಸೆಗೆ ಗುರಿ ಮಾಡಿದ್ದೇಕೆ?

ಈಗಲೂ SIR ನಿಲ್ಲುತ್ತಿಲ್ಲವೇಕೆ?

ಆದ್ದರಿಂದ ಅಯೋಗದ ಹೊಸ ಆದೇಶದಲ್ಲೂ ಸ್ಪಷ್ಜ್ಟವಾಗಿರುವ SIR ನ Irrationality , Illegality and Impropriety ಕಾರಣಗಳಿಗೆ ಕೂಡಲೇ ರದ್ದುಗೊಳಿಸಬೇಕು. ಹಳೆಯ ಮತಪಟ್ಟಿ ಆಧಾರದಲ್ಲೇ ಬರಲಿರುವ ಚುನಾವಣೆಗಳನ್ನು ನಡೆಸಬೇಕು. ಸಾಕಷ್ಟು ಸಮಯಾವದಿ ಇಟ್ಟುಕೊಂಡು 1950 ರ ಕಾಯಿದೆಯನ್ವಯ ಸಾಮಾನ್ಯ ಮತಪಟ್ಟಿ ಪರಿಷ್ಕರಣೆ ಮಾಡಬೇಕು. SIR ಎಂಬ ಅನಗತ್ಯ, ಕ್ರೂರ ಹಾಗೂ ದುಷ್ಟ ದುರುದ್ದೇಶದ ಯೋಜನೆಯನ್ನು ದೇಶದ ಮೇಲೆ ಹೇರಿದ ಜ್ಞಾನೇಶ್ ಕುಮಾರ್ ಮತ್ತು ಅದಕ್ಕೆ ಕುಮ್ಮಕ್ಕು ಕೊಟ್ಟ ಪ್ರಧಾನಿ ರಾಜೀನಾಮೆ ಕೊಡಬೇಕು.

ಅಲ್ಲವೇ?

- ಶಿವಸುಂದರ್

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಶಿವಸುಂದರ್

contributor