×
Ad

ಯಶ್ವಿ ರಾವಲ್, ಅಮರನಾಥ ರಾಮಶೆಟ್ಟಿಗೆ ಚೆಸ್‌ಫಿಡೆಯಲ್ಲಿ ಉತ್ತಮ ರೇಟಿಂಗ್

Update: 2025-11-11 06:51 IST

ಕೊಪ್ಪಳ, ನ.10: ಜಗತ್ತಿನ ಅತ್ಯಂತ ಪ್ರಾಚೀನ ಆಟ ಎಂದು ಕರೆಸಿಕೊಳ್ಳುವ ಚದುರಂಗ ಆಟವನ್ನೂ ಆಡುವುದಷ್ಟು ಸುಲಭವಲ್ಲ. ಅದಕ್ಕೆ ಕಠಿಣ ಅಭ್ಯಾಸ ಮತ್ತು ಪರಿಶ್ರಮದ ಅಗತ್ಯವಿದೆ. ಅಂತಹ ಆಟವನ್ನು ತಮ್ಮೆಲ್ಲ ಬುದ್ದಿಶಕ್ತಿಯನ್ನು ಉಪಯೋಗಿಸಿ ಆಡಬೇಕಾಗಿರುತ್ತದೆ. ಅಂತಹ ಅಟವನ್ನು ಕೊಪ್ಪಳ ಜಿಲ್ಲೆಯ ಸಣ್ಣ ವಯಸ್ಸಿನ ಓರ್ವ ಬಾಲಕ ಮತ್ತು ಬಾಲಕಿ ತಮ್ಮ ಆಟದ ಮೂಲಕ ರಾಷ್ಟ್ರ ಮಟ್ಟದಲ್ಲಿ ಆಡುವಷ್ಟು ಹಂತಕ್ಕೆ ತಲುಪಿದ್ದಾರೆ.

ಜಿಲ್ಲೆಯ ಯಶ್ವಿ ರಾವಲ್(12) ಮತ್ತು ಅಮರನಾಥ ರಾಮಶೆಟ್ಟಿ (8)ಎಂಬವರು 13 ವರ್ಷದ ವರ್ಷದೊಳಗಿನ ರಾಜ್ಯ ಮಟ್ಟದ ಚೆಸ್ ಪಂದ್ಯಾವಳಿಯಲ್ಲಿ ಭಾಗವಹಿಸಿ ಚೆಸ್‌ಫಿಡೆ ರೇಟಿಂಗ್‌ನಲ್ಲಿ ಉತ್ತಮ ರೇಟಿಂಗ್ ಪಡೆದುಕೊಂಡಿದ್ದು, ಈ ರೇಟಿಂಗ್ ಎರಡು ಸಾವಿರಕ್ಕಿಂತ ಹೆಚ್ಚಾದರೆ ಅಂತಹವರು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಆಡಬಹುದಾಗಿದೆ. ಚದುರಂಗ ಆಟದ ಬಗ್ಗೆ ಗೊತ್ತಿರುವವರಿ ಚೆಸ್ ಫಿಡೇ ರೇಟಿಂಗ್ ಏನೆಂಬುದು ತಿಳಿದಿರುತ್ತದೆ.

ಚೆಸ್ ಫಿಡೇ ರೇಟಿಂಗ್ ಎಂದರೆ ಚದುರಂಗ ಆಟದಲ್ಲಿ ಆಡುವವ ಕ್ರೀಡಾ ಪಟು ಎಷ್ಟು ಸಾಮರ್ಥ್ಯವನ್ನು ಹೊಂದಿದ್ದಾನೆ ಎಂದು ಅಳೆಯುವುದು ಅಥವಾ ಇನ್ನು ಸರಳ ಭಾಷೆಯಲ್ಲಿ ಹೇಳುವುದಾರೆ ಚದುರಂಗ ಆಟದಲ್ಲಿ ನೀವು ಯಾವ ಹಂತದ ಆಟಗಾರರೊಂದಿಗೆ ಆಡಬಹುದು ಎಂದು ಅಳೆಯುವುದಾಗಿದೆ.

ಕೊಪ್ಪಳ ಜಿಲ್ಲೆಯಲ್ಲಿ ಚದುರಂಗ ಆಟಕ್ಕೆ ಕೆಲ ತಿಂಗಳ ಹಿಂದೆ ಯಾವುದೇ ಅಸೋಶಿಯೇಷನ್ ಇರಲಿಲ್ಲ ಕೆಲ ತಿಂಗಳ ಹಿಂದೆ ಇಲ್ಲಿಯ ಸ್ಥಳೀಯ ಪ್ರಾಧ್ಯಾಪಕ ಮತ್ತು ಇತರರು ಸೇರಿಕೊಂಡು ಒಂದು ಅಸೋಶಿಯೇಷನ್‌ಅನ್ನು ಪ್ರಾರಂಭಿಸಿ ಇಲ್ಲಿ ಮಕ್ಕಳಿಗೆ ಉಚಿತವಾಗಿ ತರಬೇತಿಯನ್ನು ನೀಡಲಾಗುತ್ತಿದ್ದು ಸುಮಾರು 13-15 ಮಕ್ಕಳು ಇಲ್ಲಿ ನಿತ್ಯ ತರಬೇತಿ ಪಡೆಯುತಿದ್ದಾರೆ.

ಈ ತರಬೇತಿಯ ಸದುಪಯೋಗವನ್ನು ಪಡೆದು ಕೊಂಡು ಜಿಲ್ಲೆಯಿಂದ ಇಬ್ಬರು ವಿದ್ಯಾರ್ಥಿಗಳು ಹಾಸನದಲ್ಲಿ ಜರುಗಿದ 13 ವರ್ಷದೊಳಗಿನ ರಾಜ್ಯ ಮಟ್ಟದ ಚೆಸ್ ಪಂದ್ಯಾವಳಿಯಲ್ಲಿ ಭಾಗವಹಿಸಿ ಚೆಸ್ ಫಿಡೆ ರೇಟಿಂಗನಿಂದ ಒಳ್ಳೆಯ ಕ್ರಮಾಂಕವನ್ನು ಪಡೆದುಕೊಂಡು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ಸರಕಾರಿ ಶಾಲೆಯಲ್ಲಿ ಮೂರನೇ ತರಗತಿ ಓದುವ ಅಮರನಾಥ ರಾಮಶೆಟ್ಟಿ ಎನ್ನುವ ಬಾಲಕ ತಮ್ಮ ತಂದೆಯ ಸಹಾಯದಿಂದ ಆನ್‌ಲೈನ್ ಮೂಲಕ ಸಿಗುವ ತರಬೇತಿಯನ್ನು ಪಡೆದು ಕೊಂಡು ಈ ಸಾಧನೆ ಮಾಡಿದ್ದಾನೆ.

ಯಶ್ವಿ ರಾವಲ್ ಎನ್ನುವ ಬಾಲಕಿ ಯಾವುದೇ ತರಬೇತಿಯನ್ನೇ ಪಡೆದುಕೊಳ್ಳದೆ ಕೇವಲ ತನ್ನ ತಾಯಿ ನೀಡಿದ ಮಾರ್ಗ ದರ್ಶನದಲ್ಲಿ ಚೆಸ್ ಫಿಡೇ ರೇಟಿಂಗನಲ್ಲಿ 1,524 ಕ್ರಮಾಂಕವನ್ನು ಪಡೆದಿದ್ದಾಳೆ. ಬಾಲಕಿ ರಾಜ್ಯ ಮಟ್ಟದ ಐದು ಪಂದ್ಯಗಳನ್ನು ಆಡಿ ಅದರಲ್ಲಿ ಎರಡು ಡ್ರಾ ಮತ್ತು ಎರಡರಲ್ಲಿ ಜಯ ಮತ್ತು ಒಂದು ಪಂದ್ಯವನ್ನು ಸೋತು ಚೆಸ್ ಫಿಡೆ ರೇಟಿಂಗ್‌ನಲ್ಲಿ ಉನ್ನತ ಮಟ್ಟಕ್ಕೆ ತಲುಪಿದ್ದಾಳೆ.

ಯಶ್ವಿ ರಾವಲ್ 1,524 ಶ್ರೇಣಿ ಪಡೆದು ಕೊಂಡಿದ್ದರೆ, ಅಮರನಾಥ ರಾಮಶೆಟ್ಟಿ 1,460 ಶ್ರೇಣಿ ಪಡೆದು ಕೊಂಡಿದ್ದಾರೆ, ಗದಗ ದಲ್ಲಿ ನಡೆ ಒಂದು ಟೂರ್ನಮೆಂಟ್ ನಲ್ಲಿ ಸುಮಾರು 70 ಜನ ವಿವಿಧ ವಯಸ್ಸಿನ ಆಟಗಾರರ ಜೊತೆ ಆಡಿ ಟಾಪ್ ಐದು ಸ್ಥಾನಗಳಲ್ಲಿ ಇದ್ದರು, ಇವರಿಬ್ಬರೂ ಕೂಡ ಇನ್ನೂ ಸ್ವಲ್ಪ ಪ್ರಯತ್ನ ಮಾಡಿ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಗ್ರ್ಯಾಂಡ್ ಮಾಸ್ಟರ್ ಜೊತೆ ಆಡಬಲ್ಲರು.

ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಆಡಲು ಎರಡು ಸಾವಿರ ಕ್ರಮಾಂಕ ಬೇಕು ಮತ್ತು ಇದಕ್ಕೆ ಯಶ್ವಿ ಮತ್ತು ಅಮರನಾಥ್ ಸ್ವಲ್ಪವೇ ದೂರ ಉಳಿದಿದ್ದು ಒಳ್ಳೆಯ ತರಬೇತಿ ನೀಡಿದರೆ ಇವರಿಬ್ಬರು ರಾಷ್ಟ್ರೀಯ ಮಟ್ಟದಲ್ಲಿ ಕೊಪ್ಪಳ ಮತ್ತು ರಾಜ್ಯವನ್ನು ಪ್ರತಿನಿಸುತ್ತಾರೆ.

ಸದ್ಯ ಕೊಪ್ಪಳದಲ್ಲಿ ಚದುರಂಗ ಆಟಕ್ಕೆ ನುರಿತ ತರಬೇತು ದಾರಾರು, ಆಟಕ್ಕೆ ಚೆಸ್ ಬೋರ್ಡ್ ಮತ್ತು ವಾತಾವರಣ ಇಲ್ಲ, ಇಲ್ಲಿ ಆಡಲು ತಾವೇ ತಮ್ಮ ಮನೆಯಿಂದ ಆಟೋಪಕರಣ ಗಳನ್ನು ತಂದು ಆಡಬೇಕಾಗಿದೆ ಈ ಆಟಕ್ಕೆ ಸರ್ಕಾರ ಪ್ರೋನೀಡರೆ ಹೀಗೆ ಮಕ್ಕಳು ಜಿಲ್ಲೆಗೆ ಕೀರ್ತಿ ತರುತ್ತಾರೆ ಎಂಬುದು ಜನರ ಆಶಯವಾಗಿದೆ.

ನಾವು ಕ್ರೀಡಾ ಇಲಾಖೆ ವತಿಯಿಂದ ಚದುರಂಗ ಆಟದ ಒಂದು ಕಾರ್ಯಕ್ರಮವನ್ನು ಆಯೋಜಿಸಿದ್ದೆವು, ಈ ಕಾರ್ಯಕ್ರಮದಲ್ಲಿ ಇವರಿಬ್ಬರು ಭಾಗವಹಿಸಿದ್ದರು. ಇಲ್ಲಿ ಆಡಿ ಮುಂದೆ ರಾಜ್ಯ ಮಟ್ಟಕ್ಕೆ ಆಡಿ ಚೆಸ್ ಫಿಡೆ ರೇಟಿಂಗ್‌ನಲ್ಲಿ ಉತ್ತಮ ಕ್ರಮಾಂಕ ಪಡೆದ್ದಾರೆ, ಇದರಿಂದ ಇವರು ಇನ್ನು ಕಡಿಮೆ ವಯಸ್ಸಿನಲ್ಲಿ ಇಷ್ಟೊಂದು ಚೆಸ್‌ಫಿಡೆ ರೇಟಿಂಗ್ ಪಡೆದಿರುವುದರಿಂದ ಇವರಿಬ್ಬರ ಮುಂದೆ ಗ್ರಾಂಡ್ ಮಾಸ್ಟರ್‌ಗಳ ಜೊತೆ ಆಡ ಬಹುದಾಗಿದೆ, ಹೀಗೆ ಮುಂದು ವರಿಸಿಕೊಂಡು ಹೋದರೆ ಇವರಿಗೆ ಒಳ್ಳೆಯ ಭವಿಷ್ಯ ಸಿಗಲಿದೆ.

-ವಿಟ್ಟಲ್, ಸಹಾಯಕ ನಿರ್ದೇಶಕ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕೊಪ್ಪಳ

ನಾವು ನಮ್ಮ ಮಗಳಿಗೆ ನಮ್ಮ ಮನೆಯಲ್ಲಿ ಮಾತ್ರ ಚೆಸ್ ಕುರಿತು ಹೇಳಿದ್ದೇವು, ಇವಳು ಜಿಲ್ಲಾ ಮಟ್ಟದಲ್ಲಿ ಆಡಿ ಮೊದಲನೇ ಸ್ಥಾನವನ್ನು ಪಡೆದಳು ಆಗ ನಮಗೆ ನಮ್ಮ ಮಗಳು ಆಡುತ್ತಾಳೆ ಎಂದು ತಿಳಿಯಿತು. ಆದರೆ ನಮಗೆ ಆಟದ ನಿಯಮಗಳಾಗಲಿ ಗೊತ್ತಿರಲಿಲ್ಲ, ಕ್ರೀಡಾ ಇಲಾಖೆ ಅಧಿಕಾರಿಗಳು ನಮಗೆ ಸಹಕಾರ ನೀಡಿ ಆಡಿಸಿದರು, ನಾವು ಇಲ್ಲೆ ರಾಷ್ಟ್ರೀಯ ಮಟ್ಟದ ಆಟಕ್ಕೆ ತರಬೇತಿಯನ್ನು ನೀಡುತ್ತಿದ್ದೇವೆ.

-ವಿಜಯ ರಾವಲ್, ಯಶ್ವಿ ರಾವಲ್ ಅವರ ತಾಯಿ

ನಮ್ಮ ಮಕ್ಕಳು ಚೆಸ್ ಅನ್ನು ಚೆನ್ನಾಗಿ ಆಡುತ್ತಾರೆ, ಆದರೆ ಅವರಿಗೆ ಸರಿಯಾದ ಮಾರ್ಗ ದರ್ಶನ ಇಲ್ಲ. ಆದ್ದರಿಂದ ಚೆಸ್‌ನಲ್ಲಿ ಹಿಂದೆ ಬೀಳುತ್ತಾರೆ, ಸರಕಾರದಿಂದ ಒಳ್ಳೆಯ ತರಬೇತಿ ವ್ಯವಸ್ಥೆ ಆದರೆ ನಮ್ಮ ಮಕ್ಕಳು ರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸುತ್ತಾರೆ.

-ನಾಗರಾಜ್ ಪಾಟೀಲ್, ಚೆಸ್ ತರಬೇತಿ ಪಡೆಯುತ್ತಿರುವ ಬಾಲಕನ ತಂದೆ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಎಂ.ಡಿ ಅಖೀಲ್ ಉಡೇವು

contributor

Similar News