ಸಿರವಾರ: ಸಂವಿಧಾನ ಜಾಗೃತಿ ಸಮಿತಿಯಿಂದ ಬೃಹತ್ ಪ್ರತಿಭಟನೆ
ಜಾತಿ ವ್ಯವಸ್ಥೆ ಮೂಲಕ ದೇಶ ಕೊಳ್ಳೆ ಹೊಡೆಯಲು ತಂತ್ರ : ಉದಯಕುಮಾರ್ ಸಾಹುಕಾರ್
ರಾಯಚೂರು : ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಮೇಲೆ ವಕೀಲ ರಾಕೇಶ್ ಶರ್ಮ ಶೂ ಎಸೆತ ಯತ್ನ ನಡೆಸಿದ ಘಟನೆಯನ್ನು ಖಂಡಿಸಿ ಸಂವಿಧಾನ ಜಾಗೃತಿ ಸಮಿತಿಯಿಂದ ಗುರುವಾರ ಬಸವೇಶ್ವರ ವೃತ್ತದಿಂದ ತಹಶೀಲ್ದಾರರ ಕಚೇರಿವರೆಗೆ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಎನ್.ಉದಯಕುಮಾರ್ ಸಾಹುಕಾರ್ ಅವರು, ಮುಖ್ಯ ನ್ಯಾಯಾಮೂರ್ತಿ ಗವಾಯಿ ಅವರ ಮೇಲೆ ಶೂ ಎಸೆದಿದ್ದು ಇಡೀ ಭಾರತದ ನ್ಯಾಯಾಂಗ ವ್ಯವಸ್ಥೆಗೆ ಅವಮಾನಗೊಳಿಸಿದಂತಾಗಿದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡಿದ ಅಪಮಾನ. ಘಟನೆಗೆ ಕಾರಣವಾದ ವ್ಯಕ್ತಿಯನ್ನು ಶಿಕ್ಷಿಸಿ, ಆ ವ್ಯಕ್ತಿಯನ್ನು ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು.
ನಂತರ ಎಂ ಬಸವರಾಜ ಭಂಡಾರಿ ಮಾತನಾಡಿ, 1949ರಲ್ಲಿ ಜಂತರ ಮಂಥರನಲ್ಲಿ ಅಂಬೇಡ್ಕರ್ ಸಂವಿಧಾನ, ಹಿಂದೂ ವಿರೋಧಿಯಾಗಿದೆ ಎಂದು ಪ್ರತಿಭಟಿಸಿದವರೇ ಇಂದು ದಲಿತ ಸಿ ಜೆ ಭೂಷಣ ಗವಾಯಿ ದಲಿತನೆಂಬ ಕಾರಣಕ್ಕೆ ಮನುವಾಧಿ ವಿಚಾರವುಳ್ಳ ಹಿರಿಯ ನಾಗರಿಕನಾಗಿ ಅಪಭುದ್ಧನಂತೆ ಸಂಕುಚಿತ ಮನೋಭಾವದಿಂದ ಇಂತಹ ಹೀನ ಕೃತ್ಯ ಮತ್ತು ನ್ಯಾಯಂಗದ ಮೇಲೆ ಹಲ್ಲೆ ನಡೆಸಿದ ರಾಕೇಶ ಶರ್ಮ ಮೇಲೆ ದೇಶ ದ್ರೋಹ ಮತ್ತು ಗಡಿಪಾರು ಮಾಡಬೇಕೆಂದ ಅವರು, ಇದು ರಾಜಪ್ರಭುತ್ವ ಅಲ್ವ ಪ್ರಜಾಪ್ರಭುತ್ವ ಎಂದರು.
ಪ್ರತಿಭಟನೆಗೆ ಮುನ್ನ ಬಸವೇಶ್ವರ ವೃತ್ತದಿಂದ ತಹಶೀಲ್ದಾರರ ಕಚೇರಿವರೆಗೆ ಪಾದಯಾತ್ರೆ ಮೂಲಕ ಪ್ರತಿಭಟನೆ ನಡೆಸಿ ತಹಶೀಲ್ದಾರರ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ವಿಜಯರಾಣಿ, ಜಯಪ್ಪ ಗುತ್ತೆದಾರ್, ಸೂರಿ ದುರುಗಣ್ಣ ನಾಯಕ, ಗಡ್ಲ ಚನ್ನಬಸವ ನಾಯಕ, ರಾಘವೇಂದ್ರ ಖಾಜನಗೌಡ, ವೆಂಕಟೇಶ ಶಂಕ್ರಿ, ಮಲ್ಲಪ್ಪ ದೊಡ್ಡಮನಿ, ಎಂ ಪ್ರಕಾಶಪ್ಪ, ಹರಳಪ್ಪ ಯದ್ದಲದಿನ್ನಿ, ಎಂ ಮನೋಹರ್, ದಾನಪ್ಪ, ಮೇಶಾಕ್ ಕೆಂಪು, ಪರಶುರಾಮ ಸರೋದೆ, ಹುಲಿಗೇಪ್ಪ ಮಡಿವಾಳ, ಬಸವರಾಜ ನಾಯಕ ಮಲ್ಲಟ, ಚಂದ್ರು ಹಡಪದ, ಡಿ.ಹೆಚ್ ಭೀಮಣ್ಣ, ಮೇಶಾಕ್ ದೊಡ್ಮನಿ, ಸೂಫಿ, ಹುಲಿಗೇಪ್ಪ ಕರಿಬಿಲ್ಕರ್, ಶಂಕರ ಮಲ್ಲಟ, ಅಮರೇಶ ಮುರ್ಕಿಗುಡ್ಡ, ಇರ್ಫನ್ ಬಡಿಗೇರ, ಶಾಂತಪ್ಪ ಪಿತಗಲ್, ರಾಜು, ರಂಗನಾಥ ಬೋವಿ, ಹನುಮಂತ ಮನ್ನಾಪುರಿ, ಬಾಲಪ್ಪ, ಹನುಮಂತ ಕುಂಬಾರ, ಎಂ.ಡಿ ರಫೀ, ವಿರುಪಾಕ್ಷಿ ಹಳ್ಳಿಹೊಸೂರು ಸೇರಿದಂತೆ ಇತರರಿದ್ದರು.