ರಾಯಚೂರು| ಡಿವೈಎಫ್ಐ ಹಟ್ಟಿ 3ನೇ ವಾರ್ಡ್ ಘಟಕ ರಚನೆ
Update: 2025-12-05 11:54 IST
ಹಟ್ಟಿ: ಹಟ್ಟಿ ಚಿನ್ನದ ಗಣಿಯಲ್ಲಿ ಯುವಜನರಿಗೆ ಉದ್ಯೋಗ ಸೃಷ್ಟಿಸಿ ಸ್ಥಳೀಯರಿಗೆ ಅದ್ಯತೆ ನೀಡಲು ಒತ್ತಾಯಿಸಿ ನಡೆಸುವ ಜನವರಿ ತಿಂಗಳಲ್ಲಿ ಹಟ್ಟಿಯಲ್ಲಿ ನಡೆಯುವ ಯುವಜನ ಸಮಾವೇಶದ ಭಾಗವಾಗಿ ಡಿವೈಎಫ್ಐ ಹಟ್ಟಿಯ 3ನೇ ವಾರ್ಡ್ ಘಟಕ ರಚನೆ ಮಾಡಲಾಯಿತು.
ಅಧ್ಯಕ್ಷರಾಗಿ ಇಮ್ರಾನ್, ಪ್ರಧಾನ ಕಾರ್ಯದರ್ಶಿ ಖಾಸೀನಾಥ್, ಉಪಾಧ್ಯಕ್ಷರಾಗಿ ಮಹ್ಮದ್ ರಫಿ, ಚಂದ್ರು, ಸಹ ಕಾರ್ಯದರ್ಶಿಗಳಾಗಿ ಖಾಜಾ, ಮಾಜೀದ್, ಖಜಾಂವಿಯಾಗಿ ಸನಾನ್, ಸದಸ್ಯರಾಗಿ ರವಿ, ರಾಜಾ, ಇರ್ಫಾನ್ , ಗೌಸ್, ಹರ್ಷದ್, ಸಮೀರ್, ಅಬ್ಬಾಸ್, ಜಾವೀದ್, ಮಹ್ಮದ್, ರಿಜ್ವಾನ್, ಇಮ್ತಿಯಾಜ್, ಗಫುರ್, ಜಬ್ಬರ್, ಸಫಾನ್, ಸೋಯಬ್, ರುಫಾನ್, ಇಬ್ರಾಹಿ, ಬಸು ಆಯ್ಕೆಯಾಗಿದ್ದಾರೆ.
ಎಸ್ಎಫ್ಐ ಜಿಲ್ಲಾಧ್ಯಕ್ಷ ರಮೇಶ ವೀರಾಪುರ, ಡಿವೈಎಫ್ಐ ಜಿಲ್ಲಾ ಸಂಚಾಲಕ ಸಮಿತಿ ಸದಸ್ಯ ಅಲ್ಲಾಭಕ್ಷ ಅವರು ಸಭೆಯನ್ನುದ್ದೇಶಿಸಿ ಮಾತನಾಡಿದರು.
ಡಿವೈಎಫ್ಐ 9ನೇ ವಾರ್ಡ್ ಘಟಕದ ಅಧ್ಯಕ್ಷ ರಿಯಾಜ್ ಖುರೇಷಿ, 7 ನೇ ಘಟನಕದ ಅಧ್ಯಕ್ಷ ಪಯಾಜ್ ಉಪಸ್ಥಿತರಿದ್ದರು.