×
Ad

ಯರಗೇರಾ ಗ್ರಾಮಕ್ಕೆ ಬಸ್ ನಿಲ್ದಾಣ ನಿರ್ಮಿಸಲು ಒತ್ತಾಯಿಸಿ ಸಿಪಿಐ(ಎಂಎಲ್) ಲಿಬರೇಶನ್ ಪಕ್ಷದಿಂದ ಮನವಿ

Update: 2025-10-24 14:12 IST

ರಾಯಚೂರು: ರಾಯಚೂರು ತಾಲೂಕಿನ ದೊಡ್ಡ ಹೋಬಳಿಯಾದ ಯರಗೇರಾ ಗ್ರಾಮದಲ್ಲಿ ಸುಸಜ್ಜಿತ ಬಸ್ ನಿಲ್ದಾಣವಿಲ್ಲದೇ ಗ್ರಾಮಸ್ಥರು ತೀವ್ರ ಪರದಾಡುತ್ತಿದ್ದಾರೆ. 20ಕ್ಕೂ ಹೆಚ್ಚು ಹಳ್ಳಿಗಳಿಗೆ ಸಂಪರ್ಕಿಸುವ ಯರಗೇರಾ ಗ್ರಾಮಕ್ಕೆ ಬಸ್ ನಿಲ್ದಾಣ ನಿರ್ಮಿಸಬೇಕೆಂದು ಸಿಪಿಐ(ಎಂಎಲ್) ಲಿಬರೇಶನ್ ಪಕ್ಷದ ಯರಗೇರಾ ಹೋಬಳಿ ಸಮಿತಿ ಒತ್ತಾಯಿಸಿದೆ.

ಈ ಕುರಿತು ರಾಯಚೂರು ಲೋಕಸಭಾ ಸದಸ್ಯರಿಗೆ ಹಾಗೂ ರಾಯಚೂರು ಗ್ರಾಮೀಣ ವಿಧಾನಸಭಾ ಸದಸ್ಯರಿಗೆ ಮನವಿ ಸಲ್ಲಿಸಿ, ಹೋಬಳಿ ಕೇಂದ್ರವಾದ ಯರಗೇರಾ ಗ್ರಾಮದಲ್ಲಿ ಸುಮಾರು ಎರಡು ಮೂರು ದಶಕದಿಂದ ಬಸ್ ನಿಲ್ದಾಣ ಇಲ್ಲದಿರುವುದರಿಂದ ಶಾಲಾ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು, ಗ್ರಾಮಸ್ಥರು, ಕೂಲಿ ಕಾರ್ಮಿಕರು ರಸ್ತೆ ಮಧ್ಯೆಯೇ ನಿಲ್ಲುವಂತಾಗಿದೆ. ಈ ಹಿಂದೆ ಹಳೆಯ ಬಸ್ ತಂಗುದಾಣ ನಿರ್ಮಿಸಿದ್ದರು ಎಲ್ಲಿದೆ ಅಂತಾನೇ ಕಾಣುತ್ತಿಲ್ಲ ಶಿಥಿಲಾವಸ್ಥೆಯಿಂದಾಗಿ ವ್ಯಾಪಾರಿ ಮಳಿಗೆಗಳ ಹಿಂದೆ ಮರೆಯಾಗಿದೆ ಸುಮಾರು 20ಕ್ಕೂ ಹೆಚ್ಚು ಹಳ್ಳಿಗಳಿಗೆ ಮತ್ತು ಮಂತ್ರಾಲಯ ಮತ್ತು ಶ್ರೀಶೈಲಕ್ಕೆ ಅಂತಹ ಪ್ರವಾಸಿ ತಾಣಗಳಿಗೆ ಹೋಗುವ ಮದ್ಯದಲ್ಲಿ ಇರುವ ಜಂಕ್ಷನ್ ಇದಾಗಿದೆ. ತಲಮಾರಿ ಮಿರ್ಜಾಪುರ, ಇಡಪನೂರು, ಮಿಡಗಲದಿನ್ನಿ, ಗಧಾರ, ಜಂಬಲದಿನ್ನಿ ,ಕೊತ್ತಾದ್ದೊಡ್ಡಿ, ಕನ್ಯಾದೊಡ್ಡಿ, ಮಲ್ಲಾಪುರು, ಮುರ್ಕಿದೊಡ್ಡಿ, ಉಪ್ರಾಳ, ಗೋಡಿಹಾಳ್ ಅಲ್ಕೋರು ಮುಂತಾದ ಹಳ್ಳಿಗಳ ಶಾಲಾ ಕಾಲೇಜು ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು, ಸರ್ಕಾರಿ ನೌಕರರು, ಖಾಸಗಿ ನೌಕರರು ಮತ್ತು ನಮ್ಮ ಅದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯಕ್ಕೆ ಹೋಗುವ ವಿದ್ಯಾರ್ಥಿಗಳು ಹಾಗೂ ನಗರಗಳಿಗೆ ವಲಸೆ ಹೋಗುವ ಕಾರ್ಮಿಕರಿಗೆ ಹಿರಿಯ ನಾಗರಿಕರು ಬಸ್ ನಿಲ್ದಾಣವಿಲ್ಲದೇ ಪರದಾಡುತ್ತಿದ್ದಾರೆ. ಬೆಳಗಿನ ಜಾವ ಮತ್ತು ರಾತ್ರಿ ಹೊತ್ತಿನಲ್ಲಿ ಬಸ್ ನಿಲ್ದಾಣ ಇಲ್ಲದೆ ಇರುವುದರಿಂದ ವಿಶೇಷವಾಗಿ ಮಹಿಳೆಯರು ಬಹಳಷ್ಟು ತೊಂದರೆಗಳು ಅನುಭವಿಸುತ್ತಿದ್ದಾರೆ.

ಯರಗೇರಾ ಗ್ರಾಮದಿಂದ ರಾಷ್ಟ್ರೀಯ ಹೆದ್ದಾರಿ NH.167 ಹೈದ್ರಾಬಾದ್ ದಿಂದ ಬೆಂಗಳೂರಿಗೆ ನೇರವಾದ ಹೆದ್ದಾರಿ ಸಂಪರ್ಕ ಇದೆ. ಮುಖ್ಯವಾಗಿ ಪ್ರತಿ ಗುರುವಾರ ಮತ್ತು ಶನಿವಾರ ರಾಯರ ದರ್ಶನಕ್ಕೆ ಭಕ್ತರು (ಮಂತ್ರಾಲಯ) ಕೇವಲ 15 ರಿಂದ 16 ಕಿ.ಮೀ ತೆಲಂಗಾಣ ಮತ್ತು ಆಂಧ್ರಪ್ರದೇಶ ಗಡಿಭಾಗ ಹೊಂದಿರುವುದರಿಂದ ಜನರ ಪ್ರಯಾಣದ ಪ್ರಮಾಣ ಅತಿ ಹೆಚ್ಚು ಆಗಿರುವುದರಿಂದ ನಮಗೆ ಬಸ್ ತುಂಗುದಾಣ ಅತಿ ಅವಶ್ಯಕವಾಗಿದೆ.

ಯರಗೇರಾ ಗ್ರಾಮದಲ್ಲಿ ಬಸ್ ತುಂಗುದಾಣ ವ್ಯವಸ್ಥೆಯಾದರೆ ಕೆಲ ಸಮಯ ಬಸ್ ಗಳು ನಿಂತು ಪ್ರಯಾಣ ಆರಂಭಿಸಿದರೆ ನಮ್ಮ ಯರಗೇರಾ ಭಾಗದ ಜನರಿಗೆ ಅನುಕೂಲವಾಗುತ್ತದೆ. ಕೂಡಲೇ ಗ್ರಾಮಸ್ಥರ ಅಳಲನ್ನು ಗಂಭೀರವಾಗಿ ಪರಿಗಣಿಸಿ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಿಸಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಗ್ರಾಮ ಘಟಕ ಸಮಿತಿಯ ಅಧ್ಯಕ್ಷರಾದ ಮೊಹಮ್ಮದ್ ಹನೀಫ್ ಅಬಕಾರಿ, ಮುಖಂಡರಾದ ಜಗನ್ನಾಥ್ ನಾಯಕ್, ಜಗದೀಶ್ ಹಡಪದ್, ಮೊಯಿಜ್, ಭೀಮೇಶ್ ,ಮೊಹಮ್ಮದ್ ಆರಿಫ್, ಇಕ್ಬಾಲ್ ಆಫ್ರೋಜ್ ,ಗೌಸ್ ,ಜಿಲಾನಿ , ಆಂಜನೇಯ್ಯ ಮಲ್ಲೇಶ್, ವಿರೇಶ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News