ಕನ್ನಡ ಸೇನೆಯ ಮಹಿಳಾ ಘಟಕದ ಪದಾಧಿಕಾರಿಗಳ ನೇಮಕ; ಅನಿತಾ ನವಲಕಲ್ ಅಧ್ಯಕ್ಷೆ, ಅಶ್ವಿನಿ ಕಾರ್ಯದರ್ಶಿ
ರಾಯಚೂರು: ಕನ್ನಡ ಸೇನೆ ಕರ್ನಾಟಕದ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷರನ್ನಾಗಿ ಅನಿತಾ ನವಲಕಲ್ ಹಾಗೂ ಜಿಲ್ಲಾ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಅಶ್ವಿನಿ ಎಂ ರಾಯಚೂರು ಹಾಗೂ ಜಿಲ್ಲಾ ಮಹಿಳಾ ಘಟಕದ ಕಾರ್ಯಧ್ಯಕ್ಷರನ್ನಾಗಿ ನಿವೇದಿತಾ ಅವರನ್ನು ನೇಮಕ ಮಾಡಲಾಯಿತು.
ಕನ್ನಡ ಸೇನೆ ಕರ್ನಾಟಕ ಕೇಂದ್ರಕಚೇರಿ ಬೆಂಗಳೂರಿನಲ್ಲಿ ಇಂದು ರಾಜ್ಯಾಧ್ಯಕ್ಷ ಕೆ.ಆರ್ ಕುಮಾರಣ್ಣ ಅವರು ಮೂವರಿಗೆ ನೇಮಕಾತಿ ಆದೇಶ ಪತ್ರ ನೀಡಿ ಸನ್ಮಾನಸಿದರು. ಈ ವೇಳೆ ಉತ್ತದ ಕರ್ನಾಟಕ ಅಧ್ಯಕ್ಷ ಚನ್ನಬಸ್ಸಪ್ಪ ಜೆಕಿನ್ ರಾಜ್ಯ ಸಲಹೆಗಾರ ನರಸಿಂಹಲು, ರಾಯಚೂರು ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಮರ್ಕಂದಿನ್ನಿ ಅವರು ಪಾಲ್ಗೊಂಡಿದ್ದರು.
ಸರಳವಾಗಿ ನಡೆದ ಕಾರ್ಯಕ್ರಮದಲ್ಲಿ ಭುವನೇಶ್ವರ ದೇವಿಗೆ ಪುಷ್ಪ ಅರ್ಚನೆ ಮಾಡಿ ನಮನ ಸಲ್ಲಿಸಲಾಯಿತು. ಬಳಿಕ ನೂತನ ಪದಾಧಿಕಾರಿಗಳಿಗೆ ಸನ್ಮಾನಿಸಿ ಕನ್ನಡ ನಾಡಿನ ಸೇವೆಗೆ, ಸಂಘಟನೆಯ ತತ್ವ ಸಿದ್ಧಾಂತಗಳನ್ನು ಅಳವಡಿಸಿಕೊಂಡು ನಿಷ್ಠೆ,ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕು ಎಂದು ಸಲಹೆ ನೀಡಲಾಯಿತು.
ರಾಜ್ಯಾಧ್ಯಕ್ಷರ ಮುಖಾಂತರ ನೇಮಕಾತಿ ಆದೇಶ ಪತ್ರಗಳನ್ನು ಕೇಂದ್ರ ಕಛೇರಿಯಲ್ಲಿ ವಿತರಿಸಿದರು ಜಿಲ್ಲಾಮಹಿಳಾ ಘಟಕದ ಪದಾಧಿಕಾರಿಗಳಿಗೆ ಕನ್ನಡದ ನೆಲ ಜಲ ಭಾಷೆ ಕಲೆ ಸಂಸ್ಕೃತಿ ಗೌರವಿಸುವುದು ತಾಯಿ ಭುವನೇಶ್ವರಿಯ ಆಶೀರ್ವಾದದಿಂದ ಸಂಘಟನೆಯ ತತ್ವ ಸಿದ್ಧಾಂತಗಳನ್ನು ಅಳವಡಿಸಿಕೊಂಡು ಸಂಘಟನೆಯ ಬೆಳೆಸುವಂತಹ ಕೆಲಸವನ್ನು ನಿಷ್ಠೆ ಪ್ರಾಮಾಣಿಕತೆ ದಕ್ಷತೆಯಿಂದ ಕಾರ್ಯ ಪ್ರವೃತ್ತರಾಗಲು ರಾಜ್ಯಾಧ್ಯಕ್ಷರು ಸಲಹೆ ಸೂಚನೆ ಸಂದೇಶಗಳನ್ನು ಹೇಳಿದರು.