ಹಟ್ಟಿ: ಜನವಾದಿ ಮಹಿಳಾ ಸಂಘಟನೆ ವತಿಯಿಂದ ಮಹಿಳಾ ದೌರ್ಜನ್ಯ ವಿರೋಧಿ ಕಾರ್ಯಕ್ರಮ
ಹಟ್ಟಿ: “ಈ ರಾತ್ರಿ ನಮ್ಮದು, ಈ ಹಗಲು ನಮ್ಮದು – ಘನತೆಯ ಬದುಕು ನಮ್ಮ ಹಕ್ಕು” ಎಂಬ ಘೋಷಣೆಯೊಂದಿಗೆ ಹೆಣ್ಣು ಮಕ್ಕಳು ಹಾಗೂ ಮಹಿಳೆಯರ ಮೇಲಿನ ಎಲ್ಲಾ ರೀತಿಯ ದೌರ್ಜನ್ಯಗಳು 2025ರೊಂದಿಗೆ ಕೊನೆಯಾಗಬೇಕು ಎಂಬ ಸಂಕಲ್ಪದೊಂದಿಗೆ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ವತಿಯಿಂದ ಹಟ್ಟಿಯ ಕಾಂ. ಅಮರಗುಂಡಪ್ಪ ಬಸ್ ನಿಲ್ದಾಣದಲ್ಲಿ ಮಂಗಳವಾರ ರಾತ್ರಿ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಸಂಘದ ತಾಲ್ಲೂಕು ಅಧ್ಯಕ್ಷೆ ವನಜಾಕ್ಷಿ, ಸಿಪಿಎಂ ತಾಲ್ಲೂಕು ಕಾರ್ಯದರ್ಶಿ ರಮೇಶ್ ವೀರಾಪುರ, ಸಿಐಟಿಯು ಮುಖಂಡ ಬಾಬು ಭೂಪೂರು ಸಂದರ್ಭೋಚಿತವಾಗಿ ಮಾತನಾಡಿದರು.
ಪಟ್ಟಣದ ಪೈ ಭವನ ದಿಂದ ಕಾಂ.ಅಮರಗುಂಡಪ್ಪ ಬಸ್ ನಿಲ್ದಾಣ ರವರೆಗೆ ಮೇಣದ ಬತ್ತಿ ಹಿಡಿದು ರ್ಯಾಲಿ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ತಾಲೂಕು ಉಪಾಧ್ಯಕ್ಷೆ ಕೆ.ಎಸ್. ಶಾಂತಾ, ಸಾಹೀರಾ ಖಾನ್, ರಜಿಯಾ ಬೇಗಂ, ದುರುಗಮ್ಮ, ದೇವಮ್ಮ, ಜೈಬುನ್ನಿಸಾ, ಶಿವಮ್ಮ, ಕೆಪಿಆರ್ ಎಸ್ ಮುಖಂಡರಾದ ಮಹಾಂತೇಶ, ಸಿಐಟಿಯು ಮುಖಂಡರಾದ ಹನೀಫ್, ಹಾಜಿಬಾಬು ಕಟ್ಟಿಮನಿ, ನಿಂಗಪ್ಪ ಎಂ. ಸೇರಿದಂತೆ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಸದಸ್ಯರು ಉಪಸ್ಥಿತರಿದ್ದರು.