×
Ad

ದೇವದುರ್ಗ: ಬಾಲಕಿಯರ ಸರಕಾರಿ ಪ್ರೌಢ ಶಾಲೆ ಎಸ್‌ಡಿಎಂಸಿ ರಚನೆ, ಬಸವರಾಜ ನಾಯಕ ಅಧ್ಯಕ್ಷ

Update: 2025-12-31 14:26 IST

ದೇವದುರ್ಗ : ಪಟ್ಟಣದ ಬಾಲಕಿಯರ ಸರಕಾರಿ ಪ್ರೌಢ ಶಾಲೆಯ ನೂತನವಾಗಿ ಶಾಲಾ ಅಭಿವೃದ್ಧಿ ಮತ್ತು ಮೇಲುವಸ್ತುವಾರಿ ಸಮಿತಿಯ ಅಧ್ಯಕ್ಷರಾಗಿ ಜಿ. ಬಸವರಾಜ ನಾಯಕ, ಉಪಾಧ್ಯಕ್ಷರಾಗಿ ದುರಗಮ್ಮ ಇವರು ಆಯ್ಕೆಯಾಗಿದ್ದಾರೆಂದು ಬಾಲಕಿಯರ ಸರಕಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಮೃತ್ಯುಂಜಯ ಅವರು ತಿಳಿಸಿದ್ದಾರೆ.

ಅವರು ಪತ್ರಿಕಾ ಹೇಳಿಕೆ ನೀಡಿ, ಈಹಿಂದೆ ಕೂಡ ಎಸ್.ಡಿ.ಎಂ.ಸಿ. ರಚನೆ ಮಾಡಲು ಎರಡು ಭಾರಿ ಸಭೆ ಕರೆದ ವೇಳೆ ಪೂರ್ಣ ಪ್ರಮಾಣದಲ್ಲಿ ಪೋಷಕರು ಬಾರದೇ ಇರುವುದರಿಂದ  ಡಿ.30 ರಂದು ಕರೆದ ಸಭೆಯಲ್ಲಿ ಪಾಲಕರು ಹಾಜರಾಗಿದ್ದು, ಎಸ್.ಡಿ.ಎಂ.ಸಿ. ಅಧ್ಯಕ್ಷ ಮತ್ತು ಉಪಾಧ್ಯಕ್ಷರು ಸೇರಿದಂತೆ 9ಜನ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಸರಕಾರಿ ನೌಕರರ ಸಂಘದ ತಾಲೂಕ ಅಧ್ಯಕ್ಷ ಹನುಮಂತ್ರಾಯ ಶಾಖೆ, ಹಿರಿಯ ಶಿಕ್ಷಕರಾದ ಮಮತಾ ಆದಿ, ಮಹಾದೇವಪ್ಪ, ಯಲ್ಲನಗೌಡ, ಬಸಲಿಂಗಪ್ಪ ಗೆಜ್ಜೆಭಾವಿ, ದೇವರಾಜ್, ಸೇರಿದಂತೆ ಶಾಲೆಯ ಶಿಕ್ಷಕರು ಮತ್ತು ಪಾಲಕರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News