ರಾಯಚೂರು ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಜಿಲ್ಲಾ ಉಪಾಧ್ಯಕ್ಷರಾಗಿ ಡಾ. ಮೊಹಮ್ಮದ್ ಸುಹೈಲ್ ನಾಯಕ್ ನೇಮಕ
Update: 2025-12-31 11:42 IST
ರಾಯಚೂರು: ರಾಯಚೂರಿನ ಯುವ ಹೋರಾಟಗಾರ ಡಾ. ಮೊಹಮ್ಮದ್ ಸುಹೈಲ್ ನಾಯಕ್ ಅವರನ್ನು ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತ ಘಟಕದ ರಾಯಚೂರು ಜಿಲ್ಲಾ ಉಪಾಧ್ಯಕ್ಷರನ್ನಾಗಿ ಹಾಗೂ ಜಿಲ್ಲಾ ಕಾರ್ಯದರ್ಶಿಯಾಗಿ ಮೆಹಬೂಬ್ ಅವರನ್ನು ನೇಮಕ ಮಾಡಿ ಜಿಲ್ಲಾಧ್ಯಕ್ಷರಾದ ಸೈಯದ್ ಫಯಾಝುದೀನ್ ಅವರು ಆದೇಶ ಹೊರಡಿಸಿದ್ದಾರೆ .
ರಾಯಚೂರು ನಗರ ವಿಧಾನಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ಮೊಹಮ್ಮದ್ ಶಾಲಂ ಮತ್ತು ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಸೈಯದ್ ಫಯಾಝುದೀನ್ ಅವರು ಆದೇಶ ಪತ್ರವನ್ನು ನೀಡಿದರು.
ಈ ಸಂಧರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಯೂಸುಫ್ ಖಾನ್, ನರಸಿಂಹಲು ಮಾಡಗಿರಿ, ಶೌಕತ್ ಹಮ್ರಾಜ್ ಮತ್ತು ಹಲವು ಕಾರ್ಯಕರ್ತರು ಉಪಸ್ಥಿತರಿದ್ದರು.
ಎಸ್ ಡಿಪಿಐನಲ್ಲಿ ಅನೇಕ ವರ್ಷಗಳ ಕಾಲ ಕೆಲಸ ಮಾಡಿದ ಸುಹೈಲ್ ಅವರು, ದಲಿತ, ಅಲ್ಪಸಂಖ್ಯಾತ, ವಿದ್ಯಾರ್ಥಿಗಳ ಸಮಸ್ಯೆಗಳ ಕುರಿತು ಹೋರಾಟ ಮಾಡಿ ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದರು. ಕಾರಣಾಂತರಗಳಿಂದ ಪಕ್ಷ ತೊರೆದಿದ್ದರು.