ದೇವದುರ್ಗ | ಮಿನಿ ವಿಧಾನಸೌಧದಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಆಚರಣೆ
ದೇವದುರ್ಗ: ತಾಲೂಕು ಆಡಳಿತದ ವತಿಯಿಂದ ಮಿನಿ ವಿಧಾನಸೌಧದ ಸಭಾಂಗಣದಲ್ಲಿ ಶ್ರೀ ಗುರು ನಿಜಶರಣ ಅಂಬಿಗರ ಚೌಡಯ್ಯ ಜಯಂತಿಯನ್ನು ಮಂಗಳವಾರ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.
ತಾಲೂಕು ಕಾರ್ಯನಿರ್ವಾಹಕ ದಂಡಾಧಿಕಾರಿ ಹಾಗೂ ತಹಶೀಲ್ದಾರ್ ನಾಗಮ್ಮ ಕಟ್ಟಿಮನಿ ಅವರು ಅಂಬಿಗರ ಚೌಡಯ್ಯನವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಪುಷ್ಪ ನಮನ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಹಗಲು ವೇಷ ಸಾಂಸ್ಕೃತಿಕ ವೇದಿಕೆಯ ಸಂಚಾಲಕ ಹಾಗೂ ಕಸಾಪ ತಾಲೂಕು ಸಹ ಕಾರ್ಯದರ್ಶಿ ಶಿವರಾಜ್ ರುದ್ರಾಕ್ಷಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು.
ನಿಜಶರಣ ಅಂಬಿಗರ ಚೌಡಯ್ಯನವರು ತಮ್ಮ ನೇರ ನುಡಿ ಮತ್ತು ನಿಷ್ಟುರತೆಗೆ ಹೆಸರುವಾಸಿಯಾದವರು. ಕ್ರಾಂತಿಕಾರಿ ವೈಚಾರಿಕತೆಯ ವಚನಗಳ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದಿದ ಮಹಾತ್ಮರು. ಜಾತಿಭೇದ, ಧರ್ಮಭೇದ, ಲಿಂಗ ತಾರತಮ್ಯ ಹಾಗೂ ಸಾಮಾಜಿಕ ಶೋಷಣೆಯ ವಿರುದ್ಧ ತಮ್ಮ ವಚನಗಳಲ್ಲಿ ಕಠೋರವಾಗಿ ಧ್ವನಿ ಎತ್ತಿದ್ದಾರೆ. ಈ ಕಾರಣಕ್ಕಾಗಿಯೇ ಅವರು ಶರಣರಲ್ಲೇ ಶ್ರೇಷ್ಠ ಶರಣರಾಗಿ ಗುರುತಿಸಿಕೊಂಡಿದ್ದಾರೆ ಎಂದರು.
ರಾಘವೇಂದ್ರ ಕೋಲ್ಕಾರ್ ವಕೀಲರು ಮಾತನಾಡಿದರು.
ಕಾರ್ಯಾಲಯದ ನೌಕರಾದ ಭೀಮರಾಯ ನಾಯಕ್, ಮೇಟಿ ಗೋವಿಂದ ನಾಯಕ್, ಶರಣಯ್ಯ ಸ್ವಾಮಿ ದೇವರೆಡ್ಡಿ, ಪ್ರವೀಣ್ ಕುಮಾರ್ ಯಡ್ರಾಮಿ, ಲಕ್ಷ್ಮಿ, ಪಾರ್ವತಿ, ಜ್ಯೋತಿ, ಕವಿತಾ, ಗಂಗಮ್ಮ, ಎಚ್. ಶಿವರಾಜ್, ರಾಕೇಶ್ ನಾಯಕ್, ಅಭಿಷೇಕ್ ಗೌಡ, ಮಹಾದೇವಪ್ಪ, ಮರಿಲಿಂಗ ರವಿಕುಮಾರ್ ಬಲ್ಲಿದ ಸೇರಿದಂತೆ ಸಂಘ ಸಂಸ್ಥೆಗಳ ಮುಖಂಡರು ಇತರರು ಉಪಸ್ಥಿತರಿದ್ದರು.